ಸೆಲ್ಫಿ ಕೇಳಿದ ಅಭಿಮಾನಿಯ ಕುತ್ತಿಗೆ ಹಿಡಿದು ದೂಡಿದ ಖ್ಯಾತ ಕ್ರಿಕೆಟಿಗ; ವಿಡಿಯೋ ವೈರಲ್

ಕ್ರಿಕೆಟ್ ಮತ್ತು ಕ್ರಿಕೆಟಿಗರ ಮೇಲೆ ಅಭಿಮಾನಿಗಳು ಸಾಕಷ್ಟು ಪ್ರೀತಿ ಇಟ್ಟುಕೊಂಡಿರುತ್ತಾರೆ. ತಮ್ಮ ನೆಚ್ಚಿನ ಕ್ರಿಕೆಟಿಗನನ್ನು ಹತ್ತಿರದಿಂದ ನೋಡುವ , ಫೋಟೋ ತೆಗೆದುಕೊಳ್ಳುವ ಆಸೆ ಸಾಮಾನ್ಯ. ಇಂತಹ ಆಸೆ ಹೊಂದಿದ್ದ ಅಭಿಮಾನಿಯೊಬ್ಬ ಬಾಂಗ್ಲಾದೇಶದ ಕ್ರಿಕೆಟಿಗ ಶಕೀಬ್ ಅಲ್ ಹಸನ್ ನನ್ನು ಸೆಲ್ಫಿಗಾಗಿ ವಿನಂತಿಸಿದಾಗ ನಡೆದಿದ್ದೇ ಬೇರೆ. ಸೆಲ್ಫಿ ಕೇಳಿದ ವ್ಯಕ್ತಿಯ ಕುತ್ತಿಗೆಯನ್ನು ಹಿಡಿದು ಹೊರಹೋಗುವಂತೆ ಶಕೀಬ್ ಅಲ್ ಹಸನ್ ದೂಡಿದ್ದಾರೆ.

ಈ ವಿಡಿಯೋ ವೈರಲ್ ಆಗಿದೆ. ಶಕೀಬ್ ಅಲ್ ಹಸನ್ ತನ್ನ ಸಹೋದ್ಯೋಗಿಗಳೊಂದಿಗೆ ಮಾತನಾಡುತ್ತಿದ್ದಾಗ ವ್ಯಕ್ತಿಯೊಬ್ಬ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಾ ಫೋಟೋಗೆ ಪೋಸ್ ನೀಡುವಂತೆ ಕೇಳುತ್ತಾನೆ. ಈ ವೇಳೆ ಹಸನ್ ಫೋನ್ ಪಕ್ಕಕ್ಕೆ ಸರಿಸಿ ಆತನನ್ನು ದೂರ ಹೋಗುವಂತೆ ಸೂಚಿಸುತ್ತಾರೆ. ಆದರೆ ವ್ಯಕ್ತಿ ಫೋಟೋಗಾಗಿ ನಿರಂತರ ಮನವಿ ಮಾಡುತ್ತಾ ಹಠ ಹಿಡಿದಾಗ ಹಸನ್ ಆತನ ಕುತ್ತಿಗೆಯನ್ನು ಹಿಡಿದು ಮೈದಾನದಿಂದ ತಳ್ಳುತ್ತಾರೆ.

ಆ ವ್ಯಕ್ತಿ ಇದರಿಂದ ನೊಂದುಕೊಂಡು ಮೈದಾನದ ಹೊರಗಡೆ ಬೇಸರದಿಂದ ಕುಳಿತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಂಚಲನ ಮೂಡಿಸಿದ್ದು ಶಕೀಬ್ ಅಲ್ ಹಸನ್ ನಡೆಯನ್ನು ಕೆಲವರು ಟೀಕಿಸಿದರೆ, ಫೋಟೋ ತೆಗೆದುಕೊಳ್ಳಬೇಡ ಎಂದು ಹೇಳಿದ ಮೇಲೂ ವ್ಯಕ್ತಿ ಹಠದ ಹಿಡಿದ ಬಗ್ಗೆಯೂ ಹಲವರು ಟೀಕಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read