ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ರಿಜಿಸ್ಟರ್ ಹುದ್ದೆ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೋರ್ವ ನಿವೃತ್ತ ಪ್ರೊಫೇಸರ್ ಗೆ 35 ಲಕ್ಷ ರೂಪಾಯಿ ವಂಚಿಸಿರುವ ಘಟನೆ ನಡೆದಿದೆ.
ಪರಿಸರ ವಿಜ್ಞಾನ ವಿಭಾಗದ ನಿವೃತ್ತ ಪ್ರೊಫೇಸರ್ ಸೋಮಶೇಖರ್ ಎಂಬುವವರಿಗೆ ರವಿಕುಮರ್ ಎಂಬಾತ ವಂಚಿಸಿದ್ದು, ಈ ಕುರಿತು ಗೋವಿಂದ ರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೋಮಶೇಖರ್ ಅವರು ಬೆಂಗಳೂರು ವಿವಿ ಜ್ಞಾನಭಾರತಿ ಕ್ಯಾಂಪಸ್ ನಲ್ಲಿ ಪರಿಸರ ವಿಜ್ಞಾನ ವಿಭಾಗದಲ್ಲಿ ಪ್ರೊಫೇಸರ್ ಆಗಿದ್ದವರು 2019ರಲ್ಲಿ ನಿವೃತ್ತಿಯಾಗಿದ್ದರು. ವಂಚಕ ರವಿಕುಮಾರ್ 2015ರಲ್ಲಿ ಸೋಮಶೇಖರ್ ಅವರಿಗೆ ಪರಿಚಯವಾಗಿದ್ದಾನೆ. ನನಗೆ ಸರ್ಕಾರದ ಹಲವು ಪ್ರಭಾವಿ ವ್ಯಕ್ತಿಗಳ ಪರಿಚಯವಿದೆ. ಜ್ಞಾನಭಾರತಿಯಲ್ಲಿ ರಿಜಿಸ್ಟರ್ ಹುದ್ದೆ ಕೊಡಿಸುತ್ತೇನೆ ಎಂದು ಹೇಳಿದ್ದಾನೆ. ಆತನ ಮತು ನಂಬಿದ ಪ್ರೊಫೇಸರ್ ಒಪ್ಪಿಕೊಂಡಿದ್ದಾರೆ. ವಂಚಕ 50 ಲಕ್ಷ ಹಣ ಕೇಳಿದ್ದ. ಬಳಿಕ ಮಾತುಕತೆ ಬಳಿಕ 35 ಲಕ್ಷಕ್ಕೆ ಅಂತಿಮವಾಗಿದೆ. ಹಂತ ಹಂತವಾಗಿ ಹಣ ಪಡೆದ ವಂಚಕ ಕೆಲಸ ಮಾಡಿಕೊಟ್ಟಿಲ್ಲ. ಹಲವು ವರ್ಷಕಳೆದಿದೆ. ಅಷ್ಟರಲ್ಲಿ ಸೋಮಶೇಖರ್ ನಿವೃತ್ತಿಯಾಗಿದ್ದಾರೆ. ಹಣ ವಾಪಾಸ್ ಕೇಳಿದರೆ ನಾಳೆ ಕೊಡ್ತೀನಿ ಎಂದು ಸತಾಯಿಸುತ್ತ ಕಾಲ ಕಳೆದಿದ್ದಾನೆ.
ಇದೀಗ ಗೋವಿಂದರಾಜನಗರ ಠಾಣೆಯಲ್ಲಿ ವಂಚಕನ ವಿರುದ್ಧ ಪ್ರಕರಣ ದಾಖಲಾಗಿದೆ.