ಪ್ರಸಿದ್ಧ ಭವಿಷ್ಯಕಾರ ಬಾಬಾ ವಂಗಾ ಅವರು ಮತ್ತೊಂದು ಆಘಾತಕಾರಿ ಭವಿಷ್ಯ ನುಡಿದಿದ್ದಾರೆ. ಅವರ ಪ್ರಕಾರ, 2170 ರಲ್ಲಿ ಇಡೀ ವಿಶ್ವವು ಭೀಕರ ಬರಗಾಲವನ್ನು ಎದುರಿಸಬೇಕಾಗುತ್ತದೆ. ಭೂಮಿಯ ಮೇಲೆ ನೀರಿನ ತೀವ್ರ ಅಭಾವ ಉಂಟಾಗಿ, ನದಿ, ಕೆರೆ ಸೇರಿದಂತೆ ಎಲ್ಲಾ ಜಲಮೂಲಗಳು ಸಂಪೂರ್ಣವಾಗಿ ಬತ್ತಿ ಹೋಗುತ್ತವೆ. ಈ ದುರಂತ ಕೇವಲ ಕುಡಿಯುವ ನೀರಿನ ಸಮಸ್ಯೆಗೆ ಸೀಮಿತವಾಗದೆ, ಕೃಷಿ ಚಟುವಟಿಕೆಗಳಿಗೂ ಮಾರಕವಾಗಲಿದೆ. ಕೃಷಿ ಇಲ್ಲದ ಕಾರಣ ಆಹಾರದ ತೀವ್ರ ಕೊರತೆ ಉಂಟಾಗಿ ಕೋಟ್ಯಂತರ ಜನರು ಹಸಿವು ಮತ್ತು ಬಾಯಾರಿಕೆಯಿಂದ ಸಾವನ್ನಪ್ಪಲಿದ್ದಾರೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.
ಬಾಬಾ ವಂಗಾ ಅವರ ಈ ಭವಿಷ್ಯ ನೈಸರ್ಗಿಕ ಕಾರಣಗಳಿಂದ ಸಂಭವಿಸುವುದಿಲ್ಲ. ಬದಲಾಗಿ, ಮಾನವನಿಂದಾಗುವ ಹವಾಮಾನ ಬದಲಾವಣೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಮಿತಿಮೀರಿದ ಬಳಕೆಯೇ ಇದಕ್ಕೆ ಮುಖ್ಯ ಕಾರಣವಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ. ಹವಾಮಾನ ತಜ್ಞರು ಸಹ ಈಗಾಗಲೇ ಭೂಮಿಯ ತಾಪಮಾನವನ್ನು ನಿಯಂತ್ರಿಸದಿದ್ದರೆ ಮುಂದಿನ ನೂರು ವರ್ಷಗಳಲ್ಲಿ ಪರಿಸ್ಥಿತಿ ಕೈಮೀರಿ ಹೋಗುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಬಾ ವಂಗಾ ಅವರ ಭವಿಷ್ಯವಾಣಿಯು ವಿಜ್ಞಾನಿಗಳ ಮಾತಿಗೆ ಪುಷ್ಟಿ ನೀಡುವಂತಿದೆ.
ಆದರೆ ವಿಜ್ಞಾನವು ಬಾಬಾ ವಂಗಾ ಅವರ ಈ ಭವಿಷ್ಯವನ್ನು ಸಂಪೂರ್ಣವಾಗಿ ಒಪ್ಪುತ್ತದೆಯೇ ? ಬಾಬಾ ವಂಗಾ ಅವರ ಭವಿಷ್ಯವಾಣಿಗಳು ನಿಗೂಢವಾಗಿದ್ದರೂ, ವೈಜ್ಞಾನಿಕವಾಗಿ ಕಂಡುಬರುತ್ತಿರುವ ಹವಾಮಾನ ಬದಲಾವಣೆಯ ಗಂಭೀರ ಲಕ್ಷಣಗಳನ್ನು ಅಲ್ಲಗಳೆಯುವಂತಿಲ್ಲ. ಹವಾಮಾನ ಬದಲಾವಣೆಯ ಕುರಿತ ಅಂತರ ಸರ್ಕಾರಿ ಮಂಡಳಿಯ (IPCC) ವರದಿಯ ಪ್ರಕಾರ, ಜಾಗತಿಕ ತಾಪಮಾನವನ್ನು ನಿಯಂತ್ರಿಸದಿದ್ದರೆ 2100 ರ ವೇಳೆಗೆ ವಿಶ್ವದ ಶೇಕಡಾ 40 ರಷ್ಟು ಜನಸಂಖ್ಯೆಯು ತೀವ್ರ ನೀರಿನ ಬಿಕ್ಕಟ್ಟನ್ನು ಎದುರಿಸಲಿದೆ. ವಿಶ್ವಸಂಸ್ಥೆಯ ಅಂಕಿಅಂಶಗಳ ಪ್ರಕಾರ, 2050 ರ ವೇಳೆಗೆ 1.8 ಶತಕೋಟಿ ಜನರು ತೀವ್ರವಾದ ನೀರಿನ ಸಮಸ್ಯೆಯಿಂದ ತತ್ತರಿಸಲಿದ್ದಾರೆ ಮತ್ತು ಜಾಗತಿಕ ತಾಪಮಾನವು ಸರಾಸರಿ 2 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಈ ವೈಜ್ಞಾನಿಕ ಮುನ್ಸೂಚನೆಗಳು ಬಾಬಾ ವಂಗಾ ಅವರ ಭವಿಷ್ಯದ ತೀವ್ರತೆಯನ್ನು ಸೂಚಿಸುತ್ತವೆ.
1911 ರಲ್ಲಿ ಬಲ್ಗೇರಿಯಾದಲ್ಲಿ ಜನಿಸಿದ ಬಾಬಾ ವಂಗಾ ಅವರ ನಿಜವಾದ ಹೆಸರು ವಂಗೆಲಿಯಾ ಪಾಂಡೇವಾ ಗುಷ್ಟೆರೋವಾ. ಬಾಲ್ಯದಲ್ಲಿಯೇ ದೃಷ್ಟಿ ಕಳೆದುಕೊಂಡ ಅವರು 1996 ರಲ್ಲಿ ನಿಧನರಾದರು. ತಮ್ಮ ಜೀವನದಲ್ಲಿ ಅವರು ಅನೇಕ ಆಘಾತಕಾರಿ ಭವಿಷ್ಯವಾಣಿಗಳನ್ನು ನುಡಿದಿದ್ದರು, ಅವುಗಳಲ್ಲಿ 9/11 ದಾಳಿ, ಸೋವಿಯತ್ ಒಕ್ಕೂಟದ ಪತನ, ಚೆರ್ನೋಬಿಲ್ ದುರಂತ ಮತ್ತು ಮೂರನೇ ಮಹಾಯುದ್ಧದ ಎಚ್ಚರಿಕೆ ಸೇರಿದಂತೆ ಕೆಲವು ನಿಜವಾಗಿವೆ ಎಂಬ ನಂಬಿಕೆ ಇದೆ. ಹೀಗಾಗಿ ಅವರ 2170 ರ ಬರಗಾಲದ ಭವಿಷ್ಯವು ವಿಶ್ವದಾದ್ಯಂತ ಆತಂಕವನ್ನು ಮೂಡಿಸಿದೆ.