ಲಂಡನ್‌ನಲ್ಲಿನ ಭಾರತೀಯ ಹೈಕಮಿಷನ್‌ ಕಟ್ಟಡದಿಂದ ಭಾರತ ಧ್ವಜ ಕೆಳಗಿಳಿಸಿದ್ದ ಖಲಿಸ್ತಾನಿ ಪ್ರತ್ಯೇಕತಾವಾದಿ ಸಾವು

ಖಲಿಸ್ತಾನಿ ಪ್ರತ್ಯೇಕತಾವಾದಿ ಅವತಾರ್ ಸಿಂಗ್ ಖಂಡಾ ಇಂಗ್ಲೆಂಡ್ ನಲ್ಲಿ ನಿಧನರಾಗಿದ್ದಾರೆ. ಆತ ಜೈಲಿನಲ್ಲಿರುವ ಖಲಿಸ್ತಾನಿ ಪ್ರತ್ಯೇಕತಾವಾದಿ ಅಮೃತಪಾಲ್ ಸಿಂಗ್ ನಿಕಟವರ್ತಿ.

ಮೂಲಗಳ ಪ್ರಕಾರ ಅವತಾರ್ ಸಿಂಗ್ ಖಂಡಾ ಆನಾರೋಗ್ಯದ ಬಗ್ಗೆ ದೂರು ನೀಡಿದ ನಂತರ ಬರ್ಮಿಂಗ್ಹ್ಯಾಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತನ ಸಾವಿಗೆ ನಿಖರವಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಆತ ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು ಎಂದು ಕೆಲವು ವರದಿಗಳು ಸೂಚಿಸುತ್ತವೆ.

ಈ ವರ್ಷದ ಆರಂಭದಲ್ಲಿ ಅಮೃತಪಾಲ್ ಸಿಂಗ್ ಪರಾರಿಯಾಗಿರುವಾಗ ಅವತಾರ್ ಸಿಂಗ್ ಖಾಂಡಾ ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್‌ನಲ್ಲಿ ಪ್ರತಿಭಟನೆಯ ನೇತೃತ್ವ ವಹಿಸಿದ್ದ.

ಮಾರ್ಚ್‌ನಲ್ಲಿ ಅಮೃತಪಾಲ್ ಸಿಂಗ್ ಅವರ ಮೇಲಿನ ಪೊಲೀಸ್ ದಾಳಿಯನ್ನು ಪ್ರತಿಭಟಿಸಿ ಖಲಿಸ್ತಾನಿ ಪ್ರತ್ಯೇಕತಾವಾದಿಗಳು ಭಾರತೀಯ ಹೈಕಮಿಷನ್‌ನಲ್ಲಿ ಬೃಹತ್ ಭಾರತೀಯ ಧ್ವಜವನ್ನು ಕೆಳಗಿಳಿಸಿದ್ದರು.

ಅವತಾರ್ ಸಿಂಗ್ ಖಾಂಡಾ ಈ ಪ್ರತಿಭಟನೆಯ ನೇತೃತ್ವ ವಹಿಸಿದ್ದ. ಈ ಪ್ರತಿಭಟನೆ ಬಗ್ಗೆ ಭಾರೀ ವಿರೋಧ ವ್ಯಕ್ತವಾಗಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read