ಪೊಲೀಸ್ ವಶದಲ್ಲಿದ್ದ ಖಾತೆಗೇ ಕನ್ನ; 32 ಲಕ್ಷ ರೂ. ದೋಚಿದ್ದ ವಿವರ ಕೇಳಿದ್ರೆ ಶಾಕ್‌ ಆಗ್ತೀರಾ…!

ಸುಳ್ಳು ದಾಖಲೆಗಳನ್ನು ತೋರಿ ಹಿರಿಯ ಪೊಲೀಸ್ ಅಧಿಕಾರಿಯ ಸೋಗಿನಲ್ಲಿ ಖಾತೆಯೊಂದರಿಂದ 32 ಲಕ್ಷ ರೂ.ಗಳನ್ನು ದೋಚಿದ ಆರೋಪದ ಮೇಲೆ ಬ್ಯಾಂಕ್ ನೌಕರನೊಬ್ಬನನ್ನು ಬಂಧಿಸಲಾಗಿದ.

ಮುಂಬೈ ಮುಲುಂದ್‌ನಲ್ಲಿ ಈ ಘಟನೆ ಜರುಗಿದೆ. ಬ್ಯಾಂಕ್ ಆಫ್ ಬರೋಡಾದ ಔಟ್‌ಸೊರ್ಸಿಂಗ್‌ ಕೆಲಸ ಮಾಡುವ ವಿನೋದ್ ಕುಮಾರ್‌ ಎಂಬಾತನನ್ನು ಈ ಸಂಬಂಧ ಬಂಧಿಸಲಾಗಿದೆ.

ಜೂನ್ 14ರಂದು, ಹೊಸದಾಗಿ ಠಾಣೆಗೆ ಹಿರಿಯ ಇನ್ಸ್‌ಪೆಕ್ಟರ್‌ ಆಗಿ ಬಂದ ದತ್ತಾರಾಂ, ಪೇದೆ ಜಯಾನಂದ್ ರಾಣೆಗೆ ಕರೆ ಮಾಡಿ, ಈ ಹಿಂದೆ ಪೊಲೀಸರು ವಶಪಡಿಸಿಕೊಂಡಿರವ ಖಾತೆಗಳ ಪರಿಶೀಲನೆ ಮಾಡಲು ತಿಳಿಸಿದ್ದಾರೆ. ಈ ಸಂಬಂಧ ರೆಜಿಸ್ಟರ್‌ ಪರಿಶೀಲನೆ ಮಾಡಲು ಮುಂದಾದಾಗ 2004ರಲ್ಲಿ ದೇನಾ ಬ್ಯಾಂಕ್‌ನಲ್ಲಿ (ಈಗ ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನವಾಗಿದೆ) ಖಾತೆಯೊಂದರಲ್ಲಿ ಕೇವಲ 32 ರೂ.ಗಳು ಇದ್ದಿದ್ದನ್ನು ಕಂಡು ರಾಣೆ ದಂಗು ಬಡಿದಿದ್ದಾರೆ. 2004ರಲ್ಲಿ ವಂಚನೆ ಪ್ರಕರಣದಲ್ಲಿ ಆಪಾದಿತನಿಂದ ವಶಕ್ಕೆ ಪಡೆದಿದ್ದ ಈ ಖಾತೆಯಲ್ಲಿ 16.80 ಲಕ್ಷ ರೂ. ಗಳಿದ್ದಿದ್ದು, ಕಳೆದ ವರ್ಷ ಪಾಸ್‌ಬುಕ್ ಪರಿಷ್ಕರಣೆ ಮಾಡಿದ ವೇಳೆ 32 ಲಕ್ಷ ರೂ. ಗಳಷ್ಟಿತ್ತು.

ಹಣ ಹಿಂಪಡೆದಿರುವ ವಿಚಾರ ತಿಳಿಯುತ್ತಲೇ ರಾಣೆ ತಮ್ಮ ಹಿರಿಯ ಅಧಿಕಾರಿಗೆ ತಿಳಿಸಿದ್ದಾರೆ. ಕೂಡಲೇ ತನಿಖೆಗೆ ಮುಂದಾದ ಹಿರಿಯ ನಿರೀಕ್ಷಕರಿಗೆ, ಠಾಣೆಯ ಹಿಂದಿನ ಇನ್ಸ್‌ಪೆಕ್ಟರ್‌ ಲಕ್ಷ್ಮಣ್ ಖಾರ್ಪಾಡೇ ಹೆಸರಿನಲ್ಲಿದ್ದ ಈ ಖಾತೆಗೆ ಮಾರ್ಚ್ 28, 2023ರಲ್ಲಿ ಕೆವೈಸಿ ದಾಖಲೆಗಳನ್ನು ಸಲ್ಲಿಸಿ ಮರುಚಾಲನೆ ನೀಡಲಾಗಿದೆ ಎಂದು ತಿಳಿದು ಬಂದಿದೆ. ಈ ಖಾತೆಯನ್ನು ಪೊಲೀಸರು ಇದಕ್ಕೂ ಮುನ್ನ ನಿಷ್ಕ್ರಿಯಗೊಳಿಸಿದ್ದರು.

ಮೇ 5ರಿಂದ 16ರ ನಡುವೆ ಇದೇ ಖಾತೆಯಿಂದ 33.26 ಲಕ್ಷ ರೂ.ಗಳನ್ನು ವರ್ಗಾವಣೆ ಮಾಡಿಕೊಂಡಿರುವ ವಿಚಾರವು ಬ್ಯಾಂಕ್ ಸ್ಟೇಟ್ಮೆಂಟ್‌ನಿಂದ ತಿಳಿದು ಬಂದಿದೆ.

ಹಣ ಎಲ್ಲಿಗೆ ವರ್ಗಾವಣೆಗೊಂಡಿದೆ ಎಂದು ಪರಿಶೀಲನೆ ಮಾಡಿದಾಗ, ಎಲ್ ಡಿ ಖಾರ್ಪಡೆ ಹೆಸರಿನ ವ್ಯಕ್ತಿಯೊಬ್ಬರು ಬ್ಯಾಂಕಿಗೆ ಬಂದು ಚೆಕ್ ಮೂಲಕ ಹಣವನ್ನು ಹಿಂಪಡೆಯುತ್ತಿರುವ ವಿಚಾರ ಬ್ಯಾಂಕ್ ಅಧಿಕಾರಿಗಳಿಂದ ತಿಳಿದು ಬಂದಿದೆ. ಚೆಂಬೂರಿನಲ್ಲಿರುವ ಸ್ಮಾಲ್ ಫೈನಾನ್ಸ್‌ ಬ್ಯಾಂಕ್‌ನಲ್ಲಿ ಯುವಿ ಫೈನಾನ್ಸ್ ಹೆಸರಿನ ಖಾತೆಗೆ ಹಣ ವರ್ಗಾವಣೆಯಾಗಿರುವುದು ತಿಳಿದು ಬಂದಿದೆ.

ತಿತ್ವಾಲಾದ ನಿವಾಸಿ ವಿನೀತಾ ಸಿಂಗ್ ಹೆಸರಿನ ಮಹಿಳೆಯೊಬ್ಬರು ಈ ಖಾತೆ ತೆರೆದಿದ್ದರು. ನಾಲ್ಕು ಲಕ್ಷ ರೂ.ಗಳಷ್ಟಿದ್ದ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗಿದೆ. ಈ ಖಾತೆಯಿಂದ ವಿನೋದ್ ಸಿಂಗ್ ಎಂಬಾತನಿಗೆ ಹಣದ ವರ್ಗಾವಣೆಯಾಗಿದೆ ಎಂದು ಪೊಲೀಸರು ತಿಳಿದುಕೊಂಡಿದ್ದಾರೆ. ಕೂಡಲೇ ವಿನೋದ್ ಹಾಗೂ ಇತರರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ ಪೊಲೀಸರು.

ಖಾಸಗಿ ಕಂಪನಿಯೊಂದರಲ್ಲಿ ಮುಲುಂದ್‌ನಲ್ಲಿ ಕೆಲಸ ಮಾಡುತ್ತಿದ್ದ ವಿನೋದ್ ತನ್ನ ಔಟ್‌ಸೋರ್ಸಿಂಗ್ ಕೆಲಸದ ಮೂಲಕ ಬ್ಯಾಂಕಿನ ಡೇಟಾಬೇಸ್‌ಗೆ ಅಕ್ಸೆಸ್ ಪಡೆದುಕೊಂಡಿದ್ದ. ಈ ಮೂಲಕ ನಿಷ್ಕ್ರಿಯಗೊಂಡಿದ್ದ ಬ್ಯಾಂಕ್ ಖಾತೆಗಳ ವಿವರಗಳನ್ನು ಪಡೆದುಕೊಂಡ ವಿನೋದ್, ಪಾನ್ ಹಾಗೂ ಆಧಾರ್‌ ಕಾರ್ಡ್‌ಗಳನ್ನು ಬಳಸಿಕೊಂಡು ಎಸ್‌ ಐ ಲಕ್ಷ್ಮಣ್ ಖಾರ್ಪಡೆ ಹೆಸರಿನಲ್ಲಿ ಖಾತೆ ತೆರೆದು, ದಾಖಲೆಗಳ ಮೇಲೆ ತನ್ನ ಫೋಟೋ ಹಾಕಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ನಾವ್ಘಾರ್‌ ಪೊಲೀಸ್ ಠಾಣೆಗೆ ಈ ಹಿಂದೆ ವರ್ಗಾವಣೆಯಾಗಿ ಬಂದಿದ್ದ 10 ಇನ್ಸ್‌ಪೆಕ್ಟರ್‌ಗಳು ಆರ್ಥಿಕ ವಂಚೆನ ಪ್ರಕರಣ ವಶಕ್ಕೆ ಪಡೆಯಲಾಗಿದ್ದ ದಾಖಲೆಗಳ ಮೇಲೆ ನಿಗಾ ಇಡದೇ ಇದ್ದ ಕಾರಣ ಹೀಗೆ ಆಗಿದೆ ಎಂದು ದೂರು ಕೊಟ್ಟು ವಿಚಾರಣೆಗೆ ಮುಂದಾದ ಅಧಿಕಾರಿಗಳು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read