ಹೈದರಾಬಾದ್: ದಿತ್ವಾ ಚಂಡ ಮಾರುತದ ಅಬ್ಬರಕ್ಕೆ ಮೀನುಗಾರರ ದೋಣಿ ದಿಕ್ಕು ತಪ್ಪಿದ ಪರಿಣಾಮ ಸಂಕಷ್ಟಕ್ಕೀಡಾಗಿದ್ದ ಬಾಂಗ್ಲಾ ಮೀನುಗಾರರು ಆಂಧ್ರಪ್ರದೇಶದ ಶ್ರೀಕಾಕುಳಂಗೆ ಬಂದಿರಿಗೆ ಬಂದಿರುವ ಘಟನೆ ನಡೆದಿದೆ.
ಬಾಂಗ್ಲಾಅದೇಶದ ಧೋಲಾ ಜಿಲ್ಲೆಯ 13 ಮೀನುಗಾರರು ಮೀನುಗಾರಿಕೆಗೆ ತೆರಳಿದ್ದ ವೇಳೆ ಸಮುದ್ರ ಮಧ್ಯೆ ಬೋಟ್ ಕೆಟ್ಟು ಹೋಗಿದ್ದರಿಂದ ಶ್ರೀಕಾಕುಳಂಗೆ ಬಂದು ತಲುಪಿದ್ದಾರೆ. ನವೆಂಬರ್ 10ರಂದು ಧೋಲಾದಿಂದ ಮೀನುಗಾರಿಕೆಗೆಂದು ಹೊರಟಿದ್ದರು. ಕಳೆದ ಹಲವು ದಿನಗಳಿಂದ ಬೀಸುತ್ತಿದ್ದ ಬಿರುಗಾಳಿಯಿಂದಾಗಿ ಬೋಟ್ ಭಾರತದ ಜಲಸೀಮೆಗೆ ನೂಕಿದೆ. ಇದರಿಂದಾಗಿ ಬೋಟ್ ಸಮುದ್ರಮಧ್ಯೆ ಕೆಟ್ಟು ನಿಂತಿದೆ. ಇದರಿಂದಾಗಿ ಶ್ರೀಕಾಕುಳಂ ಬಳಿ ಬಂದಿದ್ದಾಗಿ ಮೀನುಗಾರರು ತಿಳಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೀನುಗಾರರ ಬಳಿ ಕೇವಲ ಏಳುದಿನಗಳಿಗಾಗುವಷ್ಟು ಮಾತ್ರ ಆಹಾರವಿತ್ತಂತೆ. ಉಳಿದ ದಿನವನ್ನು ಬರಿ ನೀರು ಸೇವಿಸಿ ಬದಿಕಿರುವುದಾಗಿ ಹೇಳಿಕೊಂಡಿದ್ದಾರೆ. ವಿದೇಶಿ ದೋಣಿ ಕಂಡುಬಂದ ಹಿನ್ನಲೆಯಲ್ಲಿ ಸ್ಥಳೀಯ ಮೀನುಗಾರರು ಪೊಲೀಸರುಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಮೀನುಗಾರರನ್ನು ಹಾಗೂ ಬೋಟ್ ವಶಕ್ಕೆ ಪಡೆದು ಬಾಂಗ್ಲಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
