ಬೆಂಗಳೂರು : ಬೆಂಗಳೂರಿನಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ ಹಿನ್ನೆಲೆ ನಗರದ ಈ ರಸ್ತೆಗಳಲ್ಲಿ 3 ದಿನ ವಾಹನ ಸಂಚಾರ ನಿಷೇಧಿಸಲಾಗಿದೆ.
ದಿನಾಂಕ:27.08.2025, 29.08.2025 ಮತ್ತು 31.08.2025 ರಂದು ಜಯನಗರ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ಐತಿಹಾಸಿಕ ಯಡಿಯೂರು ಕೆರೆಯಲ್ಲಿ ಬೆಂಗಳೂರು ನಗರದ ವಿವಿಧ ಭಾಗಗಳಿಂದ ಗಣೇಶ ಮೂರ್ತಿ ವಿಸರ್ಜನೆಗೆ ಅಪಾರ ಸಂಖ್ಯೆಯ ಸಾರ್ವಜನಿಕರು, ಭಕ್ತಾದಿಗಳು, ಆಗಮಿಸುವುದರಿಂದ ಮೂರು ದಿನಗಳ ಮಧ್ಯಾಹ್ನ 3.00 ಗಂಟೆಯಿಂದ ರಾತ್ರಿ 12.00 ಗಂಟೆಯವರೆಗೆ ಕನಕಪುರ ಮುಖ್ಯ ರಸ್ತೆಯಲ್ಲಿ ಸಂಚಾರ ದಟ್ಟಣೆಯುಂಟಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಕನಕಪುರ ಮುಖ್ಯ ರಸ್ತೆಯಲ್ಲಿ ದೈನಂದಿನ ಸಾರ್ವಜನಿಕ ವಾಹನಗಳ ಸುಗಮ ಸಂಚಾರದ ಹಿತದೃಷ್ಟಿಯಿಂದ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ಈ ಸಂಬಂಧವಾಗಿ ವಾಹನಗಳ ಸುಗಮ ಸಂಚಾರ ಮತ್ತು ಪಾದಚಾರಿಗಳ ಸುರಕ್ಷತೆಯ ಹಿತದೃಷ್ಟಿಯಿಂದ ಈ ಕೆಳಕಂಡಂತೆ ಸಂಚಾರ ಮಾರ್ಪಾಡು ಮಾಡಲಾಗಿದ್ದು ಪರ್ಯಾಯ ರಸ್ತೆಗಳನ್ನು ಬಳಸಲು ಕೋರಿದೆ.
ತಾತ್ಕಾಲಿಕ ಸಂಚಾರ ನಿರ್ಬಂಧ :-
- ಕನಕಪುರ ಮುಖ್ಯ ರಸ್ತೆಯ ಯಡಿಯೂರು ಹೆರಿಗೆ ಆಸ್ಪತ್ರೆ ಜಂಕ್ಷನ್ ನಿಂದ ಯಡಿಯೂರು ಸೌತ್ ಎಂಡ್ ರಸ್ತೆ ಜಂಕ್ಷನ್ ವರೆಗೆ ಎಲ್ಲಾ ಮಾದರಿಯ ವಾಹನಗಳ ಸಂಚಾರ ನಿರ್ಬಂಧಿಸಿದೆ.
ನಿರ್ಬಂಧಿಸಲಾದ ಸಂಚಾರಕ್ಕೆ ಪರ್ಯಾಯ ಮಾರ್ಗಗಳು :- - ತಾತ್ಕಾಲಿಕವಾಗಿ ನಿರ್ಬಂಧಿಸಿರುವ ರಸ್ತೆಗೆ ಬನಶಂಕರಿ ಕಡೆಯಿಂದ ಮಾರ್ಕೇಟ್ ಕಡೆಗೆ ಸಂಚರಿಸುವ ವಾಹನಗಳು ಯಡಿಯೂರು ಹೆರಿಗೆ ಆಸ್ಪತ್ರೆ ಜಂಕ್ಷನ್ -ಬಲ ತಿರುವು-32ನೇ ಕ್ರಾಸ್ ರಸ್ತೆ – 2ನೇ ಮುಖ್ಯ ರಸ್ತೆ 32ನೇ ಕ್ರಾಸ್ ಜಂಕ್ಷನ್ – 04ನೇ ಮುಖ್ಯ ರಸ್ತೆ 32ನೇ ಕ್ರಾಸ್ ಜಂಕ್ಷನ್ – ಎಡ ತಿರುವು – 27ನೇ ಕ್ರಾಸ್ ಜಂಕ್ಷನ್ – ಸೌತ್ ಎಂಡ್ ಸರ್ಕಲ್ ಕಡೆಗೆ ಸಂಚರಿಸಬಹುದಾಗಿರುತ್ತದೆ.
- ಮಾರ್ಕೇಟ್ ಕಡೆಯಿಂದ ಬನಶಂಕರಿ ಕಡೆಗೆ ಸಂಚರಿಸುವ ವಾಹನಗಳು ಯಡಿಯೂರು ಸೌತ್ ಎಂಡ್ ರಸ್ತೆ, ಜಂಕ್ಷನ್ -ಎಡ ತಿರುವು- ಸೌತ್ ಎಂಡ್ ರಸ್ತೆ- ಸೌತ್ ಎಂಡ್ ಸರ್ಕಲ್ – ಬಲ ತಿರುವು ಪಡೆದು ಮುಂದಕ್ಕೆ ಸಂಚರಿಸಬಹುದಾಗಿರುತ್ತದೆ.
ತಾತ್ಕಾಲಿಕವಾಗಿ ವಾಹನ ನಿಲುಗಡೆ ನಿಷೇಧವಿರುವ ರಸ್ತೆಗಳ ವಿವರ :- - ಕನಕಪುರ ಮುಖ್ಯ ರಸ್ತೆ (ಯಡಿಯೂರು ಹೆರಿಗೆ ಆಸ್ಪತ್ರೆ ಜಂಕ್ಷನ್ ನಿಂದ ಯಡಿಯೂರು ಸೌತ್ ಎಂಡ್ ರಸ್ತೆ, ಜಂಕ್ಷನ್ ವರೆಗೆ)
- ಕೆ.ಆರ್.ರಸ್ತೆ
- 32ನೇ ಕ್ರಾಸ್ ರಸ್ತೆ
- 04ನೇ ಮುಖ್ಯ ರಸ್ತೆ
“ಸಂಚಾರ ಸಲಹೆ / Traffic advisory” pic.twitter.com/u57LUOl9zD
— DCP SOUTH TRAFFIC (@DCPSouthTrBCP) August 27, 2025