4G ಫೋನ್ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಬಂಪರ್; ಕೇವಲ 999 ರೂಪಾಯಿಗೆ ‘ಜಿಯೋ ಭಾರತ್’ ಲಭ್ಯ

4ಜಿ ಫೋನ್ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ರಿಲಯನ್ಸ್ ಜಿಯೋ ಕಂಪನಿ ಇಂಟರ್ನೆಟ್ ಸಂಪರ್ಕ ಇರುವ ‘ಜಿಯೋ ಭಾರತ್’ ಹೆಸರಿನ ಫೋನ್ ಬಿಡುಗಡೆ ಮಾಡಿದ್ದು, ಇದರ ಬೆಲೆ ಕೇವಲ 999 ರೂಪಾಯಿಗಳಾಗಿದೆ.

‘ಜಿಯೋ ಭಾರತ್’ ಫೋನ್ ನಲ್ಲಿ ಜಿಯೋ ಸಿನಿಮಾದಲ್ಲಿನ ಕಾರ್ಯಕ್ರಮಗಳನ್ನು ವೀಕ್ಷಿಸುವುದರ ಜೊತೆಗೆ ಜಿಯೋ ಪೇ ಮೂಲಕ ಯುಪಿಐ ಸೌಲಭ್ಯ ಸಹ ಬಳಸಬಹುದಾಗಿದೆ. ಅಲ್ಲದೆ ಇಂಟರ್ನೆಟ್ ಸೌಲಭ್ಯ ಇರುವ ಫೋನ್ ಇಷ್ಟೊಂದು ಕಡಿಮೆ ಬೆಲೆಗೆ ಲಭ್ಯವಾಗುತ್ತಿರುವುದು ಇದೇ ಮೊದಲು ಎಂದು ಕಂಪನಿ ಹೇಳಿಕೊಂಡಿದೆ.

ಭಾರತದಲ್ಲಿ ಇಂದು ಇಂಟರ್ನೆಟ್ ಕ್ರಾಂತಿಯೇ ನಡೆದಿದ್ದು, ಫೋನ್ ಮೂಲಕವೇ ಬಹುತೇಕ ಕಾರ್ಯಗಳನ್ನು ಮಾಡಬಹುದಾಗಿದೆ. ಇದರ ಮಧ್ಯೆಯೂ ಭಾರತದಲ್ಲಿ 25 ಕೋಟಿ ಮಂದಿ ಈಗಲೂ ಸಹ ಫೀಚರ್ ಫೋನ್ ಬಳಸುತ್ತಿದ್ದು, ಹೀಗಾಗಿ ರಿಲಯನ್ಸ್ ಜಿಯೋ, ಅತ್ಯಂತ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಇಂಟರ್ನೆಟ್ ಸೌಲಭ್ಯ ಇರುವ ‘ಜಿಯೋ ಭಾರತ್’ 4ಜಿ ಫೋನ್ ಬಿಡುಗಡೆ ಮಾಡಿದೆ. ಇದರ ಬಳಕೆ ಶುಲ್ಕವೂ ಸಹ ಅತ್ಯಂತ ಕಡಿಮೆ ಇರಲಿದೆ ಎಂದು ರಿಲಯನ್ಸ್ ಜಿಯೋ ಕಂಪನಿ ತಿಳಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read