ಗುರುವಾರ ಪುಣೆಯಲ್ಲಿ ನಡೆದ ಏಕದಿನ ಕ್ರಿಕೆಟ್ ವಿಶ್ವಕಪ್ 2023 ರ ರೋಚಕ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ತಂಡವು ಏಳು ವಿಕೆಟ್‌ಗಳ ಜಯ ಸಾಧಿಸಿತು. ಆದರೆ ಪಂದ್ಯಕ್ಕೂ ಮುನ್ನ ಪಾಕಿಸ್ತಾನದ ನಟಿಯೊಬ್ಬರು ಬಾಂಗ್ಲಾದೇಶ, ಭಾರತವನ್ನು ಸೋಲಿಸಿದರೆ ಬಾಂಗ್ಲಾ ತಂಡದ ಸದಸ್ಯರೊಂದಿಗೆ ಡಿನ್ನರ್ ಮಾಡುವುದಾಗಿ ಆಫರ್ ಮಾಡಿದ್ದರು.
ನಟಿ ಸೆಹರ್ ಶಿನ್ವಾರಿ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಬಾಂಗ್ಲಾದೇಶ, ಭಾರತವನ್ನು ಸೋಲಿಸಿದರೆ ಬಾಂಗ್ಲಾದೇಶ ತಂಡದ ಸದಸ್ಯರೊಂದಿಗೆ ಮೀನೂಟವನ್ನು ಮಾಡುವುದಾಗಿ
ಹೇಳಿದ್ದಳು. ಆದರೆ ಆಕೆಯ ನಿರೀಕ್ಷೆ ಹುಸಿಯಾಯಿತು.
ಬಾಂಗ್ಲಾದೇಶ ವಿರುದ್ಧ ಭಾರತ ತಂಡವು ಏಳು ವಿಕೆಟ್‌ಗಳ ಜಯ ಸಾಧಿಸುವ ಮೂಲಕ ವಿಜಯಶಾಲಿಯಾಯಿತು. 257 ರನ್‌ಗಳ ಗುರಿಯನ್ನು ಭಾರತ ಕೇವಲ 41.3 ಓವರ್‌ಗಳಲ್ಲಿ ಯಶಸ್ವಿಯಾಗಿ ಬೆನ್ನಟ್ಟಿದ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ತಮ್ಮ 48 ನೇ ಏಕದಿನ ಶತಕವನ್ನು ಸಾಧಿಸುವ ಮೂಲಕ ಪ್ರಮುಖ ಪಾತ್ರ ವಹಿಸಿದರು.
ಭಾರತದ ವಿಜಯದ ನಂತರ ಪಾಕ್ ನಟಿ ಬಾಂಗ್ಲಾದೇಶ ತಂಡದ ಪ್ರಯತ್ನವನ್ನು ಶ್ಲಾಘಿಸಿ, ಬೆಂಗಾಲಿ ಟೈಗರ್ಸ್ ಚೆನ್ನಾಗಿ ಆಡಿದಿರಿ. ಕನಿಷ್ಠ ಪಕ್ಷ ನೀವು ಭಾರತೀಯ ತಂಡವನ್ನು ಅವರ ತವರು ನೆಲದಲ್ಲಿ ಎದುರಿಸಿದ್ದೀರಿ ಎಂದು ಪೋಸ್ಟ್ ಮಾಡಿದ್ದಾರೆ.
https://twitter.com/SeharShinwari/status/1713466151013929313?ref_src=twsrc%5Etfw%7Ctwcamp%5Etweetembed%7Ctwterm%5E1713466151013929313%7Ctwgr%5Ea53699fd0b16b76f0afe4c25e2f4d3b4b9e11801%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Fasianetnewsable-epaper-dh45a668314cf54d1db4076a42953091e8%2Fatleastyouwhatpakactresswhopromiseddinnerdateifbangladeshbeatindiasaidafterkohlishow-newsid-n548939396
https://twitter.com/SeharShinwari/status/1715041901726806353?ref_src=twsrc%5Etfw%7Ctwcamp%5Etweetembed%7Ctwterm%5E1715041901726806353%7Ctwgr%5Ea53699fd0b16b76f0afe4c25e2f4d3b4b9e11801%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Fasianetnewsable-epaper-dh45a668314cf54d1db4076a42953091e8%2Fatleastyouwhatpakactresswhopromiseddinnerdateifbangladeshbeatindiasaidafterkohlishow-newsid-n548939396
https://twitter.com/BCCI/status/1715038461496033713?ref_src=twsrc%5Etfw%7Ctwcamp%5Etweetembed%7Ctwterm%5E1715038461496033713%7Ctwgr%5Ea53699fd0b16b76f0afe4c25e2f4d3b4b9e11801%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Fasianetnewsable-epaper-dh45a668314cf54d1db4076a42953091e8%2Fatleastyouwhatpakactresswhopromiseddinnerdateifbangladeshbeatindiasaidafterkohlishow-newsid-n548939396
———-