ಬೆಂಗಳೂರು : ಅಲ್ಪಸಂಖ್ಯಾತರ ನಿರ್ದೇಶನಾಲಯ ಮತ್ತು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಪರಸ್ಪರ ಒಡಂಬಡಿಕೆಯೊಂದಿಗೆ ದೂರ ಶಿಕ್ಷಣ ಮಾದರಿಯಲ್ಲಿ ಪದವಿ/ಸ್ನಾತ್ತಕೋತ್ತರ ಪದವಿಯ ಉನ್ನತ ಶಿಕ್ಷಣವನ್ನು ಹಾಗೂ ವಿವಿಧ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳ ಶಿಕ್ಷಣವನ್ನು ಪದವಿ ಶಿಕ್ಷಣದಿಂದ ಹೊರಗುಳಿದ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ನೀಡುವ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ತಿದ್ದುಪಡಿ ಮಾಡಿದೆ.
ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಅಲ್ಪಸಂಖ್ಯಾತರ ನಿರ್ದೇಶನಾಲಯ ಮತ್ತು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಪರಸ್ಪರ ಒಡಂಬಡಿಕೆಯೊಂದಿಗೆ ದೂರ ಶಿಕ್ಷಣ ಮಾದರಿಯಲ್ಲಿ ಪದವಿ/ಸ್ನಾತ್ತಕೋತ್ತರ ಪದವಿಯ ಉನ್ನತ ಶಿಕ್ಷಣವನ್ನು ಹಾಗೂ ವಿವಿಧ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳ ಶಿಕ್ಷಣವನ್ನು ಪದವಿ ಶಿಕ್ಷಣದಿಂದ ಹೊರಗುಳಿದ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ನೀಡುವ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದೆ ಮತ್ತು ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು 25.08.2025 ಎಂದು ನಿಗದಿಪಡಿಸಲಾಗಿತ್ತು.
ಸದರಿ ಮಾಹಿತಿಯನ್ನು ಉಲ್ಲೇಖಿತ ಪತ್ರದಲ್ಲಿರುವಂತೆ, ಪತ್ರಿಕಾ ಪ್ರಕಟಣೆಯನ್ನು ದಿ:-02.07.2025 ರಂದು ಇದೀಗ, ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು 10.08.2025 ಎಂದು ಪ್ರಕಟಿಸಲಾಗಿತ್ತು. ಪರಿಷ್ಕರಿಸಲಾಗಿದೆ.
ಆದ್ದರಿಂದ, ಈ ಮಾಹಿತಿಯನ್ನು ರಾಜ್ಯದಲ್ಲಿ ಹೆಚ್ಚು ಪ್ರಸರಣ ಹೊಂದಿರುವ ಕನ್ನಡ ಭಾಷೆಯ 03, ಇಂಗ್ಲೀಷ್ ಭಾಷೆಯ 02 ಹಾಗೂ ಉರ್ದು ಭಾಷೆಯ 02 ದಿನ ಪತ್ರಿಕೆಗಳಲ್ಲಿ ದಿನಾಂಕ:-05.08.2025 ರಂದು ಪ್ರಕಟಿಸಲು ಕೋರಿದೆ ಹಾಗೂ ಪ್ರಕಟಿಸಬೇಕಾದ ಮಾಹಿತಿಯನ್ನು ಪತ್ರಕ್ಕೆ ಲಗತ್ತಿಸಿದೆ. ಪ್ರಕಟಣೆಯನ್ನು ಪ್ರಕಟಿಸಿ ಬಿಲ್ಲುಗಳನ್ನು ನಿಯಮಾನುಸಾರ ತ್ರಿಪತ್ರಿಯೊಂದಿಗೆ ನಿರ್ದೇಶನಾಲಯಕ್ಕೆ ಸಲ್ಲಿಸುವುದು.
ಆನ್ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ:- 01.07.2025
ಆನ್ಲೈನ್ ಅರ್ಜಿ ಸಲ್ಲಿಸಲು ತಿದ್ದುಪಡಿ ಮಾಡಿದ ಕೊನೆಯ ದಿನಾಂಕ:- 10.08.2025
