JOB ALERT : ಉದ್ಯೋಗಾಂಕ್ಷಿಗಳ ಗಮನಕ್ಕೆ : ವಿವಿಧ ಹುದ್ದೆಗಳಿಗೆ ನಾಳೆ ಕಲಬುರಗಿಯಲ್ಲಿ ನೇರ ಸಂದರ್ಶನ

ಕಲಬುರಗಿ : ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಇದೇ ಜುಲೈ 27 ರಂದು ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕಲಬುರಗಿ ಸರ್ಕಾರಿ ಐಟಿಐ ಕಾಲೇಜು ಹಿಂದುಗಡೆಯಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ನೇರ ಸಂದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಕಂಪನಿಗಳ ವಿವರ ಇಂತಿದೆ. ಕಲಬುರಗಿಯ ಸುಭಾಷ ಮೆಮೋರಿಯಲ್ ಏಜ್ಯುಕೇಷನ್ ಸೊಸೈಟಿಯಲ್ಲಿ ರಿಸಿಪ್ನಿಸ್ಟ್ ಹುದ್ದೆಗೆ ಯಾವುದೇ ಪದವಿ ಪಾಸಾಗಿರಬೇಕು. ಸಮಾಜ ವಿಜ್ಞಾನ ಶಿಕ್ಷಕರ ಹುದ್ದೆಗೆ ಬಿ.ಎ., ಬಿ.ಎಡ್ / ಎಮ್.ಎ. ಬಿ.ಎಡ್. ವಿದ್ಯಾರ್ಹತೆ ಹೊಂದಿರಬೇಕು. ರಾಸಾಯನಶಾಸ್ತç (ಕೆಮಿಸ್ಟಿç) ಶಿಕ್ಷಕರ ಹುದ್ದೆಗೆ ಬಿ.ಎಸ್.ಸಿ. ಬಿ.ಎಡ್., ಎಮ್.ಎಸ್.ಸಿ. ಬಿ.ಎಡ್. ವಿದ್ಯಾರ್ಹತೆ ಹೊಂದಿರಬೇಕು. ಅಕ್ಯಾಡಮಿಕ್ ಕೋ-ಆಡಿನೇಟರ್ ಹುದ್ದೆಗೆ ಯಾವುದೇ ಪದವಿ ಪಾಸಾಗಿರಬೇಕು. ವಯೋಮಿತಿ ೧೮ ರಿಂದ ೪೦ ವರ್ಷದೊಳಗಿರಬೇಕು.

ಆದಿತ್ಯ ಬಿರ್ಲಾ ಲೈಫ್ ಇನ್ಸುರೆನ್ಸ್ದಲ್ಲಿ ಏಜೆನ್ಸಿ ಪಾರ್ಟರ್ / ಅಸೋಸಿಯೇಟ್ ಏಜೆನ್ಸಿ ಪಾರ್ಟರ್ ಹುದ್ದೆಗೆ ಪಿ.ಯು.ಸಿ./ಯಾವುದೇ ಪದವಿ ಪಾಸಾಗಿರಬೇಕು. ವಯೋಮಿತಿ ೧೮ ರಿಂದ ೩೫ ವರ್ಷದೊಳಗಿರಬೇಕು.
ಬಸವಕಲ್ಯಾಣದ ಸ್ಮಾರ್ಟ್ ಕಿಡ್ಸ್ ಪಬ್ಲಿಕ್ ಹೈಯರ್  ಪ್ರೈಮರಿ  ಸ್ಕೂಲ್ ಆಂಗ್ಲ ಶಿಕ್ಷಕರ ಹುದ್ದೆಗೆ ಎಮ್.ಎ., ಬಿ.ಎಡ್. ವಿದ್ಯಾರ್ಹತೆ ಹೊಂದಿರಬೇಕು. ಸಮಾಜ ವಿಜ್ಞಾನ ಶಿಕ್ಷಕರ ಹುದ್ದೆಗೆ ಎಮ್.ಎ., ಬಿ.ಎಡ್. ವಿದ್ಯಾರ್ಹತೆ ಹೊಂದಿರಬೇಕು. ಕಂಪ್ಯೂಟರ್ ಶಿಕ್ಷಕರ ಹುದ್ದೆಗೆ ಬಿ.ಸಿ.ಎ. /ಬಿ.ಎಸ್.ಸಿ. (ಸಿ.ಎಸ್) ಎಮ್.ಸಿ.ಎ /ಎಮ್.ಎಸ್.ಸಿ. (ಸಿ.ಎಸ್.) ವಿದ್ಯಾರ್ಹತೆ ಹೊಂದಿರಬೇಕು. ಇ.ವಿ.ಎಸ್. ಹುದ್ದೆಗೆ ಬಿ.ಎಸ್.ಸಿ., ಎಮ್.ಎಸ್.ಸಿ. ವಿದ್ಯಾರ್ಹತೆ ಹೊಂದಿರಬೇಕು.
ಗುಮಾಸ್ತ ಹುದ್ದೆಗೆ ಎಸ್.ಎಸ್.ಎಲ್.ಸಿ. ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ ೧೮ ರಿಂದ ೪೦ ವರ್ಷದೊಳಗಿರಬೇಕು.

ಆಸಕ್ತ ಅಭ್ಯರ್ಥಿಗಳು ತಮ್ಮ ಎಲ್ಲಾ ಅಂಕಪಟ್ಟಿಗಳ ಝೆರಾಕ್ಸ್, ರೆಸ್ಯೂಮ್ (ಬಯೋಡಟಾ), ಭಾವಚಿತ್ರಗಳು ಹಾಗೂ ಆಧಾರ್ ಕಾರ್ಡ್ದೊಂದಿಗೆ ಮೇಲ್ಕಂಡ ದಿನದಂದು ನಡೆಯುವ ನೇರ ಸಂದರ್ಶನದಲ್ಲ್ಲಿ ಭಾಗವಹಿಸಬಹುದಾಗಿದೆ. ನೇರ ಸಂದರ್ಶನದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಯಾವುದೇ ತರಹದ ಭತ್ಯೆ ನೀಡಲಾಗುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ ೦೮೪೭೨-೨೭೪೮೪೬, ಮೊಬೈಲ್ ಸಂಖ್ಯೆ ೯೬೨೦೦೯೫೨೭೦ ಗೆ ಸಂಪರ್ಕಿಸಲು ಕೋರಲಾಗಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read