‘ಇದು ಬಜರಂಗದಳದವರ ಮನೆ, ಕಾಂಗ್ರೆಸ್ ನವರು ಮತ ಕೇಳುವಂತಿಲ್ಲ; ಬಂದ್ರೆ ನಾಯಿ ಬಿಡುತ್ತೇವೆ’ ಎಂದು ಎಚ್ಚರಿಕೆ

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಣಕಲ್ ಹೋಬಳಿಯ ಗುಡ್ಡಟ್ಟಿ ಗ್ರಾಮದಲ್ಲಿ ಬಜರಂಗದಳ ಕಾರ್ಯಕರ್ತರೊಬ್ಬರು ಕಾಂಗ್ರೆಸ್ ನವರಿಗೆ ಮತ ಕೇಳಲು ಬಂದರೆ ನಾಯಿ ಬಿಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

‘ಇದು ಬಜರಂಗದಳದವರ ಮನೆಯಾಗಿದೆ. ಕಾಂಗ್ರೆಸ್ ನವರು ಮತಯಾಚಿಸಲು ಅವಕಾಶ ಇಲ್ಲ. ಒಳಗೆ ಬಂದರೆ ನಾಯಿ ಬಿಡಲಾಗುವುದು ಎಚ್ಚರಿಕೆ ಎಂದು ಮನೆ ಕಾಂಪೌಂಡ್ ಗೆ ಪೋಸ್ಟರ್ ಹಚ್ಚಲಾಗಿದೆ. ಕಾಂಗ್ರೆಸ್ ಚುನಾವಣೆ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಪ್ರಸ್ತಾಪಿಸಿದ್ದು, ಇದಕ್ಕೆ ಆಕ್ರೋಶಗೊಂಡಿರುವ ಬಜರಂಗ ದಳದ ಕಾರ್ಯಕರ್ತ ಅರುಣ್ ಇಂತಹದೊಂದು ಪೋಸ್ಟರ್ ಹಚ್ಚಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇದು ವೈರಲ್ ಆಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read