BIG NEWS: ಅಪ್ಪ-ಮಕ್ಕಳು ವರ್ಸಸ್ ಹಿಂದುತ್ವದ ಚುನಾವಣೆ: ಈಶ್ವರಪ್ಪ ಹೇಳಿಕೆಗೆ ಕೌಂಟರ್ ಕೊಟ್ಟ ಬಿ.ವೈ.ವಿಜಯೇಂದ್ರ

ಶಿವಮೊಗ್ಗ: ಲೋಕಸಭಾ ಚುನಾವಣೆ ಅಪ್ಪ-ಮಕ್ಕಳು ವರ್ಸಸ್ ಹಿಂದುತ್ವದ ಚುನಾವಣೆ ಎಂಬ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬಿಜೆಪಿಯಲ್ಲಿ ಹಿಂದುತ್ವದ ನಾಯಕರು ಬಹಳ ಜನರಿದ್ದಾರೆ ಎಂದು ಕೌಂಟರ್ ನೀಡಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಈಶ್ವರಪ್ಪನವರಿಗೆ ಬಹಲಷ್ಟು ತಪ್ಪು ಕಲ್ಪನೆಗಳಾಗಿವೆ. ಅವರ ಎಲ್ಲಾ ಪ್ರಶ್ನೆಗಳಿಗೂ ಮುಂದಿನ ದಿನಗಳಲ್ಲಿ ಸೂಕ್ತ ಉತ್ತರ ಸಿಗಲಿದೆ ಎಂದು ಹೇಳಿದರು.

ಟಿಕೆಟ್ ನೀಡುವ ವಿಚಾರ ಕೇವಲ ನಾನು ಹೇಳಿ ತೀರ್ಮಾನಿಸುವುದಲ್ಲ. ಅದನ್ನು ವರಿಷ್ಠರು ನಿರ್ಧಾರ ಮಾಡುತ್ತಾರೆ. ಎಲ್ಲವನ್ನೂ ಸರಿದೂಗಿಸುವ ಕೆಲಸವನ್ನು ವರಿಷ್ಠರು ಮಾಡಲಿದ್ದಾರೆ. ಇದು ಚುನಾವಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಹೋಗುತ್ತೆ ಎಂಬ ವಿಶ್ವಾಸವಿದೆ ಎಂದರು.

ಟಿಕೆಟ್ ಕೈತಪ್ಪಿದಾಗ ನೋವಾಗುವುದು ಸಹಜ. ಏನೇ ಆಗಿದ್ದರೂ ಅದು ಪಕ್ಷದ ವರಿಷ್ಠರ ತೀರ್ಮಾನ. ಈಶ್ವರಪ್ಪನವರೂ ನಮ್ಮೊಂದಿಗೆ ಇರುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read