ಬಾಲಕನ ಜಿಮ್ನಾಸ್ಟಿಕ್ ಚಲನೆಗಳ ವಿಡಿಯೋ ವೈರಲ್​: ನೆಟ್ಟಿಗರು ಫಿದಾ

ಬಂಕುರಾ: ಪಶ್ಚಿಮ ಬಂಗಾಳದ ಬಂಕುರಾದಲ್ಲಿ ಜೂನಿಯರ್ “ಟೈಗರ್ ಶ್ರಾಫ್” ವಾಸಿಸುತ್ತಿದ್ದಾನೆ. ಪರಿಪೂರ್ಣವಾದ ಚಮತ್ಕಾರಿಕ ಚಲನೆಗಳೊಂದಿಗೆ ಜೂನಿಯರ್ “ಟೈಗರ್ ಶ್ರಾಫ್” ಎಲ್ಲರ ಗಮನ ಸೆಳೆಯುತ್ತಿದ್ದಾನೆ.

ಈ ಧೈರ್ಯಶಾಲಿ ಬಾಲಕ ತನ್ನ ಸ್ವಂತ ಪ್ರಯತ್ನದಿಂದ ಅಸಾಧ್ಯವಾದುದನ್ನು ಮಾಡಿದ್ದಾನೆ. ಐದನೇ ತರಗತಿ ವಿದ್ಯಾರ್ಥಿ ಮತ್ತು ಬಂಕುರಾದ ಕೇಶಿಯಾಕೋಲ್ ನಿವಾಸಿ ದೀಪ್ ಕುಮಾರ್ ಚೌಧರಿ ತರಬೇತಿ ಪಡೆಯದೇ ಜಿಮ್ನಾಸ್ಟಿಕ್ ಚಲನೆಗಳನ್ನು ಮಾಡಬಲ್ಲ.

ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಕನಸು ಹೊತ್ತಿರುವ ಈ ಬಾಲಕ, ಪ್ರತಿದಿನ ಮುಂಜಾನೆಯಿಂದ ಸೂರ್ಯ ತಲೆಯ ಮೇಲೆ ಏರುವವರೆಗೆ ಅಭ್ಯಾಸ ಮಾಡುತ್ತಾನೆ. ದೀಪ್​ನ ಪ್ರತಿಭೆ ಶಾಲೆಯ ಶಿಕ್ಷಕರ ಕಣ್ಣಿಗೆ ಬಿದ್ದಿದ್ದರಿಂದ ಅವರು ವಿಡಿಯೋ ಮಾಡಿ ಪೋಸ್ಟ್​ ಮಾಡಿದ್ದಾರೆ. ಅದೀಗ ವೈರಲ್​ ಆಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read