ನೀರು ತರಲು ಹೋದ ಯುವತಿಗೆ ವಿದ್ಯುತ್ ಶಾಕ್

ಬಾಗಲಕೋಟೆ: ಬನಹಟ್ಟಿಯ ಮುಖ್ಯರಸ್ತೆಯ ವಿಠಲ ಮಂದಿರ ಸಮೀಪ ನಗರಸಭೆ ಬೋರ್ ವೆಲ್ ನಿಂದ ನೀರು ತರಲು ಹೋಗಿದ್ದ ವೇಳೆ ವಿದ್ಯುತ್ ಪ್ರವಹಿಸಿ ಯುವತಿ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ.

ಬನಹಟ್ಟಿಯ ಚಿನ್ನಾಭರಣ ಮಳಿಗೆಯಲ್ಲಿ ಕೆಲಸ ಮಾಡುತ್ತಿರುವ ರಾಮಪುರ ನಿವಾಸಿ ಶ್ರುತಿ(24) ವಿದ್ಯುತ್ ಆಘಾತಕ್ಕೆ ಒಳಗಾದವರು. ವಿದ್ಯುತ್ ಪ್ರವಹಿಸಿ ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಗಮನಿಸಿದ ಸ್ಥಳೀಯರು ರಕ್ಷಿಸಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಶ್ರುತಿ ಪರಿಸ್ಥಿತಿ ಚಿಂತಾಜನಕವಾಗಿದ್ದು, ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ. ನಗರಸಭೆ ವತಿಯಿಂದ ಚಿಕಿತ್ಸೆಯ ವೆಚ್ಚ ಪಾವತಿಸಲಾಗುವುದು ಎಂದು ಪೌರಾಯುಕ್ತರು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read