ಗ್ರಾಹಕರೇ ಗಮನಿಸಿ: ಇಂದು, ನಾಳೆ ಎಲ್ಐಸಿ, ಬ್ಯಾಂಕ್ ಪೂರ್ಣ ದಿನ ಸೇವೆ

ನವದೆಹಲಿ: ಪ್ರಸಕ್ತ ಹಣಕಾಸು ವರ್ಷ ಅಂತ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಮಾರ್ಚ್ 30 ಮತ್ತು 31 ರಂದು ಎಲ್ಐಸಿ ಮತ್ತು ಬ್ಯಾಂಕುಗಳು ಪೂರ್ಣ ದಿನ ಸೇವೆ ನೀಡಲಿವೆ.

ಭಾರತಿಯ ಜೀವ ವಿಮಾ ನಿಗಮ ದೇಶಾದ್ಯಂತ ವಾರಾಂತ್ಯ ದಿನಗಳಾದ ಮಾರ್ಚ್ 30ರ ಶನಿವಾರ ಮತ್ತು 31ರ ಭಾನುವಾರ ಗ್ರಾಹಕರಿಗೆ ಸೇವೆ ನೀಡಲು ಕಚೇರಿಗಳನ್ನು ತೆರೆಯಲು ತೀರ್ಮಾನಿಸಿದೆ. ಹಣಕಾಸು ವರ್ಷ ಅಂತ್ಯ ಹಿನ್ನೆಲೆ ತೆರಿಗೆ ಉಳಿಕೆ ಚಟುವಟಿಕೆ ಪೂರ್ಣಗೊಳಿಸಿಕೊಳ್ಳಲು ತೆರಿಗೆದಾರರಿಗೆ ಅನುಕೂಲ ಕಲ್ಪಿಸಲು ಎಲ್ಐಸಿ ನಿರ್ಧಾರ ಕೈಗೊಂಡಿದೆ.

ಹಣಕಾಸಿನ ವರ್ಷಾಂತ್ಯದಲ್ಲಿ ವಿಮೆದಾರರಿಗೆ ಯಾವುದೇ ಆರ್ಥಿಕ ವಹಿವಾಟಿನ ತೊಂದರೆಯಾಗದಂತೆ ವ್ಯಾಪ್ತಿಯ ಎಲ್ಲಾ ಕಚೇರಿಗಳು ಮಾರ್ಚ್ 30 ಮತ್ತು 31 ರಂದು ಸಾಮಾನ್ಯ ಉದ್ಯೋಗಿಕ ಕೆಲಸ ಅವಧಿಯಂತೆ ಕಾರ್ಯನಿರ್ವಹಿಸಬೇಕು ಎಂದು ತಿಳಿಸಲಾಗಿದೆ.

ಸರ್ಕಾರದೊಂದಿಗೆ ವ್ಯವಹಾರ ಹೊಂದಿರುವ ಸೀಮಿತ ಶಾಖೆಗಳು ಭಾನುವಾರ ಕೂಡ ತೆರೆದಿರುತ್ತವೆ ಎಂದು ಬ್ಯಾಂಕುಗಳು ಈಗಾಗಲೇ ಘೋಷಿಸಿವೆ. ತೆರಿಗೆದಾರರಿಗೆ ಅನುಕೂಲವಾಗುವಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read