ಇಂದು ‘ಬೆಂಗಳೂರು’ ಬಂದ್ : ಏನಿರುತ್ತೆ, ಏನಿರಲ್ಲ .? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಬೆಂಗಳೂರು : ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸೆ.11 ರಂದು ಇಂದು ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ಬಂದ್ ಗೆ ಕರೆ ನೀಡಿದ್ದು, ಖಾಸಗಿ ವಾಹನಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ.

ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟದ ಬಂದ್ಗೆ 32 ಸಂಘಟನೆಗಳು ಬೆಂಬಲ ನೀಡಿವೆ. ಭಾನುವಾರ ರಾತ್ರಿಯಿಂದಲೇ ಬಂದ್ ಆಗಿದ್ದು, ಆಟೋ, ಟ್ಯಾಕ್ಸಿಗಳು ಇಲ್ಲದೆ ಉದ್ಯಾನ ನಗರಿಯ ಜನರು ಸಂಚಾರ ನಡೆಸಬೇಕಿದೆ.
ಟ್ಯಾಕ್ಸಿ, ಆಟೋ, ಮ್ಯಾಕ್ಸಿ ಕ್ಯಾಬ್, ಖಾಸಗಿ ಬಸ್ ಗಳು ಸಂಪೂರ್ಣ ಬಂದ್ ಆಗಲಿದ್ದು, ಶಾಲಾ ವಾಹನಗಳು ಕೂಡ ಬಂದ್ ಆಗಲಿದೆ. ಆಟೋ, ಟ್ಯಾಕ್ಸಿ, ಖಾಸಗಿ ಬಸ್, ಸ್ಕೂಲ್ ಬಸ್ ಗಳನ್ನು ರಸ್ತೆಗೆ ಇಳಿಸದಿರಲು ಖಾಸಗಿ ಸಾರಿಗೆ ಒಕ್ಕೂಟ ನಿರ್ಧರಿಸಿದೆ. ಈ ಹಿನ್ನೆಲೆ ಸೆ.11 ರಂದು ಪ್ರಯಾಣಿಕರಿಗೆ ತೊಂದರೆಯಾಗುವ ಸಾಧ್ಯತೆಯಿದೆ.

ಸರ್ಕಾರಿ ಬಸ್ ಗಳಾದ ಬಿಎಂಟಿಸಿ ಹಾಗೂ ಕೆಎಸ್ ಆರ್ ಟಿಸಿ  ಎಂದಿನಂತೆ ಸಂಚಾರ ಮಾಡಲಿದ್ದು, ಪ್ರಯಾಣಿಕರಿಗೆ ತೊಂದರೆ ಇರುವುದಿಲ್ಲ. ಆದರೆ ಆಟೋ, ಟ್ಯಾಕ್ಸಿ, ಕ್ಯಾಬ್ ಗಳು ಮಾತ್ರ ಸಿಗೋದಿಲ್ಲ. ಕರ್ನಾಟಕ ಖಾಸಗಿ ಶಾಲಾ ವಾಹನಗಳ ಯೂನಿಯನ್ ವತಿಯಿಂದ ಖಾಸಗಿ ಸಾರಿಗೆ ಮುಷ್ಕರಕ್ಕೆ ಬೆಂಬಲ ನೀಡಿದ್ದು, ಈಗಾಗಲೇ ಅನೇಕ ಶಾಲೆಗಳು ರಜೆ ಘೋಷಣೆ ಮಾಡಿವೆ.

ಬೆಂಗಳೂರಿನಲ್ಲಿ ಏನಿರುತ್ತೆ, ಏನಿರಲ್ಲ ಎಂಬುದನ್ನು ನೋಡುವುದಾದರೆ..ಇಲ್ಲಿದೆ ಮಾಹಿತಿ

ಏನಿರಲ್ಲ…?
1) ಏರ್ ಪೋರ್ಟ್ ಟ್ಯಾಕ್ಸಿ ಸಂಪೂರ್ಣ ಸ್ಥಗಿತ
2)ನಿಮ್ಮ ಮಕ್ಕಳನ್ನು ಶಾಲೆಗೆ ಕರೆದುಕೊಳ್ಳಲು ಖಾಸಗಿ ಬಸ್ ಬರಲ್ಲ
3)ಓಲಾ, ಊಬರ್, ಟ್ಯಾಕ್ಸಿ ಬಂದ್
4)ಕಾರ್ಪೊರೇಟ್ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿರುವ ಬಸ್ ಗಳಿಂದಲೂ ಬೆಂಬಲ
5)ಗೂಡ್ಸ್ ವಾಹನಗಳು ಬಂದ್ ಆಗುವ ಸಾಧ್ಯತೆ
6)ನಗರದಲ್ಲಿ 3 ಲಕ್ಷ ಆಟೋ, 1.5 ಲಕ್ಷ ಟ್ಯಾಕ್ಸಿ, 20 ಸಾವಿರ ಗೂಡ್ಸ್ ವಾಹನಗಳು ಬಂದ್
7)5 ಸಾವಿರಕ್ಕೂ ಹೆಚ್ಚು ಖಾಸಗಿ ಶಾಲಾ ವಾಹನಗಳ ಸಂಚಾರ ಸ್ಥಗಿತ
8)80 ಸಾವಿರ ಸಿಟಿ ಟ್ಯಾಕ್ಸಿ, ಕಾರ್ಪೊರೇಟ್ ಕಂಪನಿಗಳ ಬಸ್ ಸ್ಥಗಿತವಾಗಲಿದೆ.
9) 32 ಸಂಘಟನೆಯಡಿ 7 ಲಕ್ಷಕ್ಕೂ ಹೆಚ್ಚು ಖಾಸಗಿ ವಾಹನಗಳು ಬಂದ್

ಏನಿರುತ್ತೆ
1) ತುರ್ತು ಸೇವೆಗಳು
2)ಆಂಬ್ಯುಲೆನ್ಸ್ ಗಳು , ಫಾರ್ಮಾ ವಾಹನಗಳು ಮತ್ತು ಇತರ ಪ್ರಮುಖ ಸರಕು ಸಾಗಿಸುವ ವಾಹನಗಳಂತಹ ಎಲ್ಲಾ ತುರ್ತು ಸೇವೆಗೆ ಸಂಬಂಧಿಸಿದ ವಾಹನಗಳು ಕಾರ್ಯನಿರ್ವಹಿಸುತ್ತವೆ.
3) ಆಹಾರ ಮತ್ತು ವಿತರಣಾ ವಾಹನಗಳು : ಆಹಾರ, ದಿನಸಿ ಮತ್ತು ಇತರ ದೈನಂದಿನ ಅಗತ್ಯ ಸಾರಿಗೆಯನ್ನು ನಿಲ್ಲಿಸಲಾಗುವುದಿಲ್ಲ ಮತ್ತು ಅವು ಎಂದಿನಂತೆ ಕಾರ್ಯನಿರ್ವಹಿಸುತ್ತವೆ.
ಸಾರ್ವಜನಿಕ ಸಾರಿಗೆ.
ಬಿಎಂಟಿಸಿ ಸೋಮವಾರ ಹೆಚ್ಚುವರಿ ಬಸ್ಸುಗಳನ್ನು ಓಡಿಸಲು ಯೋಜಿಸುತ್ತಿದೆ.
ಬಿಎಂಟಿಸಿ ಬಸ್ಸುಗಳು ಮತ್ತು ಮೆಟ್ರೋ ರೈಲುಗಳು ಸೇರಿದಂತೆ ಎಲ್ಲಾ ಸಾರ್ವಜನಿಕ ಸಾರಿಗೆ ಯಾವುದೇ ಅಡೆತಡೆಗಳಿಲ್ಲದೆ ಎಂದಿನಂತೆ ಕಾರ್ಯನಿರ್ವಹಿಸುತ್ತದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read