ವಾಹನ ಸವಾರರ ಗಮನಕ್ಕೆ : ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇಗೆ ಹೀಗಿದೆ ಪರ್ಯಾಯ ಮಾರ್ಗ

ಬೆಂಗಳೂರು : ವಾಹನ ಸವಾರರ ಸುರಕ್ಷತೆಯ ನಿಟ್ಟಿನಲ್ಲಿ ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ಹೈವೆಯಲ್ಲಿ ದ್ವಿಚಕ್ರ, ತ್ರಿಚಕ್ರ ವಾಹನಗಳನ್ನು ನಿಷೇಧಿಸಿದ್ದು, ಎಕ್ಸ್ ಪ್ರೆಸ್ ವೇಗೆ  ಪರ್ಯಾಯ ಮಾರ್ಗ ಸೂಚಿಸಲಾಗಿದೆ.

ಹೌದು, . ವಾಹನಗಳು ಟೋಲ್ ಫ್ರೀ ಸರ್ವೀಸ್ ರಸ್ತೆಯನ್ನು ಬಳಸಿಕೊಳ್ಳಬಹುದು. ಸರ್ವೀಸ್ ರಸ್ತೆಗಳು ವಾಹನಗಳ ಬಳಕೆಗೆ ಲಭ್ಯವಿವೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತಿಳಿಸಿದೆ. ದ್ವಿಚಕ್ರ, ತ್ರಿಚಕ್ರ ವಾಹನಗಳು ಸರ್ವೀಸ್ ರಸ್ತೆಯಲ್ಲಿ 79.6 ಕಿಮೀ ಮತ್ತು ಹಳೆಯ ಮೈಸೂರು ರಸ್ತೆಯಲ್ಲಿ 35.4 ಕಿಮೀ ಸಂಚರಿಸಬಹುದು. ರೈಲ್ವೆ ಮೇಲ್ಸೇತುವೆಗಳಿಂದಾಗಿ ಅಡಚಣೆಯಿದ್ದ ಸ್ಥಳಗಳಲ್ಲಿ ವಾಹನಗಳು ಹಳೆಯ ಮೈಸೂರು ರಸ್ತೆಯನ್ನು ಬಳಸಬಹುದು ಎಂದು ಸೂಚನೆ ನೀಡಲಾಗಿದೆ.

ಬೆಂಗಳೂರು – ಮೈಸೂರು ಎಕ್ಸ್ ಪ್ರೆಸ್ ವೇ ನಲ್ಲಿ ಆಟೋ, ಬೈಕ್, ಮಲ್ಟಿ ಆಕ್ಸೆಲ್ ಹೈಡ್ರಾಲಿಕ್ ವಾಹನಗಳು, ಟ್ರ್ಯಾಕ್ಟರ್, ಕ್ವಾಡ್ರಿ ಚಕ್ರಗಳ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ನಿರ್ಬಂಧ ವಿಧಿಸಲಾಗಿರುವ ವಾಹನಗಳು ಕಡ್ಡಾಯವಾಗಿ ಸರ್ವಿಸ್ ರಸ್ತೆಯಲ್ಲಿಯೇ ಸಂಚರಿಸಲು ಸೂಚಿಸಲಾಗಿದೆ.ಒಂದೊಮ್ಮೆ ನಿಯಮ ಮೀರಿ ಈ ವಾಹನಗಳು ಎಕ್ಸ್ ಪ್ರೆಸ್ ವೇ ನಲ್ಲಿ ಸಂಚರಿಸಿದರೆ 500 ರೂಪಾಯಿ ದಂಡ ಪಾವತಿಸಬೇಕಿದ್ದು, ಇದರ ಪರಿಶೀಲನೆಗಾಗಿ ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿಯೇ ಒಟ್ಟು 9 ಕಡೆ ಪೊಲೀಸರಿಂದ ತಪಾಸಣೆ ನಡೆಸಲಾಗುತ್ತದೆ.

ಇನ್ನು ಎಕ್ಸ್ ಪ್ರೆಸ್ ವೇ ನಲ್ಲಿ ಚಲಿಸುವ ವಾಹನಗಳಿಗೂ ವೇಗಮಿತಿಯನ್ನು ನಿಗದಿಪಡಿಸಲಾಗಿದ್ದು, ಎಡ ಭಾಗದಲ್ಲಿ ಸಂಚರಿಸುವ ವಾಹನಗಳು 60 ಕಿ.ಮೀ., ಮಧ್ಯದಲ್ಲಿ ಸಂಚರಿಸುವ ವಾಹನಗಳು 80 ಕಿ.ಮೀ. ಹಾಗೂ ಬಲ ಭಾಗದಲ್ಲಿ ಚಲಿಸುವ ವಾಹನಗಳು 100 ಕಿಲೋಮೀಟರ್ ಗರಿಷ್ಠ ಮಿತಿ ಮೀರದಂತೆ ತಿಳಿಸಲಾಗಿದೆ.

 

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read