BREAKING: ಬಾಬಾ ತಾರ್ಸೆಮ್ ಸಿಂಗ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಎನ್ ಕೌಂಟರ್ ನಲ್ಲಿ ಫಿನಿಶ್

ಹರಿದ್ವಾರ: ಮಾರ್ಚ್ 28 ರಂದು ಶ್ರೀ ನಾನಕ ಮಟ್ಟಾ ಸಾಹಿಬ್ ಗುರುದ್ವಾರ ದೇರಾ ಕರ್ ಸೇವಾ ಮುಖ್ಯಸ್ಥ ಬಾಬಾ ತಾರ್ಸೆಮ್ ಸಿಂಗ್ ಅವರನ್ನು ಗುಂಡಿಕ್ಕಿ ಕೊಂದ ಅಮರ್ಜಿತ್ ಸಿಂಗ್ ಅಲಿಯಾಸ್ ಬಿಟ್ಟು ನನ್ನು ಉತ್ತರಾಖಂಡ ಎಸ್‌ಟಿಎಫ್ ಮತ್ತು ಹರಿದ್ವಾರ ಪೊಲೀಸರು ಥಾನಾ ಭಗವಾನ್‌ಪುರ ಪ್ರದೇಶದಲ್ಲಿ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದಾರೆ ಎಂದು ಉತ್ತರಾಖಂಡದ ಡಿಜಿಪಿ ಅಭಿನವ್ ಕುಮಾರ್ ತಿಳಿಸಿದ್ದಾರೆ.

ಹಂತಕನ ಎರಡನೇ ಸಹಚರ ಪರಾರಿಯಾಗಿದ್ದು, ಎಸ್‌ಟಿಎಫ್ ಮತ್ತು ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಉತ್ತರಾಖಂಡ ಪೊಲೀಸರು ಬಾಬಾರ ಹತ್ಯೆಯನ್ನು ಸವಾಲಾಗಿ ತೆಗೆದುಕೊಂಡಿದ್ದು, ಎಸ್‌ಟಿಎಫ್ ಮತ್ತು ಪೊಲೀಸರು ಇಬ್ಬರೂ ಹಂತಕರಿಗಾಗಿ ನಿರಂತರವಾಗಿ ಹುಡುಕುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೋಮವಾರ ರಾತ್ರಿ ಎಸ್‌ಟಿಎಫ್, ಪೊಲೀಸರ ತಂಡ ಶಾರ್ಪ್‌ಶೂಟರ್ ಅಮರ್ಜಿತ್ ಸಿಂಗ್ ಹರಿದ್ವಾರದ ಕಲಿಯಾರ್ ರಸ್ತೆ ಮತ್ತು ಭಗವಾನ್‌ಪುರ ನಡುವೆ ಮುಖಾಮುಖಿಯಾಗಿದ್ದು, ಎನ್‌ಕೌಂಟರ್ ನಲ್ಲಿ ಪ್ರಮುಖ ಶೂಟರ್ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದಕ್ಕೂ ಮುನ್ನ ಬಾಬಾ ತಾರ್ಸೆಮ್ ಸಿಂಗ್ ಹತ್ಯೆ ಪ್ರಕರಣದಲ್ಲಿ ಇನ್ನೂ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಪೊಲೀಸರ ಪ್ರಕಾರ, ಬಂಧಿತ ಆರೋಪಿಗಳು ಸಂಪನ್ಮೂಲಗಳನ್ನು ಒದಗಿಸುವ ಮೂಲಕ ಮತ್ತು ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುವ ಮೂಲಕ ಅಪರಾಧವನ್ನು ರೂಪಿಸುವಲ್ಲಿ ಭಾಗಿಯಾಗಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read