BIG NEWS: ಕ್ಲೀನರ್ ಗೆ ಇರಿದಿದ್ದ ಭಾರತೀಯ ಮೂಲದ ವ್ಯಕ್ತಿಯನ್ನು ಗುಂಡು ಹಾರಿಸಿ ಹತ್ಯೆಗೈದ ಆಸ್ಟ್ರೇಲಿಯಾ ಪೊಲೀಸ್

ಸಿಡ್ನಿಯ ಅಬ್ಬರ್ನ್ ರೈಲು ನಿಲ್ದಾಣದಲ್ಲಿ ಕ್ಲೀನರ್ ಓರ್ವನಿಗೆ ಚಾಕುವಿನಿಂದ ಇರಿದು ಆ ಬಳಿಕ ಪೊಲೀಸರ ಮೇಲೆಯೂ ಹಲ್ಲೆ ಮಾಡಲು ಯತ್ನಿಸಿದ ಭಾರತೀಯ ಮೂಲದ ವ್ಯಕ್ತಿಯನ್ನು ಆಸ್ಟ್ರೇಲಿಯಾ ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ತಮಿಳುನಾಡಿನ 32 ವರ್ಷದ ಮಹಮ್ಮದ್ ರಹಮತ್ ಉಲ್ಲಾ ಸಯ್ಯದ್ ಅಹ್ಮದ್ ಹತ್ಯೆಯಾದವನಾಗಿದ್ದು, ಈತ ಮಂಗಳವಾರದಂದು ರೈಲು ನಿಲ್ದಾಣದಲ್ಲಿ ಕ್ಲೀನರ್ ಮೇಲೆ ದಾಳಿ ನಡೆಸಿದ್ದ.

ವಿಷಯ ತಿಳಿದ ಇಬ್ಬರು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬಂದಿದ್ದು, ಆಗ ಅವರ ಮೇಲೆಯೂ ಆರೋಪಿ ಹಲ್ಲೆ ಮಾಡಲು ಯತ್ನಿಸಿದ್ದ. ಆಗ ಅನಿವಾರ್ಯವಾಗಿ ಪೋಲೀಸರು ಗುಂಡು ಹಾರಿಸಿದ್ದು ಇದರ ಪರಿಣಾಮ ತೀವ್ರ ಗಾಯಗೊಂಡಿದ್ದ ಅವನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read