BIG NEWS: ಈಶ್ವರಪ್ಪ ಹೇಳಿಕೆಗೆ ಗಾಬರಿಯಾಯ್ತು; ಮುಗುಳ್ನಗುತ್ತಲೇ ಟಾಂಗ್ ನೀಡಿದ ಬಿ.ವೈ.ವಿಜಯೇಂದ್ರ

ಬೆಂಗಳೂರು: ಮಾಜಿ ಸಿಎಂ ಯಡಿಯೂರಪ್ಪ ತಾಕತ್ತಿದ್ದರೆ ಪ್ರಧಾನಿ ಮೋದಿ ಫೋಟೋ ಬಳಸದೇ ಚುನಾವಣೆಯಲ್ಲಿ ಮಗನನ್ನು ಗೆಲ್ಲಿಸಲಿ. ಧಮ್ಮಿದ್ದರೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ತನ್ನನ್ನು ಪಕ್ಷದಿಂದ ಉಚ್ಛಾಟಿಸಲಿ ಎಂಬ ಕೆ.ಎಸ್.ಈಶ್ವರಪ್ಪ ಸವಾಲಿಗೆ ಪ್ರತಿಕ್ರಿಯಿಸಿದ ಬಿ.ವೈ.ವಿಜಯೇಂದ್ರ ಈಶ್ವರಪ್ಪ ಮಾತು ಕೇಳಿ ಗಾಬರಿಯಾಯ್ತು ಎಂದಿದ್ದಾರೆ.

ಈಶ್ವರಪ್ಪನವರ ಹೇಳಿಕೆಗಳನ್ನು ಕೇಳಿ ತುಂಬಾ ಗಾಬರಿಯಾಯ್ತು ಎಂದು ಮುಗುಳ್ನಕ್ಕ ವಿಜಯೇಂದ್ರ, ಪ್ರಧಾನಿ ಮೋದಿ ಭಾರತ ಮತ್ತು ಬಿಜೆಪಿಯ ಹೆಮ್ಮೆ ಎಂದು ಹೇಳಿದರು.

ಶಿವಮೊಗ್ಗದಲ್ಲಿ ಬಿಜೆಪಿ ಎರಡು ಅಂಶಗಳ ಮೇಲೆ ಮತ ಯಾಚಿಸುತ್ತಿದೆ. ಮೊದಲನೇಯದಾಗಿ ಕಳೆದ ಹತ್ತು ವರ್ಷಗಳಲ್ಲಿ ಪ್ರಧಾನಿ ಮೋದಿ ಮಾಡಿರುವ ಸಾಧನೆ, ಅವರ ಜನಪ್ರಿಯತೆ ಹಾಗೂ ಅಲ್ಲಿನ ಕ್ರಿಯಾಶೀಲ ಸಂಸದ ಬಿ.ವೈ.ವಿಜಯೇಂದ್ರ ಮಾಡಿರುವ ಅಭಿವೃದ್ಧಿ ಕಾರ್ಯಗಳು ಎಂದರು.

ಪ್ರಧಾನಿ ಮೋದಿ ಫೋಟೋವನ್ನು ಬಿಜೆಪಿಯವರಾದ ನಾವು ಬಳಸದೇ ಬೇರೆಯವರು ಬಳಸುವುದು ಸಾಧ್ಯವೇ ಎಂದು ಪ್ರಶ್ನಿಸಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read