ಬೆಂಗಳೂರು: ಜೈಲಿನಲ್ಲಿದ್ದ ಉಗ್ರರಿಗೆ ನೆರವು ನೀಡಿದ್ದ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ಎಎಸ್ ಐ ಚಾಂದ್ ಪಾಷಾ, ವಿರುದ್ಧ ಇಲಾಖೆ ತನಿಖೆಗೆ ಆದೇಶ ನೀಡಲಾಗಿದೆ.
ಎನ್ ಐಎ ತನಿಖೆ ವೇಳೆ ಹಲವು ವಿಚಾರಗಳು ಬಯಲಾಗಿದ್ದು, ಪರಪ್ಪನ ಅಗ್ರಹಾರದಲ್ಲಿರುವ ಉಗ್ರ ನಾಸೀರ್ ನನ್ನು ಜೈಲಿನಿಂದ ಎಸ್ಕೇಪ್ ಮಾಡಿಸಲು ಪ್ಲಾನ್ ಮಾಡಿದ್ದರು. ಉಗ್ರರಾದ ಝುನೈದ್, ನಾಸೀರ್ ನನ್ನು ಜೈಲಿನಿಂದ ಹೊರತರಲು ವಿದೇಶದಿಂದ ಪ್ಲಾನ್ ರೆಡಿಯಾಗುತ್ತು ಎನ್ನಲಾಗಿದೆ.
ಉಗ್ರರಿಗೆ ನೆರವು ನೀಡಿದ್ದ ಪ್ರಕರಣದಲ್ಲಿ ಸಿಎಆರ್ ಎ ಎಸ್ ಐ ಚಾಂದ್ ಪಾಷಾ ವಿರುದ್ಧ ತನಿಖೆಗೆ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಆದೇಶ ನೀಡಿದ್ದಾರೆ. ಇಲಾಖಾ ಹಂತದಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.
ಈಗಾಗಲೇ ಎನ್ ಐ ಎ ತನಿಖೆ ನಡೆಸುತ್ತಿದ್ದು, ನಾವೂ ಕೂಡ ತನಿಖೆ ನಡೆಸುತ್ತೇವೆ. ವರದಿ ಬಳಿಕ ಪೊಲೀಸ್ ಇಲಾಖೆ ಕ್ರಮದ ಪ್ರಕಾರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.