ಢಾಕಾ: ಬಾಂಗ್ಲಾದೇಶದಲ್ಲಿ ಸಾರ್ವತ್ರಿಕ ಚುನಾವಣೆಗಳು ಏಪ್ರಿಲ್ 2026 ರಲ್ಲಿ ನಡೆಯಲಿದೆ ಎಂದು ಬಾಂಗ್ಲಾದೇಶದ ಮಧ್ಯಂತರ ನಾಯಕ ಮುಹಮ್ಮದ್ ಯೂನಸ್ ಶುಕ್ರವಾರ ಘೋಷಿಸಿದ್ದಾರೆ.
ಕಳೆದ ವರ್ಷ ಸಾಮೂಹಿಕ ದಂಗೆಯು ಸರ್ಕಾರವನ್ನು ಉರುಳಿಸಿದ ನಂತರ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ, ಇದರ ಪರಿಣಾಮವಾಗಿ ಶೇಖ್ ಹಸೀನಾ ದೇಶವನ್ನು ತೊರೆದರು.
“2026 ರ ಏಪ್ರಿಲ್ ಮೊದಲಾರ್ಧದಲ್ಲಿ ಯಾವುದೇ ದಿನದಂದು ಚುನಾವಣೆ ನಡೆಯಲಿದೆ ಎಂದು ನಾನು ದೇಶದ ನಾಗರಿಕರಿಗೆ ಘೋಷಿಸುತ್ತಿದ್ದೇನೆ” ಎಂದು ಮುಹಮ್ಮದ್ ಯೂನಸ್ ಹೇಳಿದರು.
ಶೇಖ್ ಹಸೀನಾ ಅವರ ರಾಜೀನಾಮೆಗೆ ವ್ಯಾಪಕ ಪ್ರತಿಭಟನೆಗಳು ಕಾರಣವಾದ ಹಿನ್ನೆಲೆ ಕಳೆದ ವರ್ಷ ಬಾಂಗ್ಲಾದೇಶವು ರಾಜಕೀಯ ದಂಗೆ ಕಂಡಿತು. ಹಸೀನಾ ಅವರು ಪ್ರಸ್ತುತ ಭಾರತದಲ್ಲಿ ಗಡಿಪಾರು ಆಗಿದ್ದಾರೆ.
ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷ(ಬಿಎನ್‌ಪಿ), ಡಿಸೆಂಬರ್ 2025 ರೊಳಗೆ ರಾಷ್ಟ್ರೀಯ ಚುನಾವಣೆಗಳನ್ನು ನಡೆಸುವಂತೆ ಮತ್ತು “ವಿವಾದಾತ್ಮಕ ಸಲಹೆಗಾರರನ್ನು” ತೆಗೆದುಹಾಕುವ ಮೂಲಕ ಅವರ ಸಂಪುಟವನ್ನು ಪುನರ್ರಚಿಸುವಂತೆ ಮುಹಮ್ಮದ್ ಯೂನಸ್ ಅವರನ್ನು ಕೇಳಿಕೊಂಡಿದೆ.