ಆ ವ್ಯಕ್ತಿಗಾಗಿ ‘ನೀವು ಬರದಿದ್ದರೆ ನಾನು ಮದುವೆ ಆಗುವುದಿಲ್ಲ’ ಎಂದಿದ್ದರಂತೆ ಅನಂತ್ ಅಂಬಾನಿ

ನೀತಾ ಅಂಬಾನಿ ಮತ್ತು ಮುಖೇಶ್ ಅಂಬಾನಿ ಅವರ ಕಿರಿಯ ಮಗ ಅನಂತ್ ಅಂಬಾನಿ ತಮ್ಮ ಬಹುಕಾಲದ ಪ್ರೀತಿಯ ಗೆಳತಿ ರಾಧಿಕಾ ಮರ್ಚೆಂಟ್ ಅವರೊಂದಿಗೆ ಜುಲೈ 12, 2024 ರಂದು ಮದುವೆಯಾಗಿದ್ದು ವೈವಾಹಿಕ ಜೀವನ ನಡೆಸುತ್ತಿದ್ದಾರೆ.

ಅವರ ಅದ್ಧೂರಿ ವಿವಾಹವು ಜಗತ್ರ್ಅಸಿದ್ಧ ವ್ಯಕ್ತಿಗಳ ಮುಂದೆ ಸುಂದರವಾದ ಹಿಂದೂ ವಿವಾಹ ಸಂಸ್ಕೃತಿಯನ್ನು ಪ್ರದರ್ಶಿಸಿತು. ಅದ್ಧೂರಿ ಮದುವೆ ಕಾರ್ಯಕ್ರಮದಲ್ಲಿ ಹಲವಾರು ಖ್ಯಾತ ಸಂತರು ಮತ್ತು ಧಾರ್ಮಿಕ ಹಿನ್ನೆಲೆಯ ಗಣ್ಯರು ಭಾಗವಹಿಸಿದ್ದರು.

ಅನಂತ್ ಅಂಬಾನಿ ಅತ್ಯಂತ ಆಧ್ಯಾತ್ಮಿಕ ಮತ್ತು ದೇವರನ್ನು ನಂಬುವವರಾಗಿದ್ದು ಅವರು ಧಾರ್ಮಿಕ ಗುರುಗಳು, ಸಂತರು ಮತ್ತು ಕಥಾಕಾರರಾದ ಬಾಗೇಶ್ವರ ಧಾಮದ ಧೀರೇಂದ್ರ ಶಾಸ್ತ್ರಿ ಅವರನ್ನು ಇಷ್ಟಪಡುತ್ತಾರೆ. ಹೀಗಾಗಿ ಅವರನ್ನು ತಮ್ಮ ಮದುವೆಗೆ ಬರುವಂತೆ ಒತ್ತಾಯ ಮಾಡಿದ್ದರು. .

ಇತ್ತೀಚೆಗೆ ಸುಶಾಂತ್ ಸಿನ್ಹಾ ಅವರೊಂದಿಗಿನ ಪಾಡ್‌ಕ್ಯಾಸ್ಟ್ ನಲ್ಲಿ, ಧೀರೇಂದ್ರ ಶಾಸ್ತ್ರಿ ಅವರು ಅನಂತ್ ಬಗ್ಗೆ ಮಾತನಾಡಿದ್ದು ತಮ್ಮ ಮದುವೆಗೆ ಹಾಜರಾಗಲು ಅನಂತ್ ಧೀರೇಂದ್ರ ಶಾಸ್ತ್ರಿ ಅವರನ್ನು ಹೇಗೆ ಒತ್ತಾಯಿಸಿದರು ಎಂಬುದರ ಬಗ್ಗೆ ಸ್ಮರಿಸಿದ್ದಾರೆ.

ಮದುವೆಗೆ ಬರುವ ಧೀರೇಂದ್ರ ಶಾಸ್ರಿನಲ ಅವರನ್ನು ಖಾಸಗಿ ಜೆಟ್ ಮೂಲಕ ಕರೆದುಕೊಂಡು ಹೋಗಿ ವಾಪಸ್ ಬಿಡುವುದಾಗಿ ಅನಂತ್ ಅವರ ಆಡಳಿತ ಮಂಡಳಿ ಹೇಳಿತ್ತು ಎಂದು ಧೀರೇಂದ್ರ ಶಾಸ್ತ್ರಿ ಬಹಿರಂಗಪಡಿಸಿದ್ದಾರೆ. ಆದಾಗ್ಯೂ ಅದಕ್ಕೆ ಸಿದ್ಧರಿರದ ಧೀರೇಂದ್ರ ಶಾಸ್ತ್ರಿ ಇದಕ್ಕೆ ಹೆಚ್ಚು ಸಮಯ ಬೇಕಾಗುತ್ತದೆ ಎಂದು ಮದುವೆ ಬರದಿರಲು ನಿರ್ಧರಿಸಿದರಂತೆ. ಆದರೆ ಈ ವೇಳೆ ಅನಂತ್ ತಮ್ಮ ನಿರ್ಧಾರಕ್ಕೆ ಅಚಲವಾಗಿದ್ದು, ಧೀರೇಂದ್ರ ಶಾಸ್ತ್ರಿ ಬರದಿದ್ದರೆ ತಾವು ಮದುವೆಯಾಗುವುದಿಲ್ಲ ಎಂದು ಹೇಳಿದ್ದಾಗಿ ಧೀರೇಂದ್ರ ಶಾಸ್ತ್ರಿ ಹೇಳಿದ್ದಾರೆ.

ಬಳಿಕ ಹಠ ಬಿಡದ ಅನಂತ್ ಅಂಬಾನಿ ಧೀರೇಂದ್ರ ಶಾಸ್ರಿ.ೇ ಅವರನ್ನು ಮದುವೆಗೆ ಕರೆತರುವಲ್ಲಿ ಯಶಸ್ವಿಯಾದರು. ಅನಂತ್ ಅಂಬಾನಿ ಧೀರೇಂದ್ರ ಶಾಸ್ತ್ರಿ ಅವರಿಗೆ ಖಾಸಗಿ ಜೆಟ್ ಕಳುಹಿಸಿ ಮದುವೆಗೆ ಬರುವಂತೆ ಮಾಡಿದ್ದರು. ದೊಡ್ಡ ಮೊತ್ತದ ಹಣ ಖರ್ಚು ಮಾಡಿ ಖಾಸಗಿ ಜೆಟ್ ಅನ್ನು ಬುಕ್ ಮಾಡುವ ಮೂಲಕ ಮದುವೆಗೆ ಕರೆಸಿಕೊಂಡಿದ್ದರು ಎಂದು ಧೀರೇಂದ್ರ ಶಾಸ್ತ್ರಿ ಮತ್ತಷ್ಟು ವಿಷಯ ಬಹಿರಂಗಪಡಿಸಿದರು.

ಅಂಬಾನಿ ಕುಟುಂಬ ಮದುವೆ ಕಾರ್ಯಕ್ರಮದಲ್ಲಿ ಬಂದ ಸಂತರೆಲ್ಲರನ್ನೂ ಬಹಳ ಗೌರವದಿಂದ ಸ್ವಾಗತಿಸಿತು ಮತ್ತು ಅವರನ್ನೆಲ್ಲಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು ಎಂದು ಧೀರೇಂದ್ರ ಶಾಸ್ತ್ರಿ ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read