BIG NEWS: ರಸ್ತೆ ಅಪಘಾತದಲ್ಲಿ ಸಹಾಯಕ ನಿರ್ದೇಶಕ, ನಟ ಶರಣ್ ರಾಜ್ ನಿಧನ

ಸಹಾಯಕ ನಿರ್ದೇಶಕ ಮತ್ತು ಪೋಷಕ ನಟ ಶರಣ್ ರಾಜ್  (Sharan Raj)  ರಸ್ತೆ ಅಪಘಾತದಲ್ಲಿ  ಇಂದು ನಿಧನರಾದರು. ತಮಿಳು ಚಿತ್ರರಂಗದಲ್ಲಿ ನಟನೆ ಮಾತ್ರವಲ್ಲದೇ ಸಹಾಯಕ ನಿರ್ದೇಶಕರಾಗಿ ಅಭಿಮಾನಿಗಳ ಮನ ಗೆದ್ದ ನಟ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ನಟ ಶರಣ್ ರಾಜ್  ಜೂನ್ 8ರಂದು ಬೈಕ್​ನಲ್ಲಿ ತೆರಳುತ್ತಿದ್ದ ವೇಳೆ ಕಾರೊಂದು ನಟನ ಬೈಕ್‌ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗಳಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಶರಣ್ ರಾಜ್ ಅವರ ಪಾರ್ಥಿವ ಶರೀರವನ್ನು (body)  ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, ತಮಿಳಿನಲ್ಲಿ ಪೋಷಕ ನಟರಾಗಿರುವ ಪಳನಿಯಪ್ಪನ್ ಅವರು ಕುಡಿದ ಅಮಲಿನಲ್ಲಿ ಕಾರನ್ನು ಓಡಿಸಿ  ಶರಣ್ ರಾಜ್ ಗೆ ಡಿಕ್ಕಿ ಹೊಡೆದಿದ್ದಾರೆ ಎಂದು ತಿಳಿದುಬಂದಿದೆ. ಆತನನ್ನು ಪೊಲೀಸರು ಬಂಧಿಸಿದ್ದಾರೆ . ಶರಣ್ ರಾಜ್ ‘ವಡಾ ಚೆನ್ನೈ’ (‘Asuran’) ಅಸುರನ್ ಸೇರಿ ಹಲವು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು. ನಟನ ನಿಧನಕ್ಕೆ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read