ನಟ ದರ್ಶನ್ ಗೆ ಬಿಗ್ ಶಾಕ್: ಜಾಮೀನು ರದ್ದು ಬಗ್ಗೆ ಗೃಹಸಚಿವರ ಸ್ಪೋಟಕ ಹೇಳಿಕೆ

ಬೆಂಗಳೂರು: ಬೆನ್ನು ನೋವಿನ ಕಾರಣ ಮಧ್ಯಂತರ ಜಾಮೀನು ಪಡೆದು ಜೈಲಿನಿಂದ ಹೊರಗಿರುವ ನಟ ದರ್ಶನ್ ಪ್ರಕರಣ ಕುರಿತಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮಹತ್ವದ ಹೇಳಿಕೆ ನೀಡಿದ್ದಾರೆ.

ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್.ಎಸ್.ಎಲ್. ರಿಪೋರ್ಟ್ ಗಾಗಿ ಹೈದರಾಬಾದ್ ಗೆ ಮೊಬೈಲ್ ಕಳುಹಿಸಿದ್ದೆವು. ಆರೋಪಿ ದರ್ಶನ್ ಕೊಲೆಯಾದ ಸ್ಥಳದಲ್ಲಿ ಇದ್ದ ಫೋಟೋ ರಿಟ್ರೀವ್ ವೇಳೆ ಸಿಕ್ಕಿದೆ ಎಂದು ಪರಮೇಶ್ವರ್ ಹೇಳಿದ್ದಾರೆ.

ಯಾರೋ ಜೊತೆಯಲ್ಲಿದ್ದವನು ವಿಡಿಯೋ ಮಾಡಿಕೊಂಡಿದ್ದ. ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಜಾಮೀನು ರದ್ದು ಮಾಡಿಸಬೇಕು, ಮುಂದೆ ಏನು ಕ್ರಮ ಆಗಬೇಕು ಎಂಬುದರ ಬಗ್ಗೆ ತನಿಖೆ ಆಗುತ್ತಿದೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.

ಕೊಲೆ ಆರೋಪಿ ದರ್ಶನ್ ಇನ್ನೂ ಆಪರೇಷನ್ ಮಾಡಿಸದ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಆಪರೇಷನ್ ಅಗತ್ಯ ಇಲ್ಲ ಅಂತ ಇದರಿಂದಲೇ ಗೊತ್ತಾಗುತ್ತಿದೆ. ಆಪರೇಷನ್ ಮಾಡದಿದ್ದರೆ ಬೆನ್ನು ಮೂಳೆ ಮುರಿದು ಹೋಗುತ್ತದೆ ಎನ್ನುತ್ತಿದ್ದರು. ಇಷ್ಟು ದಿನವಾದರೂ ದರ್ಶನ್ ಗೆ ವೈದ್ಯರು ಆಪರೇಷನ್ ಮಾಡಿಲ್ಲ. ಕೋರ್ಟ್ ವ್ಯವಸ್ಥೆಯಲ್ಲಿ ತೀರ್ಮಾನ ಕೊಡಬೇಕು ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read