BREAKING NEWS: ಚಾಡ್ ಸೇನಾ ನೆಲೆ ಮೇಲೆ ಬೊಕೊ ಹರಾಮ್ ಜಿಹಾದಿ ಗುಂಪು ದಾಳಿ: ಕನಿಷ್ಠ 40 ಮಂದಿ ಸಾವು

ಜಿಹಾದಿ ಗುಂಪು ಬೊಕೊ ಹರಾಮ್ ಭಾನುವಾರ ಚಾಡ್ ಮಿಲಿಟರಿ ಘಟಕದ ಮೇಲೆ ದಾಳಿ ಮಾಡಿದ್ದು, ಕನಿಷ್ಠ 40 ಸೈನಿಕರು ಸಾವನ್ನಪ್ಪಿದ್ದಾರೆ. ಅನೇಕರು ಗಾಯಗೊಂಡಿದ್ದಾರೆ.

ನೈಜೀರಿಯಾದ ಗಡಿಗೆ ಸಮೀಪವಿರುವ ಚಾಡ್‌ನ ಸರೋವರ ಪ್ರದೇಶದಲ್ಲಿನ ಸೇನಾ ನೆಲೆಯನ್ನು ಉಗ್ರಗಾಮಿ ಸಂಘಟನೆ ಗುರಿಯಾಗಿಸಿ ದಾಳಿ ಮಾಡಿದೆ ಎಂದು ಸರ್ಕಾರ ಸೋಮವಾರ ತಿಳಿಸಿದೆ.

ಭಾನುವಾರ ತಡರಾತ್ರಿ ಚಾಡ್‌ನ ಪಶ್ಚಿಮ ಪ್ರದೇಶದಲ್ಲಿ 200 ಕ್ಕೂ ಹೆಚ್ಚು ಸೈನಿಕರ ವಸತಿಗೃಹವನ್ನು ಬೊಕೊ ಹರಾಮ್‌ನ ಸದಸ್ಯರು ಗುರಿಯಾಗಿಸಿ ದಾಳಿ ಮಾಡಿದ್ದಾರೆ. ಈ ದಾಳಿ ದುರಂತವಾಗಿ ಪರಿಣಮಿಸಿ ಸುಮಾರು 40 ಜನರನ್ನು ಬಲಿತೆಗೆದುಕೊಂಡಿತು ಎಂದು ಅಧ್ಯಕ್ಷೀಯ ಪ್ರಕಟಣೆ ತಿಳಿಸಿದೆ.

2009 ರಲ್ಲಿ ಈಶಾನ್ಯ ನೈಜೀರಿಯಾದಲ್ಲಿ ಪ್ರಾರಂಭವಾದ ಬೊಕೊ ಹರಾಮ್ ಸಶಸ್ತ್ರ ದಂಗೆಯಲ್ಲಿ 3,50,000 ಕ್ಕಿಂತ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ. ಲಕ್ಷಾಂತರ ಜನರು ತಮ್ಮ ಮನೆಗಳನ್ನು ಬಿಟ್ಟು ಪಲಾಯನ ಮಾಡಬೇಕಾಯಿತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read