ರಭಾ ಸಮುದಾಯದ ಈ ವಿಶಿಷ್ಟ ಆಚರಣೆ ಬಗ್ಗೆ ನೀವು ತಿಳಿಯಲೇಬೇಕು

ಅಸ್ಸಾಂನಲ್ಲಿ ರಭಾ ಸಮುದಾಯವು ಕೃಷಿಗೆ ಸಂಬಂಧಿಸಿದ ಸಾಂಪ್ರದಾಯಿಕ ಬೈಖೋ ಹಬ್ಬವನ್ನು ಆಚರಿಸುತ್ತಿದ್ದು, ಈ ಹಬ್ಬವು ಕೆಲವು ವಿಶಿಷ್ಟ ಆಚರಣೆಯ ಶೈಲಿಯನ್ನು ಹೊಂದಿದೆ. ಈ ಹಬ್ಬದ ವೇಳೆ ಬೆಂಕಿಯೊಂದಿಗೆ ಆಟವಾಡಲಾಗುತ್ತದೆ. ಇದು ಹಬ್ಬದ ಆಚರಣೆಯಲ್ಲೊಂದು.

ಆಚರಣೆ ವೇಳೆ ಜನರು ಬೆಂಕಿಯೊಂದಿಗೆ ಆಡುತ್ತಾರೆ, ಕೆಲವರು ಬೆಂಕಿಯಲ್ಲಿ ನೃತ್ಯ ಮಾಡುತ್ತಾರೆ, ಕೆಲವರು ಬರಿ ಪಾದಗಳೊಂದಿಗೆ ಬೆಂಕಿಯ ಮೇಲೆ ನಡೆಯುತ್ತಾರೆ. ಈ ಸಮುದಾಯದ ಜನ ಪ್ರಾಚೀನ ಕಾಲದಿಂದಲೂ ಬೈಖೋ ದೇವಿಯನ್ನು ಪೂಜಿಸುತ್ತಾ ಬಂದಿದ್ದಾರೆ.

ವಿವಿಧ ಆಚರಣೆಗಳನ್ನು ಅನುಸರಿಸಿ ಪ್ರಾರ್ಥನೆ ಸಲ್ಲಿಸುವ ಮೂಲಕ ಬೈಖೋ ದೇವಿಯನ್ನು ಸಮಾಧಾನಪಡಿಸಲು ರಭಾ ಜನರು ಬೆಂಕಿಯ ಮೇಲೆ ನೃತ್ಯ ಮಾಡುತ್ತಾರೆ. ದೇವಿಯ ಆಶೀರ್ವಾದದಿಂದಾಗಿ “ಬೇಬ್ರಾಸ್” (ಈ ನೃತ್ಯವನ್ನು ಪ್ರದರ್ಶಿಸುವ ಎಲ್ಲಾ ಯುವಕರು) ಬೆಂಕಿಯಲ್ಲಿ ಪ್ರದರ್ಶನ ಮಾಡುವಾಗ ಯಾವುದೇ ಹಾನಿಯನ್ನು ಅನುಭವಿಸುವುದಿಲ್ಲ ಎಂದು ಸಮುದಾಯದ ಜನ ನಂಬುತ್ತಾರೆ.

ಬೆಂಕಿಯ ಮೇಲಿನ ಈ ನೃತ್ಯವನ್ನು ರಭಾ ಭಾಷೆಯಲ್ಲಿ “ಬಾರ್ ನಕ್ಕೈ” ಎಂದು ಕರೆಯಲಾಗುತ್ತದೆ. ಈ ಹಬ್ಬವನ್ನು ಕೃಷ್ಣೈ, ಗೋಲ್ಪಾರಾದ ಪಶ್ಚಿಮ ದರ್ಂಗ್‌ನಲ್ಲಿ ಆಚರಿಸಲಾಗುತ್ತದೆ. ಬೈಖೋ ಹಬ್ಬವನ್ನು ರೈತರು ಉತ್ತಮ ಕೃಷಿಗಾಗಿ ಮತ್ತು ರೋಗಗಳನ್ನು ತಪ್ಪಿಸಲು ಮೂಲತಃ ಆಚರಿಸುತ್ತಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read