ಅಸ್ಸಾಂ: 4 ಸಾವಿರಕ್ಕೂ ಅಧಿಕ ಬಾಲ್ಯ ವಿವಾಹ ಪ್ರಕರಣಗಳು ದಾಖಲು

ಅಸ್ಸಾಂನಲ್ಲಿ 4 ಸಾವಿರಕ್ಕೂ ಹೆಚ್ಚು ಬಾಲ್ಯ ವಿವಾಹ ವಿರುದ್ಧ ಪ್ರಕರಣಗಳು ದಾಖಲಾಗಿವೆ ಎಂಬ ಅಂಶ ಬಯಲಾಗಿದೆ. ಖುದ್ದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಹಂಚಿಕೊಂಡ ವರದಿಯ ಪ್ರಕಾರ ಬಾಲ್ಯ ವಿವಾಹದ ವಿರುದ್ಧ ಅಸ್ಸಾಂನಲ್ಲಿ ಒಟ್ಟು 4004 ಪ್ರಕರಣಗಳು ದಾಖಲಾಗಿವೆ.

ಟ್ವಿಟರ್‌ನಲ್ಲಿ ಸಿಎಂ ಶರ್ಮಾ ಅವರು ರಾಜ್ಯಾದ್ಯಂತ ಬಾಲ್ಯವಿವಾಹದ ವಿರುದ್ಧ ದಾಖಲಾದ ಪ್ರಕರಣಗಳ ಡೇಟಾವನ್ನು ಹಂಚಿಕೊಂಡಿದ್ದಾರೆ ಮತ್ತು ರಾಜ್ಯದಲ್ಲಿ ಬಾಲ್ಯ ವಿವಾಹದ ಪಿಡುಗನ್ನು ಕೊನೆಗೊಳಿಸಲು ಸರ್ಕಾರದ ದೃಢ ಸಂಕಲ್ಪವನ್ನು ಖಚಿತಪಡಿಸಿದ್ದಾರೆ.

“ರಾಜ್ಯದಲ್ಲಿ ಬಾಲ್ಯ ವಿವಾಹದ ಪಿಡುಗನ್ನು ಕೊನೆಗಾಣಿಸುವ ಸಂಕಲ್ಪದಲ್ಲಿ ಅಸ್ಸಾಂ ಸರ್ಕಾರವು ದೃಢವಾಗಿದೆ. ಇಲ್ಲಿಯವರೆಗೆ ಅಸ್ಸಾಂ ಪೊಲೀಸ್ ಇಲಾಖೆ ರಾಜ್ಯಾದ್ಯಂತ 4,004 ಪ್ರಕರಣಗಳನ್ನು ದಾಖಲಿಸಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಪೊಲೀಸ್ ಕ್ರಮದ ಸಾಧ್ಯತೆಯಿದೆ.

“ಪ್ರಕರಣಗಳ ಮೇಲಿನ ಕ್ರಮ ಫೆಬ್ರವರಿ 3 ರಿಂದ ಪ್ರಾರಂಭವಾಗುತ್ತದೆ. ಎಲ್ಲರೂ ಸಹಕರಿಸಲು ನಾನು ವಿನಂತಿಸುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.

ಸಿಎಂ ಶರ್ಮಾ ಅವರು ಹಂಚಿಕೊಂಡ ಡೇಟಾವು 370 ಪ್ರಕರಣಗಳೊಂದಿಗೆ ಧುಬ್ರಿ ಜಿಲ್ಲೆಯಲ್ಲಿ ಅತಿ ಹೆಚ್ಚು ಬಾಲ್ಯ ವಿವಾಹ ಪ್ರಕರಣಗಳನ್ನು ಹೊಂದಿದೆ . ಹೋಜೈ 255 ಪ್ರಕರಣಗಳೊಂದಿಗೆ ಮತ್ತು ಉದಲ್ಗುರಿ 235 ಪ್ರಕರಣಗಳೊಂದಿಗೆ ನಂತರದ ಸ್ಥಾನದಲ್ಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read