ವಿಶ್ವದಾದ್ಯಂತ ಎಲ್ಲಾ ಕೋವಿಶೀಲ್ಡ್ ಲಸಿಕೆ ವಾಪಸ್ ಪಡೆದ ಅಸ್ಟ್ರಾಜೆನಿಕಾ

ನವದೆಹಲಿ: ವಿಶ್ವದಾದ್ಯಂತ ಕೋವಿಶೀಲ್ಡ್ ಎಲ್ಲಾ ಲಸಿಕೆಗಳನ್ನು ಅಸ್ಟ್ರಾಜೆನಿಕಾ ಕಂಪನಿ ವಾಪಸ್ ಪಡೆದುಕೊಂಡಿದೆ. ಲಸಿಕೆ ತಯಾರಿಸುವುದಿಲ್ಲ ಮತ್ತು ಸರಬರಾಜು ಮಾಡುವುದಿಲ್ಲ ಎಂದು ಅಸ್ಟ್ರಾಜೆನಿಕಾ ಕಂಪನಿ ತಿಳಿಸಿದೆ ಲಸಿಕೆ ಹಿಂಡೆದಿರುವುದು ಕಾಕತಾಳಿಯವಷ್ಟೇ. ಅಡ್ಡ ಪರಿಣಾಮದ ಕಾರಣವಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ.

ಅನೇಕ ರೂಪಾಂತರದ ಕೋವಿಡ್ -19 ಲಸಿಕೆಗಳನ್ನು ಅಭಿವೃದ್ಧಿಪಡಿಸಿದ ನಂತರ ಲಭ್ಯವಿರುವ ನವೀಕರಿಸಿದ ಲಸಿಕೆಗಳು ಹೆಚ್ಚುವರಿಯಾಗಿವೆ ಎಂದು ಕಂಪನಿಯು ಹೇಳಿದೆ.

ಇತ್ತೀಚೆಗೆ, ಅಸ್ಟ್ರಾಜೆನಿಕಾ UK ಪ್ರಧಾನ ಕಚೇರಿಯು, ಅತ್ಯಂತ ಅಪರೂಪದ ಸಂದರ್ಭಗಳಲ್ಲಿ ಕೋವಿಡ್ ಲಸಿಕೆಯು ರಕ್ತ ಹೆಪ್ಪುಗಟ್ಟುವಿಕೆ, ಸಂಬಂಧಿತ ಅಡ್ಡ ಪರಿಣಾಮವನ್ನು ಉಂಟುಮಾಡಬಹುದು ಎಂದು ಒಪ್ಪಿಕೊಂಡಿತ್ತು.

ಕೋವಿಡ್ -19 ವಿರುದ್ಧ ರಕ್ಷಿಸಲು ಆಕ್ಸ್‌ ಫರ್ಡ್ ವಿಶ್ವವಿದ್ಯಾಲಯದೊಂದಿಗೆ ಅಭಿವೃದ್ಧಿಪಡಿಸಿದ ಲಸಿಕೆಯು ಅತಿ ಅಪರೂಪದ ಸಂದರ್ಭಗಳಲ್ಲಿ ಥ್ರಂಬೋಸಿಸ್‌ನೊಂದಿಗೆ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್‌ಗೆ ಕಾರಣವಾಗಬಹುದು ಎಂದು ಹೇಳಲಾಗಿದೆ.

ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ತಯಾರಿಸಲ್ಪಟ್ಟ ಅಸ್ಟ್ರಾಜೆನೆಕಾ ವ್ಯಾಕ್ಸ್‌ ಜೆವ್ರಿಯಾ ಲಸಿಕೆಯನ್ನು ಭಾರತದಲ್ಲಿ ಕೋವಿಶೀಲ್ಡ್ ಎಂದು ಮಾರಾಟ ಮಾಡಲಾಯಿತು.

ಕಳೆದ ವಾರ ಕೋವಿಶೀಲ್ಡ್ ಲಸಿಕೆ ಅಡ್ಡ ಪರಿಣಾಮಗಳನ್ನು ಪರೀಕ್ಷಿಸಲು ವೈದ್ಯಕೀಯ ತಜ್ಞರ ಸಮಿತಿಯನ್ನು ರಚಿಸಲು ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.

ಭಾರತದ ಸೀರಮ್ ಇನ್‌ಸ್ಟಿಟ್ಯೂಟ್ ಬಾಲಕಿಯ ಸಾವಿನ ಪ್ರಕರಣದಲ್ಲಿ ಕೋವಿಶೀಲ್ಡ್ ಲಸಿಕೆ ಮೇಲೆ ಮೊಕದ್ದಮೆಯನ್ನು ಎದುರಿಸುತ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read