ʼಬಾಬಾ ವಂಗಾʼ ಭಯಾನಕ ಭವಿಷ್ಯ: 41 ವರ್ಷದಲ್ಲಿ ಅಮೆರಿಕದಿಂದ ಜಗತ್ತಿಗೇ ಅಪಾಯ !

ಕಾಲಜ್ಞಾನಿ ಬಾಬಾ ವಂಗಾ ಅವರು ದಶಕಗಳ ಹಿಂದೆಯೇ ನುಡಿದಿರುವ ಹಲವು ಭವಿಷ್ಯಗಳ ಪೈಕಿ ಕೆಲವೊಂದು ನಿಜವಾಗಿವೆ. ಇದೀಗ ಅವರ ಮತ್ತೊಂದು ಭವಿಷ್ಯ ಅಂತರ್ಜಾಲದಲ್ಲಿ ಹರಿದಾಡುತ್ತಿದ್ದು, ಜಗತ್ತಿನಾದ್ಯಂತ ಆತಂಕ ಮೂಡಿಸಿದೆ. ವಂಗಾ ಅವರ ಪ್ರಕಾರ, 2066ನೇ ಇಸವಿಯಲ್ಲಿ ಅಮೆರಿಕವು ಅತ್ಯಂತ ಅಪಾಯಕಾರಿ ಆಯುಧವೊಂದನ್ನು ಕಂಡುಹಿಡಿಯಲಿದೆಯಂತೆ ! ಈ ಆಯುಧವು ಇಡೀ ಪರಿಸರಕ್ಕೆ ಮಾರಕವಾಗಲಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.

ಹಾಗೆ ನೋಡಿದರೆ, ಅಮೆರಿಕವು ತನ್ನ ಶಸ್ತ್ರಾಸ್ತ್ರಗಳ ಬಲದಿಂದ ಜಗತ್ತಿನ ಮೇಲೆ ತನ್ನ ಹಿಡಿತವನ್ನು ಸಾಧಿಸಲು ಪ್ರಯತ್ನಿಸುತ್ತಿರುವುದು ಗುಟ್ಟೇನಲ್ಲ. ಅವರ ಬಳಿ ಈಗಾಗಲೇ ಅತ್ಯಂತ ಮಾರಕ ಪರಮಾಣು ಅಸ್ತ್ರಗಳಿವೆ ಎಂದು ವರದಿಗಳು ಹೇಳುತ್ತವೆ. ಸ್ಟಾಕ್‌ಹೋಮ್ ಇಂಟರ್‌ನ್ಯಾಷನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ (SIPRI) ವರದಿಯ ಪ್ರಕಾರ, 2024ರಲ್ಲಿ ಅಮೆರಿಕವು ಬರೋಬ್ಬರಿ 318.7 ಶತಕೋಟಿ ಡಾಲರ್‌ಗಳ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡಿದೆ. ಇದು ಜಾಗತಿಕ ಶಸ್ತ್ರಾಸ್ತ್ರ ರಫ್ತಿನ ಶೇ 42ರಷ್ಟಿದೆ ! ಅಷ್ಟೇ ಅಲ್ಲ, ಬೇರೊಂದು ದೇಶದ ಮೇಲೆ ಪರಮಾಣು ಬಾಂಬ್ ಹಾಕಿದ ಏಕೈಕ ದೇಶ ಎಂಬ ಕುಖ್ಯಾತಿಯೂ ಅಮೆರಿಕಕ್ಕಿದೆ.

ಬಾಬಾ ವಂಗಾ ಅವರು 1911ರಲ್ಲಿ ಬಲ್ಗೇರಿಯಾದಲ್ಲಿ ಜನಿಸಿದರು. ಬಾಲ್ಯದಲ್ಲಿಯೇ ದೃಷ್ಟಿ ಕಳೆದುಕೊಂಡರೂ, ಭವಿಷ್ಯವನ್ನು ನೋಡುವ ಅಸಾಮಾನ್ಯ ಶಕ್ತಿಯನ್ನು ಪಡೆದಿದ್ದರು ಎಂದು ಹೇಳಲಾಗುತ್ತದೆ. ಅವರು ನುಡಿದ ಹಲವು ಭವಿಷ್ಯಗಳು ನಿಜವಾಗಿದ್ದು, 9/11ರ ಭಯೋತ್ಪಾದಕ ದಾಳಿ, 2000ನೇ ಇಸವಿಯ ಕುರ್ಸ್ಕ್ ಜಲಾಂತರ್ಗಾಮಿ ದುರಂತ, 2020ರ ಕೊರೊನಾ ಸಾಂಕ್ರಾಮಿಕ ರೋಗ ಮತ್ತು ರಾಜಕುಮಾರಿ ಡಯಾನಾ ಅವರ ಮರಣದಂತಹ ಘಟನೆಗಳು ಅವರ ಭವಿಷ್ಯವಾಣಿಯಲ್ಲಿ ಸೇರಿವೆ. ಹೀಗಾಗಿ ಅವರನ್ನು “ಬಾಲ್ಕನ್ಸ್‌ನ ನಾಸ್ಟ್ರಾಡಾಮಸ್” ಎಂದೂ ಕರೆಯಲಾಗುತ್ತದೆ.

ಈಗ ಅವರ 2066ರ ಭವಿಷ್ಯ ನಿಜವಾಗುತ್ತದೆಯೇ ಎಂದು ಕಾದು ನೋಡಬೇಕಿದೆ. ಆದರೆ, ಅಮೆರಿಕದ ಶಸ್ತ್ರಾಸ್ತ್ರಗಳ ಮೇಲಿನ ವ್ಯಾಮೋಹವನ್ನು ಗಮನಿಸಿದರೆ, ಈ ಭವಿಷ್ಯ ಸುಳ್ಳಾಗಲಾರದು ಎಂದು ಹಲವರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read