2015ರಲ್ಲಿ ತೆರೆ ಕಂಡ ರಾಜ ಮೌಳಿ ನಿರ್ದೇಶನದ ‘ಬಾಹುಬಲಿ’ ಚಿತ್ರವನ್ನು ಯಾರೂ ಕೂಡ ಮರೆಯಲು ಸಾಧ್ಯವಿಲ್ಲ ದಕ್ಷಿಣ ಭಾರತದಲ್ಲಿ ಹೊಸ ದಾಖಲೆ ಬರೆದ ಈ ಸಿನಿಮಾ ತೆರೆ ಮೇಲೆ ಬಂದು ಇಂದಿಗೆ ಒಂಬತ್ತು ವರ್ಷಗಳಾಗಿವೆ. ಈ ಸಂತಸವನ್ನು ಪ್ರಭಾಸ್, ತಮನ್ನಾ ಭಾಟಿಯಾ ಸೇರಿದಂತೆ ಹಲವರು ಕಲಾವಿದರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಈ ಚಿತ್ರದಲ್ಲಿ ಪ್ರಭಾಸ್ ಸೇರಿದಂತೆ ರಾಣಾ ದಗ್ಗುಬಾಟಿ, ತಮನ್ನಾ ಭಾಟಿಯಾ, ಅನುಷ್ಕಾ ಶೆಟ್ಟಿ, ರಮ್ಯಾ ಕೃಷ್ಣನ್, ಸತ್ಯರಾಜ್, ನಾಸರ್, ರೋಹಿಣಿ, ಪ್ರಭಾಕರ್, ಚರಣದೀಪ್ ಅಭಿನಯಿಸಿದ್ದು, ಎಂ ಎಂ ಕಿರಾವಾಣಿ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಅರ್ಕಾ ಮೀಡಿಯಾ ವರ್ಕ್ಸ್ ಬ್ಯಾನರ್ ನಲ್ಲಿ ಶೋಬು ಯರ್ಲಗಡ್ಡ, ಪ್ರಸಾದ್ ದೇವಿನೇನಿ ನಿರ್ಮಾಣ ಮಾಡಿದ್ದಾರೆ. ಕೋಟಗಿರಿ ವೆಂಕಟೇಶ್ವರ ರಾವ್ ಸಂಕಲನವಿದೆ. ಬಾಹುಬಲಿ ಮೊದಲನೆಯ ಭಾಗ ಬಾಕ್ಸ್ ಆಫೀಸ್ ಒಟ್ಟಾರೆ 650 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.