BREAKING NEWS: ಮೊರಾಕ್ಕೋದಲ್ಲಿ 6.8 ತೀವ್ರತೆಯ ಪ್ರಬಲ ಭೂಕಂಪ: ಕನಿಷ್ಠ 93 ಮಂದಿ ಸಾವು

ಮಧ್ಯ ಮೊರಾಕೊದಲ್ಲಿ ಶುಕ್ರವಾರ ತಡರಾತ್ರಿ 6.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಕನಿಷ್ಠ 93 ಜನ ಸಾವನ್ನಪ್ಪಿದ್ದಾರೆ. ಡಜನ್ ಗಟ್ಟಲೆ ಜನ ಗಾಯಗೊಂಡಿದ್ದಾರೆ.

ಸಮೀಪದ ಮರಕೇಶ್‌ನಲ್ಲಿ ಕಟ್ಟಡಗಳು ಅಲುಗಾಡಿವೆ. ಭಯಭೀತರಾದ ನಿವಾಸಿಗಳು ಬೀದಿಗೆ ಬಂದಿದ್ದಾರೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ಹೇಳಿದೆ.

ಆದರೆ, ಅಧಿಕಾರಿಗಳು ಇನ್ನೂ ಹಾನಿಯ ಪ್ರಮಾಣವನ್ನು ಲೆಕ್ಕಾಚಾರ ಮಾಡಬೇಕಾಗಿದೆ.

ಭೂಕಂಪದ ಕೇಂದ್ರಬಿಂದುವು 18.5 ಕಿಮೀ ಆಳದಲ್ಲಿದೆ. ಯುಎಸ್‌ಜಿಎಸ್ ಪ್ರಕಾರ, ಸ್ಥಳೀಯ ಕಾಲಮಾನದ ಪ್ರಕಾರ ರಾತ್ರಿ 11 ಗಂಟೆಯ ನಂತರ ಮರಕೇಶ್‌ನ ನೈಋತ್ಯಕ್ಕೆ 72 ಕಿಮೀ ಮತ್ತು ಅಟ್ಲಾಸ್ ಪರ್ವತ ಪಟ್ಟಣವಾದ ಒಕೈಮೆಡೆನ್‌ನಿಂದ 56 ಕಿಮೀ ಪಶ್ಚಿಮಕ್ಕೆ ಸಂಭವಿಸಿದೆ.

ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ಕೆಲವು ವಿಡಿಯೋಗಳಲ್ಲಿ ಭಯಭೀತರಾದ ಜನ ಶಾಪಿಂಗ್ ಸೆಂಟರ್, ರೆಸ್ಟೋರೆಂಟ್‌ಗಳು ಮತ್ತು ಅಪಾರ್ಟ್ಮೆಂಟ್ ಕಟ್ಟಡಗಳಿಂದ ಓಡಿಹೋಗುವುದನ್ನು ಮತ್ತು ಹೊರಗೆ ಒಟ್ಟುಗೂಡುವುದನ್ನು ತೋರಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read