‘SBI’ ಬ್ಯಾಂಕ್ ಗ್ರಾಹಕರ ಗಮನಕ್ಕೆ : ಸೆಪ್ಟೆಂಬರ್ ನಲ್ಲಿ ತಪ್ಪದೇ ಈ ಎರಡು ಕೆಲಸ ಮಾಡಿ

ನವದೆಹಲಿ : ಎಸ್ ಬಿ ಐ ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಮಾಹಿತಿ ನೀಡಿದ್ದು, ಸೆಪ್ಟೆಂಬರ್ ನಲ್ಲಿ ಈ ಎರಡು ಕೆಲಸ ಮಾಡುವುದು ಕಡ್ಡಾಯವಾಗಿದೆ.

ಬ್ಯಾಂಕ್ ಖಾತೆ ಜೊತೆ ಆಧಾರ್ ಲಿಂಕ್ ಕಡ್ಡಾಯ

ಸೆಪ್ಟೆಂಬರ್ 15 ರೊಳಗೆ ಬ್ಯಾಂಕ್ ಖಾತೆ ಜೊತೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ ಎಸ್ ಬಿ ಐ ತಿಳಿಸಿದೆ.ಈಗಾಗಲೇ ಸರ್ಕಾರ ಎಲ್ಲಾ ಯೋಜನೆಯ ಹಣವನ್ನು ಆಧಾರ್ ಲಿಂಕ್ ಆದ ಖಾತೆಗೆ ಜಮಾ ಮಾಡಲಾಗುತ್ತಿರುವ ಹಿನ್ನೆಲೆ ಬ್ಯಾಂಕ್ ಜೊತೆ ಆಧಾರ್ ಲಿಂಕ್ ಕಡ್ಡಾಯವಾಗಿದೆ. ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ಮತ್ತು ಅಟಲ್ ಪಿಂಚಣಿ ಯೋಜನೆ ಮುಂತಾದ ಯೋಜನೆಗಳನ್ನು ಒಳಗೊಂಡಿದೆ. ಆಧಾರ್ ಲಿಂಕ್ ಮಾಡಿದಾಗ ನೀವು ಯೋಜನೆಯ ಸೌಲಭ್ಯವನ್ನು ಪಡೆಯಬಹುದಾಗಿದೆ ಎಸ್ ಬಿ ಐ ಹೇಳಿದೆ.

ಲಾಕರ್ ಒಪ್ಪಂದಕ್ಕೆ ಸಹಿ

ಅದೇ ರೀತಿ ಬ್ಯಾಂಕ್ ಎಲ್ಲಾ ಲಾಕರ್ ಹೊಂದಿರುವವರಿಗೆ ತಮ್ಮ ಶಾಖೆಗೆ ಭೇಟಿ ನೀಡಿ ಹೊಸ ಲಾಕರ್ ಒಪ್ಪಂದಕ್ಕೆ ಸಹಿ ಹಾಕುವಂತೆ ಸೂಚನೆ ನೀಡಿತ್ತು. ಸೆ.30 ರೊಳಗೆ ಬ್ಯಾಂಕಿನ ಶಾಖೆಗೆ ಬಂದು ಹೊಸ ಲಾಕರ್ ಒಪ್ಪಂದಕ್ಕೆ ಆದಷ್ಟು ಬೇಗ ಸಹಿ ಹಾಕುವಂತೆ ಕೇಳಿದೆ. ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಲಾಕರ್ ನಿಯಮಗಳನ್ನು ಹೊರಡಿಸಿದೆ. ಬ್ಯಾಂಕಿನ ಶಾಖೆಗೆ ಬಂದು ಹೊಸ ಲಾಕರ್ ಒಪ್ಪಂದಕ್ಕೆ ಆದಷ್ಟು ಬೇಗ ಸಹಿ ಹಾಕುವಂತೆ ಕೇಳಿದೆ.ಪರಿಷ್ಕೃತ ಲಾಕರ್ ಒಪ್ಪಂದದ ಬಗ್ಗೆ ಬ್ಯಾಂಕ್ ಮಾಹಿತಿ ನೀಡಿದ್ದು, ಹೊಸ ಲಾಕರ್ ಒಪ್ಪಂದಕ್ಕೆ ಸಹಿ ಹಾಕಲು ನಮ್ಮ ಎಲ್ಲಾ ಗ್ರಾಹಕರು ಆದಷ್ಟು ಬೇಗ ಶಾಖೆಗೆ ಭೇಟಿ ನೀಡುವಂತೆ ನಾವು ಒತ್ತಾಯಿಸುತ್ತೇವೆ. ಸಹಿ ಮಾಡುವ ಮೊದಲು ಗ್ರಾಹಕರು ಹೊಸ ಒಪ್ಪಂದದ ಸೂಚನೆಯನ್ನು ಓದಬೇಕು ಎಂದು ಹೇಳಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read