BIG NEWS: ಬಂಡೀಪುರದಲ್ಲಿ ಹೊಸ ವರ್ಷಾಚರಣೆಗೆ ಅರಣ್ಯ ಇಲಾಖೆ ಬ್ರೇಕ್

ಚಾಮರಾಜನಗರ: ಹೊಸ ವರ್ಷಾಚರಣೆಗೆ ಕ್ಷಣಗಣನೆ ಆರಂಭವಾಗಿದೆ. ಕೆಲ ಸಮಯದಲ್ಲೇ 2023 ಮುಗಿದು 2024 ಹೊಸ ವರ್ಷಕ್ಕೆ ಕಾಲಿಡಲಿದ್ದೇವೆ. ಹೊಸ ವರ್ಷವನ್ನು ಸ್ವಾಗತಿಸುವ ನಿಟ್ಟಿನಲ್ಲಿ ಜನರು ಬೇರೆ ಬೇರೆ ಊರುಗಳಿಗೆ ತೆರಳುವುದು ಸಹಜ. ಆದರೆ ಈ ಬಾರಿ ಹೊಸ ವರ್ಷಾಚರಣೆಗೆ ಬಂಡೀಪುರ ಅರಣ್ಯ ಇಲಾಖೆ ಬ್ರೇಕ್ ಹಾಕಿದೆ.

ಬಂಡೀಪುರದ ವಸತಿ ಗೃಹ, ಕಾಟೇಜ್ ಗಳಲ್ಲಿ ನಿರ್ಬಂಧ ವಿಧಿಸಲಾಗಿದೆ. ಬಂಡೀಪುರದ ಖಾಸಗಿ ರೆಸಾರ್ಟ್ ಗಳಲ್ಲಿಯೂ ಮೂಜು-ಮಸ್ತಿಗೆ ಯಾವುದೇ ಅವಕಾಶವಿಲ್ಲ.

ಇಂದು ಹಾಗೂ ನಾಳೆ ಬಂಡೀಪುರದಲ್ಲಿ ಸಫಾರಿಗೆ ಅವಕಾಶವಿದೆ. ಆದರೆ ಅರಣ್ಯ ಇಲಾಖೆಯ ವಸತಿಗೃಹ, ರೆಸಾರ್ಟ್ ಗಳಿಗೆ ಪ್ರವೇಶ ಇಲ್ಲ. ಯಾವುದೇ ತೆರನಾದ ಮೋಜು-ಮಸ್ತಿ, ಕಲರ್ ಲೈಟಿಂಗ್ಸ್ ಹಾಕುವಂತಿಲ್ಲ ಎಂದು ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಕುಮಾರ್ ತಿಳಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read