ರಾಜ್ಯದ ಮೀನುಗಾರರೇ ಗಮನಿಸಿ : ‘ಮೀನುಗಾರಿಕೆ ಇಲಾಖೆ’ಯಿಂದ ಸಿಗುವ ಎಲ್ಲಾ ಯೋಜನೆಗಳ ಬಗ್ಗೆ ಇಲ್ಲಿದೆ ಮಾಹಿತಿ

ಬೆಂಗಳೂರು :   ರಾಜ್ಯದಲ್ಲಿ ಮೀನುಗಾರಿಕೆ ಅಭಿವೃದ್ಧಿಗಾಗಿ ಮೀನುಗಾರಿಕೆ ಇಲಾಖೆ ಹಲವು ಯೋಜನೆಗಳನ್ನ ಜಾರಿಗೆ ತಂದಿದೆ. ಮತ್ಸ, ಕೃಷಿ ಆಶಾ ಕಿರಣ” ಯೋಜನೆಯಡಿ ಕೆರೆಗಳಲ್ಲಿ ಮೀನು ಉತ್ಪಾದನೆಯನ್ನು ಹೆಚ್ಚಿಸಲು ಹಾಗೂ ಮೀನು ಕೃಷಿಗೆ ಉತ್ತೇಜನ ನೀಡಲು, ಪ್ರತಿ ಹೆಕ್ಟೇರ್‌ಗೆ 4,000 ಬಲಿತ ಮೀನು ಮರಿಗಳನ್ನು ಹಾಗೂ 2 ಟನ್ ಕೃತಕ ಆಹಾರವನ್ನು ಖರೀದಿಸಲು ಘಟಕ ವೆಚ್ಚದ ಶೇ.50 ರಷ್ಟು ಹಾಗೂ ಗರಿಷ್ಠ 27,000 ರೂ.ಗಳನ್ನು ನೀಡಲಾಗುತ್ತಿದೆ.

ಮೀನುಗಾರಿಕೆ ಇಲಾಖೆಯಿಂದ ಸಿಗುವ ಎಲ್ಲಾ ಯೋಜನೆಗಳ ಬಗ್ಗೆ ಇಲ್ಲಿದೆ ಮಾಹಿತಿ

b. ರಾಜ್ಯದ ಜಲ ಪ್ರದೇಶದಲ್ಲಿ ಪ್ರತಿ ಹೆಕ್ಟೇರ್ ಉಪಯುಕ್ತತಾ ಜಲವಿಸ್ತೀರ್ಣಕ್ಕೆ 2000 ಬಲಿತ ಬಿತ್ತನೆ ಮೀನುಮರಿಗಳನ್ನು ಮೀನುಗಾರರ ಸಹಕಾರ ಸಂಘಗಳ ಮುಖಾಂತರ ಉಚಿತವಾಗಿ ಬಿತ್ತನೆ ಮಾಡಿ ಒಳನಾಡು ಮೀನು ಉತ್ಪಾದನೆಯನ್ನು ಹೆಚ್ಚಿಸಲು “ಒಳನಾಡು ಮೀನು ಕೃಷಿಗೆ ಪ್ರೋತ್ಸಾಹ” ಯೋಜನೆಯಡಿ ಮರಿಗಳನ್ನು ಬಿತ್ತನೆ ಮಾಡಲಾಗುತ್ತಿದೆ.

C. ಸರ್ಕಾರ ಸ್ವಾಮ್ಯದ ಉತ್ಪಾದನಾ ಮತ್ತು ಪಾಲನಾ ಕೆಂದ್ರಗಳಿಂದ ಖರೀದಿಸಿದ ಎಲ್ಲಾ ತಳಿಗಳ ಮೀನುಮರಿ ಬೆಲೆಯ ಶೇ.50 ರಷ್ಟು ಅಂದರೆ ವ್ಯಕ್ತಿಗತ ಗರಿಷ್ಠ ರೂ.5,000/- ಹಾಗೂ ಸಂಘ ಸಂಸ್ಥೆಗಳಿಗೆ ಗರಿಷ್ಠ ರೂ.20,000/- ಕ್ಕೆ ಮಿತಿಗೊಳಪಟ್ಟು ಸಹಾಯಧನವನ್ನು ನೀಡಲಾಗುವುದು. ಮೀನುಗಾರಿಕೆ ಇಲಾಖೆಯಿಂದ ನೋಂದಾಯಿಸಿಕೊಂಡು ಸ್ವಂತ ಕೊಳಗಳಲ್ಲಿ ಮೀನು ಮರಿ ಪಾಲನೆ ಕೈಗೊಳ್ಳಲು ಮೀನು ಕೃಷಿಕರಿಗೆ ಪ್ರತಿ ಹೆಕ್ಟೇರ್ ಜಲವಿಸ್ತೀರ್ಣಕ್ಕೆ 50 ಲಕ್ಷ ಸ್ಪಾನ್ ಅಥವಾ 10 ಲಕ್ಷ ಪ್ರೈ ಖರೀದಿಸಲು ಶೇ.50 ರಷ್ಟು ಗರಿಷ್ಠ ರೂ.25,000 ಗಳ ಸಹಾಯಧನ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

d. ಸಮಗ್ರ ಮೀನು ಕೃಷಿಗೆ ಕ್ಲಸ್ಟರ್ ಮಾದರಿಯಲ್ಲಿ ಆಯ್ದ 14 ಜಂಟಿ ತಾಲ್ಲೂಕುಗಳಲ್ಲಿ ಸಮಗ್ರವಾಗಿ ಮತ್ತು ಸುಸಂಘಟಿತ ಮಾದರಿಯಲ್ಲಿ ಮೀನು ಕೃಷಿಯ ಅಭಿವೃದ್ಧಿಯನ್ನು ಕೈಗೊಳ್ಳಲಾಗುವುದು. ಈ ಯೋಜನೆಯಡಿ ಕೃಷಿಕರಿಗೆ ಮೀನು ಸಾಕಾಣಿಕೆಗೆ ಕೊಳ ಮತ್ತು ಇತರೆ ಮೂಲಭೂತ ಸೌಕರ್ಯಗಳ ಸೃಷ್ಟಿಗೆ ಸಹಾಯಧನ ನೀಡಲಾಗುವುದು. ಕ್ಲಸ್ಟರ್ ಪ್ರದೇಶದಲ್ಲಿ ಕೃಷಿಗೆ ಅನುಪಯುಕ್ತವಾಗಿರುವ ಚೌಗು-ಚೌಳು ಪ್ರದೇಶಗಳಲ್ಲಿ ಮೀನು ಸಾಕಾಣಿಕೆಗೆ ಆದ್ಯತೆ ನೀಡಲಾಗುವುದು.

2. ಹೊಸ ಘಟಕ:ರಾಜ್ಯದಲ್ಲಿ ಲಭ್ಯವಿರುವ ಒಳನಾಡು ಹಾಗೂ ಹಿನ್ನೀರು ಜಲಸಂಪನ್ಮೂಲಗಳಲ್ಲಿ ಸಿಗಡಿ ಮತ್ತು ಮೀನು ಕೃಷಿಯನ್ನು ಪ್ರೋತ್ಸಾಹಿಸಲು ಪ್ರತಿ ಹೆಕ್ಟೇರ್ ವಿಸ್ತೀರ್ಣಕ್ಕೆ 1 ಲಕ್ಷ ರೂ.ಗಳ ಘಟಕ ವೆಚ್ಚಕ್ಕೆ ಶೇ.50 ರಷ್ಟು ಸಹಾಯಧನ ನೀಡಲಾಗುವುದು. ಪ್ರಸಕ್ತ ಸಾಲಿನಲ್ಲಿ 400 ಘಟಕಗಳಿಗೆ ಸಹಾಯಧನ ನೀಡುವ ಉದ್ದೇಶಿಸಲಾಗಿದೆ.

3. ಜಲಾಶಯಗಳಲ್ಲಿ ಮೀನು ಮರಿ ಬಿತ್ತನೆ ರಾಜ್ಯದ ಆಯ್ದ ಜಲಾಶಯಗಳಲ್ಲಿ ಬೆರಳುದ್ದದ ಮೀನು ಮರಿ (Advanced fingerlings) ಬಿತ್ತನೆ ಮಾಡುವ ಮೂಲಕ ಮೀನುಗಾರಿಕೆ ಅಭಿವೃದ್ಧಿ ಕೈಗೊಳ್ಳುವುದು. ಅಗತ್ಯವಾದ ಬೆರಳುದ್ದದ ಮೀನುಮರಿಗಳನ್ನು ನೊಂದಾಯಿತ ಮೀನುಮರಿ ಸಾಕಾಣಿಕೆದಾರರಿಂದ ಸರ್ಕಾರವು ನಿಗದಿಪಡಿಸಿದ ದರದಲ್ಲಿ ಖರೀದಿಸಲಾಗುವುದು.

4. PMMSY ಮೀನುಗಾರಿಕೆ ಸಮಗ್ರ ಅಭಿವೃದ್ಧಿ ಮತ್ತು ನಿರ್ವಹಣೆ (ಕೇಂದ್ರ ಪುರಸ್ಕೃತ ಯೋಜನೆ) ಕೇಂದ್ರ ಸರ್ಕಾರದ ಯೋಜನೆಯಡಿ ಕರಾವಳಿ ಮೀನುಗಾರಿಕೆ, ಮೂಲಭೂತ ಸೌಲಭ್ಯ ಮತ್ತು ಹಿಡುವಳಿ ನಂತರದ ಕಾರ್ಯಾಚರಣೆಗಳ ಅಭಿವೃದ್ಧಿ, ಮೀನುಗಾರರ ಕಲ್ಯಾಣಕ್ಕಾಗಿ ರಾಷ್ಟ್ರೀಯ ಯೋಜನೆ, ಒಳನಾಡು ಮೀನುಗಾರಿಕೆ ಮತ್ತು ಜಲಕೃಷಿ ಅಭಿವೃದ್ಧಿ, ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ ಮತ್ತು ಅದರ ಚಟುವಟಿಕೆಗಳು ಮತ್ತು ಇತರೆ ಕಾರ್ಯಕ್ರಮಗಳನ್ನು ಕೇಂದ್ರ ಸರ್ಕಾರದ ನೆರವಿನೊಂದಿಗೆ ಅನುಷ್ಠಾನಗೊಳಿಸಲು ಅವಕಾಶ ಕಲ್ಪಿಸಲಾಗಿದೆ.

5.ಉತ್ತರ ಕರ್ನಾಟಕ ಒಳನಾಡು ಮೀನುಗಾರಿಕೆ ಅಭಿವೃದ್ಧಿ ಕೇಂದ್ರ ಸ್ಥಾಪನೆ

ಉತ್ತರ ಕರ್ನಾಟಕದಲ್ಲಿ ಸುಮಾರು 1.64 ಲಕ್ಷ ಹೆಕ್ಟೇರ್ ವಿಸ್ತೀರ್ಣದ ಜಲಾಶಯಗಳು 42,195 ಹೆಕ್ಟೇರ್ ವಿಸ್ತೀರ್ಣದ ದೊಡ್ಡಕೆರೆಗಳು, 20667 ಹೆಕ್ಟೇರ್ ವಿಸ್ತೀರ್ಣದ ಗ್ರಾಮ ಪಂಚಾಯತ್ ಕೆರೆಗಳು, ನದಿಗಳು ಮತ್ತು ಕಾಲುವೆಗಳಿದ್ದು, ಒಳನಾಡು ಮೀನುಗಾರಿಕೆ ಅಭಿವೃದ್ಧಿಗೆ ವಿಫುಲ ಅವಕಾಶವನ್ನು ನೀಡುತ್ತವೆ. ಈ ಹಿನ್ನೆಲೆಯಲ್ಲಿ “ನಿಜ ಶರಣ ಶ್ರೀ.ಅಂಬಿಗರ ಚೌಡಯ್ಯ ಉತ್ತರ ಕರ್ನಾಟಕ ಒಳನಾಡು ಮೀನುಗಾರಿಕೆ ಅಭಿವೃದ್ಧಿ ಸಂಸ್ಥೆ” ಎಂಬ ಸಂಸ್ಥೆಯನ್ನು ಬಾಗಲಕೋಟೆ ಸ್ಥಾಪಿಸಲಾಗಿದೆ. ಉದ್ದೇಶಿತ ಸಂಸ್ಥೆಯ ಮುಖ್ಯ ಉದ್ದೇಶಗಳೆಂದರೆ,

ಉತ್ತರ ಕರ್ನಾಟಕದ ಸಮಗ್ರ ಮೀನುಗಾರಿಕೆ ಅಭಿವೃದ್ಧಿಗೆ ಸ್ಥಳೀಯ ಅಗತ್ಯತೆಗೆ ಅನುಗುಣವಾಗಿ ಕಾರ್ಯಕ್ರಮಗಳನ್ನು ರೂಪಿಸಿ, ಅನುಷ್ಟಾನಗೊಳಿಸುವುದು.

ಅಗತ್ಯ ಯೋಜನಾ ವರದಿ ಸಿದ್ಧಪಡಿಸಿ ವಿವಿಧ ಮೂಲಗಳಿಂದ ಮೀನುಗಾರಿಕೆ ಚಟುವಟಿಕೆಗಳಿಗೆ ಅನುದಾನವನ್ನು ಪಡೆದು ಕಾರ್ಯಕ್ರಮ ಅನುಷ್ಠಾನಗೊಳಿಸುವುದು. ಮತ್ತು

ಮೀನುಗಾರಿಕೆ ಶಿಕ್ಷಣ, ಸಂಶೋಧನೆ, ವಿಸ್ತರಣೆ ಮತ್ತು ಅಭಿವೃದ್ಧಿಯಲ್ಲಿ ನಿರತರಾಗಿರುವ ಸಂಸ್ಥೆಗಳು ಹಾಗೂ ಮೀನುಗಾರರ ಸಂಘಟನೆಗಳ ಸಹಯೋಗದೊಂದಿಗೆ ಉತ್ತರ ಕರ್ನಾಟಕದ ಮೀನುಗಾರಿಕೆ ಮತ್ತು ಮೀನು ಕೃಷಿ ಅಭಿವೃದ್ಧಿಗೆ ಕ್ರಮವಹಿಸುವುದು.

6. ಸಂಕಷ್ಟ ಪರಿಹಾರ ನಿಧಿಗೆ ಅಂಶದಾನಗಳು

ಸಂಕಷ್ಟ ಪರಿಹಾರ ನಿಧಿಗೆ ಸರ್ಕಾರದಿಂದ ಮೂಲ ಬಂಡವಾಳ ನೀಡುವ ಸಲುವಾಗಿ ಆಯವ್ಯಯದಲ್ಲಿ ಅವಕಾಶ ಕಲ್ಪಿಸಲಾಗಿದೆ. ಈ ನಿಧಿಯಿಂದ ಮೀನುಗಾರಿಕೆಯಲ್ಲಿ ತೊಡಗಿರುವಾಗ ನೈಸರ್ಗಿಕ ವಿಕೋಪಗಳಿಂದ ಮರಣ ಹೊಂದಿದ ಮೀನುಗಾರರ ಅವಲಂಬಿತರಿಗೆ ಹಾಗೂ ಶಾಶ್ವತ ಅಂಗವಿಕಲರಾದ ಮೀನುಗಾರರಿಗೆ ರೂ.3.00 ಲಕ್ಷ ಪರಿಹಾರ ಮತ್ತು ಭಾಗಶಃ ಅಂಗವಿಕಲರಾದವರಿಗೆ ರೂ.1.00 ಲಕ್ಷ ಪರಿಹಾರ ನೀಡಲು ಹಾಗೂ ಬಲೆಹಾನಿ, ದೋಣಿಹಾನಿ ಮತ್ತು ವೈದ್ಯಕೀಯ ವೆಚ್ಚಗಳಿಗೆ ಗರಿಷ್ಠ ರೂ.1.00 ಲಕ್ಷ ಮೀನುಗಾರಿಕೆ ಬಂದರು/ಇಳಿದಾಣ ಕೇಂದ್ರದಲ್ಲಿ ಕೆಲಸದಲ್ಲಿದ್ದಾಗ ಮರಣ ಹೊಂದಿದಲ್ಲಿ ರೂ.1.00 ಲಕ್ಷ, ಸಮುದ್ರದಲ್ಲಿ ಮೀನುಗಾರಿಕೆಗೆ ಹೋದಾಗ ಅನಾರೋಗ್ಯದಿಂದ ಮರಣ ಹೊಂದಿದಲ್ಲಿ ರೂ.2.00 ಲಕ್ಷ ನೆರವು ನೀಡಲು ಅವಕಾಶವಿದೆ. ಸಮುದ್ರದಲ್ಲಿ ಮೀನುಗಾರಿಕೆ ಮಾಡುವಾಗ ಪ್ರಕೃತಿ ವಿಕೋಪದಿಂದ ದೋಣಿ ಅವಘಡದಿಂದ ಮೃತರಾದ ಮೀನುಗಾರರ ಕುಟುಂಬದವರಿಗೆ ರೂ 6.00 ಲಕ್ಷ ಪರಿಹಾರ ನೀಡಲಾಗುವುದು.

7. ಮತ್ಯಾ ಶ್ರಯ ಯೋಜನೆ

ಮೀನುಗಾರರಿಗೆ ವಸತಿ ಸೌಲಭ್ಯವನ್ನು ಕಲ್ಪಿಸಲು ಮತ್ಯಾಶ್ರಯ ಯೋಜನೆಯಡಿ ಅವಕಾಶ ಕಲ್ಪಿಸಲಾಗಿದೆ. ಮತ್ಯಾಶ್ರಯ ಯೋಜನೆಯಡಿ ಮನೆ ನಿರ್ಮಾಣಕ್ಕೆ ಸಾಮಾನ್ಯ ಮೀನುಗಾರರಿಗೆ ರೂ.1.20 ಲಕ್ಷ, ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಗಳ ಫಲಾನುಭವಿಗಳಿಗೆ ಗ್ರಾಮೀಣ ಪ್ರದೇಶದಲ್ಲಿ ರೂ 1.75 ಲಕ್ಷ ಹಾಗೂ ನಗರ ಪ್ರದೇಶದಲ್ಲಿ ರೂ 2.00 ಲಕ್ಷ ಸಹಾಯಧನ ನೀಡಲಾಗುವುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read