’ದಿ ಕೇರಳ ಸ್ಟೋರಿ’ ಗದ್ದಲದ ನಡುವೆಯೇ ಮದುವೆ; ಇಸ್ಲಾಂಗೆ ಮತಾಂತರಗೊಂಡ ಇನ್‌ಸ್ಟಾಗ್ರಾಂ ಇನ್‌ಫ್ಲುಯೆನ್ಸರ್‌

’ದಿ ಕೇರಳ ಸ್ಟೋರಿ’ ಚಿತ್ರದ ಟ್ರೇಲರ್‌ ಬಿಡುಗಡೆಯಾಗುತ್ತಲೇ ಎದ್ದಿರುವ ಭಾರೀ ಪರ-ವಿರೋಧದ ಬಿರುಗಾಳಿ ದೇಶಾದ್ಯಂತ ವ್ಯಾಪಿಸಿದೆ.

ಇದೇ ವೇಳೆ ಕೇರಳದ ಇನ್‌ಸ್ಟಾಗ್ರಾಂ ಇನ್‌ಫ್ಲುಯೆನ್ಸರ್‌ ಅತುಲ್ಯಾ ಅಶೋಕನ್ ಮುಸ್ಲಿಂ ಪುರುಷನನ್ನು ಮದುವೆಯಾಗಿ ಇಸ್ಲಾಂಗೆ ಪರಿವರ್ತನೆಗೊಂಡಿದ್ದಾರೆ. ಸದಾ ಹಿಂದೂ ಸಂಪ್ರದಾಯದಂತೆ ಬಟ್ಟೆ ಹಾಕಿಕೊಂಡು, ಬಿಂದಿ ಅಥವಾ ಕುಂಕುಮ ಹಾಕುತ್ತಿದ್ದ ಅತುಲ್ಯಾ ಈಗ ಆಲಿಯಾ ಎಂದು ಹೆಸರು ಬದಲಿಸಿಕೊಂಡು ಹಿಜಾಬ್‌ಧಾರಿಯಾಗಿದ್ದಾರೆ.

ತಾವು ರಿಸಾಲ್ ಮನ್ಸೂರ್‌ ಹೆಸರಿನ ವ್ಯಕ್ತಿಯೊಬ್ಬರನನ್ನು ಮದುವೆಯಾಗಿದ್ದಾಗಿ ಅತುಲ್ಯಾ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ರಿಸಾಲ್ ಮನ್ಸೂರ್‌ ವೆಡ್ಸ್ ಆಲಿಯಾ ಹೆಸರಿನ ವಿವಾಹ ಆಮಂತ್ರಣ ಪತ್ರ ಎಲ್ಲೆಲ್ಲೂ ಸುದ್ದಿಯಲ್ಲಿದೆ.

ಇದೇ ವೇಳೆ, ತಮ್ಮ ಮದುವೆಯ ಅನೇಕ ಚಿತ್ರಗಳನ್ನು ಆಲಿಯಾ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಆಲಿಯಾರ ನಿಖಾದ ಚಿತ್ರಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಬರುತ್ತಿರುವ ಕಾಮೆಂಟ್‌ಗಳು, ಇದು ಲವ್‌ ಸ್ಟೋರಿಯೋ ಅಥವಾ ಮತ್ತೊಂದು ಲವ್‌ ಜಿಹಾದ್‌ ಪ್ರಕರಣವೋ ಎಂದು ಪ್ರಶ್ನಿಸುತ್ತಿವೆ.

“ದಿ ಕೇರಳ ಸ್ಟೋರಿ ಒಂದು ಕಟ್ಟುಕಥೆ ಎನ್ನುವವರಿಗೆ ಇದೊಂದು ನೈಜ ಉದಾಹರಣೆ. ಇಸ್ಲಾಂಗೆ ಮತಾಂತರಗೊಂಡು ಆಲಿಯಾ ಆಗಿರುವ ಕೇರಳದ ಅತುಲ್ಯಾ ಅಶೋಕನ್‌ರನ್ನು ಭೇಟಿ ಮಾಡಿ,” ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.

“ದಿ ಕೇರಳ ಸ್ಟೋರಿ ಒಂದು ಕಾಲ್ಪನಿಕ ಕಥೆ ಎನ್ನುವನ ಜನರು ದಯವಿಟ್ಟು ಅತುಲ್ಯಾ ಅಶೋಕನ್‌ರನ್ನು ಭೇಟಿ ಮಾಡಿ (5+ ಲಕ್ಷ ಅನುಯಾಯಿಗಳು). ಆಕೆಯ ಮದುವೆಯ ಚಿತ್ರಗಳಲ್ಲಿ ಬರೀ ಹಿಂದೂಯೇತರರೇ ಇದ್ದಾರೆ. ಆಕೆಯ ಸ್ನೇಹಿತರಲ್ಲಿ ಬಹುತೇಕರು ಹಿಂದೂಯೇತರರೇ ಆಗಿದ್ದಾರೆ,’’ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.

https://twitter.com/Ram43783584/status/1652206146105782272?ref_src=twsrc%5Etfw%7Ctwcamp%5Etweetembed%7Ctwterm%5E1652206146105782272%7Ctwgr%5E11aa8e08ead9db2aa15e5b0c43420b37384e46df%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fathulya-to-alia-amidst-the-kerala-story-row-kerala-influencer-changes-her-identity-post-nikah-draws-flak

https://twitter.com/kuldeepcet/status/1652591947708792832?ref_src=twsrc%5Etfw%7Ctwcamp%5Etweetembed%7Ctwterm%5E1652591947708792832%7Ctwgr%5E11aa8e08ead9db2aa15e5b0c43420b37384e46df%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fathulya-to-alia-amidst-the-kerala-story-row-kerala-influencer-changes-her-identity-post-nikah-draws-flak

https://twitter.com/BellamSwathi/status/1652181640670756865?ref_src=twsrc%5Etfw%7Ctwcamp%5Etweetembed%7Ctwterm%5E1652181640670756865%7Ctwgr%5E11aa8e08ead9db2aa15e5b0c43420b37384e46df%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fathulya-to-alia-amidst-the-kerala-story-row-kerala-influencer-changes-her-identity-post-nikah-draws-flak

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read