ATM ಗೆ ಹಣ ತುಂಬುವ ವಾಹನದಲ್ಲಿ ದಾಖಲೆಯಿಲ್ಲದೆ ಸಾಗಣೆ; 1.40 ಕೋಟಿ ರೂಪಾಯಿ ವಶ

ಚುನಾವಣೆ ಸಂದರ್ಭದಲ್ಲಿ ಅಕ್ರಮವಾಗಿ ಹಣ ಸಾಗಿಸಲು ಅಭ್ಯರ್ಥಿಗಳು ನಾನಾ ವಿಧಾನಗಳನ್ನು ಅನುಸರಿಸುತ್ತಾರೆ. ಆಂಬುಲೆನ್ಸ್ ಗಳಲ್ಲೂ ಸಹ ಹಣ ಸಾಗಣೆ ಮಾಡುತ್ತಿದ್ದ ಕೆಲವೊಂದು ಪ್ರಕರಣಗಳು ಈ ಹಿಂದೆ ಪತ್ತೆಯಾಗಿದ್ದವು.

ಹಾಗೆಂದು ಹಣ ಸಾಗಿಸುವ ಎಲ್ಲ ಪ್ರಕರಣಗಳು ಚುನಾವಣೆಗೆ ಸಂಬಂಧಿಸಿದ್ದು ಎಂದು ಹೇಳುವಂತಿಲ್ಲ. ಆದರೆ ಪೊಲೀಸರು ಮಾತ್ರ ಚೆಕ್ ಪೋಸ್ಟ್ ಗಳಲ್ಲಿ ಹದ್ದಿನ ಕಣ್ಣಿಟ್ಟಿದ್ದು, ಸಾಗಣೆ ಮಾಡುತ್ತಿರುವ ಹಣಕ್ಕೆ ಸೂಕ್ತ ದಾಖಲೆ ನೀಡದಿದ್ದರೆ ಅದನ್ನು ವಶಪಡಿಸಿಕೊಳ್ಳುತ್ತಿದ್ದಾರೆ.

ಇಂಥವುದೇ ಒಂದು ಘಟನೆ ಶಿವಮೊಗ್ಗ ಸಮೀಪದ ಹರಕೆರೆಯಲ್ಲಿ ನಡೆದಿದ್ದು, ಎಟಿಎಂ ಗಳಿಗೆ ಹಣ ತುಂಬುವ ವಾಹನದಲ್ಲಿ ಸೂಕ್ತ ದಾಖಲೆ ಇಲ್ಲದೆ ಸಾಗಣೆ ಮಾಡುತ್ತಿದ್ದ 1.40 ಕೋಟಿ ರೂಪಾಯಿ ನಗದನ್ನು ಶುಕ್ರವಾರದಂದು ವಶಪಡಿಸಿಕೊಳ್ಳಲಾಗಿದೆ.

ಹರಕೆರೆ ಚೆಕ್ ಪೋಸ್ಟ್ ನಲ್ಲಿ ಈ ವಾಹನವನ್ನು ಪೊಲೀಸರು ತಡೆದು ಪರಿಶೀಲಿಸಿದ ವೇಳೆ ಸಿಕ್ಕ ನಗದಿಗೆ ಸೂಕ್ತ ದಾಖಲೆಗಳು ಇರಲಿಲ್ಲ. ಅಲ್ಲದೆ ಹಣ ಪೂರೈಕೆ ಸಂಸ್ಥೆಯಿಂದ ಹೊರಟ ಸ್ಥಳ, ಹಣ ಪತ್ತೆಯಾದ ಸ್ಥಳ ಮತ್ತು ಸಮಯಕ್ಕೆ ಹೊಂದಾಣಿಕೆಯಾಗದ ಕಾರಣ ಇದನ್ನು ವಶಪಡಿಸಿಕೊಂಡು ಜಿಲ್ಲಾ ಚುನಾವಣಾ ನಿಗಾ ಸಮಿತಿ ಸುಪರ್ದಿಗೆ ನೀಡಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read