ಬಾಳೆಹಣ್ಣಿನ ʼಫೇಸ್ ಪ್ಯಾಕ್‌ʼ ಹೆಚ್ಚಿಸುತ್ತೆ ತ್ವಚೆ ಸೌಂದರ್ಯ

ಮನೆಯಲ್ಲಿಯೇ ಸೌಂದರ್ಯ ಹೆಚ್ಚಿಸಿಕೊಳ್ಳಲು ಹಣ್ಣು ಬಳಸುವುದು ಸುಲಭವಾದ ಮಾರ್ಗ. ಬಾಳೆ ಹಣ್ಣು ಕೂಡ ಸೌಂದರ್ಯವರ್ಧಕ. ತಿನ್ನಲು ಮಾತ್ರವಲ್ಲ ಬಾಳೆ ಹಣ್ಣಿನ ಮೂಲಕ ಫೇಶಿಯಲ್ ಕೂಡ ಮಾಡಬಹುದು.

ಫೇಸ್ ಪ್ಯಾಕ್ ತಯಾರಿಸಲು ಬೇಕಾಗುವ ವಸ್ತು :  ಮಾಗಿದ ಬಾಳೆಹಣ್ಣು – 1

ಜೇನುತುಪ್ಪ – 2 ಟೀ ಚಮಚ

ಅಲೋವೆರಾ ಜೆಲ್ – 1 ಟೀಸ್ಪೂನ್

ತೆಂಗಿನ ಎಣ್ಣೆ – 1 ಚಮಚ

ಮಾಡುವ ವಿಧಾನ : ಎಲ್ಲವನ್ನೂ ಮಿಕ್ಸಿಗೆ ಹಾಕಿ ರುಬ್ಬಿ ಅದನ್ನು ಬೇರೆ ಬಟ್ಟಲಿಗೆ ತೆಗೆಯಿರಿ. ಬೇಕಾದಲ್ಲಿ  ಮೊಸರನ್ನು ಕೂಡ ಬಳಸಬಹುದು. ಕೈಗೆ ಪೇಸ್ಟ್ ತೆಗೆದುಕೊಂಡು ನಿಧಾನವಾಗಿ ಹಚ್ಚಿ. ನಂತ್ರ ನಿಮ್ಮ ಮುಖವನ್ನು ವೃತ್ತಾಕಾರದಲ್ಲಿ ಮಸಾಜ್ ಮಾಡಿ. ಸುಮಾರು 5 ರಿಂದ 7 ನಿಮಿಷಗಳ ಕಾಲ ಮಸಾಜ್ ಮಾಡಿದ ನಂತರ ಅದನ್ನು 10 ನಿಮಿಷಗಳ ಹಾಗೆ ಬಿಡಿ. ನಂತ್ರ ಶುದ್ಧ ನೀರಿನಿಂದ ಮುಖ ತೊಳೆಯಿರಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read