ಸಿಐಎಸ್‌ಎಫ್ ಸಿಬ್ಬಂದಿ ವಿರುದ್ದ ಗುರುತರ ಆರೋಪ ಮಾಡಿದ ಆಸ್ಟ್ರೇಲಿಯನ್‌ ಮಹಿಳೆ

ದೆಹಲಿ ವಿಮಾನ ನಿಲ್ದಾಣದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೇಶೀಯ ವಿಭಾಗಕ್ಕೆ ವರ್ಗಾವಣೆಯಾಗುತ್ತಿದ್ದಾಗ ಎಕ್ಸ್‌ರೇ ತಪಾಸಣೆ ವೇಳೆ ತನ್ನ ಕೈಚೀಲದಿಂದ ₹50,000 ಮೌಲ್ಯದ ಚಿನ್ನಾಭರಣ ಮತ್ತು ವಿದೇಶಿ ಕರೆನ್ಸಿಗಳನ್ನು ಕಳವು ಮಾಡಲಾಗಿದೆ ಎಂದು ಆಸ್ಟ್ರೇಲಿಯಾದ ಮಹಿಳೆಯೊಬ್ಬರು ಆರೋಪಿಸಿ ಅಪರಿಚಿತ ಸಿಐಎಸ್‌ಎಫ್ ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

40 ವರ್ಷದ ಅಕೇಶ್ನಿ ಸಿಂಗ್ ಗೌರ್ ಅವರು ಏರ್ ಇಂಡಿಯಾ ವಿಮಾನದಲ್ಲಿ ಸಿಡ್ನಿಯಿಂದ ದೆಹಲಿಗೆ ಹೋಗುವಾಗ ಈ ಘಟನೆ ನಡೆದಿದೆ. ಆಗಸ್ಟ್ 11 ರಂದು ವಿಮಾನಯಾನ ಸಂಸ್ಥೆಯ ಸಂಪರ್ಕ ವಿಮಾನವನ್ನು ಹೈದರಾಬಾದ್‌ಗೆ ತೆಗೆದುಕೊಂಡು ಈ ಅಹಿತಕರ ಘಟನೆಯನ್ನು ಎದುರಿಸಿದ್ದಾರೆ. ಮಾವನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಬಂದಾಗ ಘಟನೆ ನಡೆದಿರುವುದಾಗಿ ಹೇಳಿದ್ದಾರೆ.

ಇಬ್ಬರು ಚಿಕ್ಕ ಮಕ್ಕಳೊಂದಿಗೆ ತಾಯಿ ಒಬ್ಬಂಟಿಯಾಗಿ ಪ್ರಯಾಣಿಸುತ್ತಿರುವುದನ್ನು ತಿಳಿದುಕೊಂಡು ನನ್ನ ದುರ್ಬಲತೆಯ ಲಾಭವನ್ನು ಪಡೆದರು ಎಂದು ಅವರು ಹೇಳಿದ್ದಾರೆ. ಗೌರ್ ಅವರು ಹೈದರಾಬಾದ್‌ಗೆ ತಲುಪಿದ ನಂತರ ಕಳ್ಳತನದ ಬಗ್ಗೆ ಅರಿವಾಯಿತು. ಭದ್ರತಾ ಸಿಬ್ಬಂದಿ ಭಾಗಿಯಾಗಿರುವ ಬಲವಾದ ಶಂಕೆ ಇದೆ ಎಂದಿದ್ದಾರೆ.

ಅಧಿಕಾರಿಗಳಿಗೆ ಎಷ್ಟು ದೂರು ನೀಡಿದರೂ ಪ್ರಯೋಜನ ಆಗಲಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಅವರು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read