Shocking News: ಕೆಲಸದ ಒತ್ತಡ ; ಡೆತ್ ನೋಟ್‌ ಬರೆದಿಟ್ಟು ಮಹಿಳಾ ಇಂಜಿನಿಯರ್‌ ಆತ್ಮಹತ್ಯೆ !

ಅಸ್ಸಾಂನ ಲೋಕೋಪಯೋಗಿ ಇಲಾಖೆ (PWD) ಯ 30 ವರ್ಷದ ಸಹಾಯಕ ಎಂಜಿನಿಯರ್ ಜ್ಯೋತಿಶಾ ದಾಸ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮಂಗಳವಾರ ಮಧ್ಯಾಹ್ನ ಅವರ ಬಾಡಿಗೆ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

‘ನಾನು ದಣಿದಿದ್ದೇನೆ’: ಆತ್ಮಹತ್ಯಾ ಪತ್ರದಲ್ಲಿ ಉಲ್ಲೇಖ

ದಾಸ್ ಅವರು ಬರೆದಿಟ್ಟಿರುವ ಪತ್ರದಲ್ಲಿ, ‘ವಂಚನೆಯ ಬಿಲ್‌ಗಳನ್ನು’ ತೆರವುಗೊಳಿಸಲು ಸಹೋದ್ಯೋಗಿಗಳಿಂದ ತೀವ್ರ ಒತ್ತಡವಿತ್ತು ಎಂದು ಆರೋಪಿಸಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಇಬ್ಬರು ಹಿರಿಯ ಅಧಿಕಾರಿಗಳ ಹೆಸರನ್ನು ಮಹಿಳೆ ತನ್ನ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕೈಬರಹದ ಪತ್ರದಲ್ಲಿ, ಅಪೂರ್ಣ ಕಾಮಗಾರಿಗಳ ಬಿಲ್‌ಗಳನ್ನು ಅನುಮೋದಿಸಲು ಇಬ್ಬರು ಹಿರಿಯ ಅಧಿಕಾರಿಗಳು ನಿರಂತರವಾಗಿ ಒತ್ತಡ ಹೇರುತ್ತಿದ್ದರಿಂದ ತೀವ್ರ ಮಾನಸಿಕ ಒತ್ತಡದಲ್ಲಿದ್ದೆ ಎಂದು ಎಂಜಿನಿಯರ್ ಆರೋಪಿಸಿದ್ದಾರೆ.

ಎಂಜಿನಿಯರ್ ಮನೆಯಲ್ಲಿ ಪತ್ತೆಯಾದ ಪತ್ರ

“ಕೆಲಸದ ತೀವ್ರ ಒತ್ತಡದಿಂದ ನಾನು ಈ ಹೆಜ್ಜೆ ಇಡುತ್ತಿದ್ದೇನೆ. ಕಚೇರಿಯಲ್ಲಿ ನನಗೆ ಮಾರ್ಗದರ್ಶನ ನೀಡಲು ಯಾರೂ ಇಲ್ಲ. ನಾನು ದಣಿದಿದ್ದೇನೆ ಮತ್ತು ನನಗೆ ಹೋಗಲು ಬೇರೆಲ್ಲಿಯೂ ಇಲ್ಲ. ನನ್ನ ಹೆತ್ತವರು ನನ್ನ ಬಗ್ಗೆ ಚಿಂತಿತರಾಗಿದ್ದಾರೆ,” ಎಂದು ಆತ್ಮಹತ್ಯಾ ಪತ್ರದಲ್ಲಿ ಬರೆಯಲಾಗಿದೆ.

ಮಹಿಳೆಯ ಕುಟುಂಬವು ಪೊಲೀಸರಿಗೆ ದೂರು ನೀಡಿದ್ದು, ಎಫ್‌ಐಆರ್ ದಾಖಲಿಸಿದೆ. ಆತ್ಮಹತ್ಯಾ ಪತ್ರದ ಆಧಾರದ ಮೇಲೆ, ಇತ್ತೀಚೆಗೆ ಬೊಂಗೈಗಾಂವ್‌ನಲ್ಲಿ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದ ಮತ್ತು ಈಗ ಅಧೀಕ್ಷಕ ಎಂಜಿನಿಯರ್ ಆಗಿ ಬಡ್ತಿ ಪಡೆದಿರುವ ದಿನೇಶ್ ಮೇಧಿ ಶರ್ಮಾ ಮತ್ತು ಪ್ರಸ್ತುತ ಬೊಂಗೈಗಾಂವ್‌ನಲ್ಲಿ ನಿಯೋಜಿಸಲ್ಪಟ್ಟಿರುವ ಉಪವಿಭಾಗಾಧಿಕಾರಿ (SDO) ಅಮಿನುಲ್ ಇಸ್ಲಾಂ ಅವರನ್ನು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಪ್ರಕರಣದ ವಿವರವಾದ ತನಿಖೆಗೆ ಆದೇಶಿಸಿದ್ದಾರೆ. “ನಾವು ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದೇವೆ. ಆರೋಪಿತ ಬಿಲ್‌ಗಳು ತಯಾರಾದ ಕಟ್ಟಡವನ್ನು ಪರಿಶೀಲಿಸಲಾಗುವುದು. ಕೆಲಸದ ವೆಚ್ಚವನ್ನು ನಾವು ಮರುಮೌಲ್ಯಮಾಪನ ಮಾಡುತ್ತೇವೆ” ಎಂದು ಪೊಲೀಸರು ತಿಳಿಸಿದ್ದಾರೆ.


Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read