ಭಾರತದಲ್ಲಿ ಅತ್ಯಧಿಕ ವಿಕೆಟ್: ಅಶ್ವಿನ್ ದಾಖಲೆ

ರಾಂಚಿ: ಜೆ.ಎಸ್.ಸಿ.ಎ. ಅಂತರರಾಷ್ಟ್ರೀಯ ಕ್ರೀಡಾಂಗಣ ಕಾಂಪ್ಲೆಕ್ಸ್ ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತದ ಅಶ್ವಿನ್ ಐದು ವಿಕೆಟ್ ಗಳಿಸಿದ್ದಾರೆ.

ಆರ್. ಅಶ್ವಿನ್ ತವರಿನಲ್ಲಿ ಆಡಿದ ಟೆಸ್ಟ್ ಗಳಲ್ಲಿ ಅತ್ಯಧಿಕ ವಿಕೆಟ್ ಪಡೆದ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ನ ಮೂರನೇ ದಿನದಾಟದಲ್ಲಿ 51 ರನ್ ಗೆ 5 ವಿಕೆಟ್ ಪಡೆದ ಅಶ್ವಿನ್ ಈ ಮೈಲುಗಲ್ಲು ಸ್ಥಾಪಿಸಿದ್ದಾರೆ. ಇದಕ್ಕೂ ಮೊದಲು ಅನಿಲ್ ಕುಂಬ್ಳೆ 350 ವಿಕೆಟ್ ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರು. ಅಶ್ವಿನ್ 351 ವಿಕೆಟ್ ಗಳಿಸಿದ್ದಾರೆ.

ಟೆಸ್ಟ್ ನಲ್ಲಿ ಅತ್ಯಧಿಕ ಸಲ ಐದು ವಿಕೆಟ್ ಪಡೆದವರ ಪಟ್ಟಿಯಲ್ಲಿ ಆರ್. ಅಶ್ವಿನ್ ಸ್ಥಾನ ಪಡೆದಿದ್ದಾರೆ.

ಮುತ್ತಯ್ಯ ಮುರುಳಿಧರನ್ 67 ಬಾರಿ, ಶೇನ್ ವಾರ್ನ್ 37 ಬಾರಿ, ರಿಚರ್ಡ್ ಹ್ಯಾಡ್ಲಿ 36, ಆರ್. ಅಶ್ವಿನ್ 35, ಅನಿಲ್ ಕುಂಬ್ಳೆ 35 ಬಾರಿ 5 ವಿಕೆಟ್ ಗೊಂಚಲು ಪಡೆದಿದ್ದಾರೆ.

ಟೆಸ್ಟ್‌ ನಲ್ಲಿ ಭಾರತದಲ್ಲಿ ಅತಿ ಹೆಚ್ಚು 5 ವಿಕೆಟ್

ಆರ್. ಅಶ್ವಿನ್ – 35*

ಅನಿಲ್ ಕುಂಬ್ಳೆ – 35

ಹರ್ಭಜನ್ ಸಿಂಗ್ – 25

ಕಪಿಲ್ ದೇವ್ – 23

ಬಿ.ಎಸ್. ಚಂದ್ರಶೇಖರ್ 16 ಸಲ 5 ವಿಕೆಟ್ ಪಡೆದಿದ್ದಾರೆ.

ಕುಂಬ್ಳೆ 132 ಟೆಸ್ಟ್‌ ಗಳಲ್ಲಿ 35 ಸಲ ಐದು ವಿಕೆಟ್‌ಗಳನ್ನು ಗಳಿಸಿದ್ದರೆ, ಅಶ್ವಿನ್ ಇದುವರೆಗೆ ಕೇವಲ 99 ಪಂದ್ಯಗಳನ್ನು ಆಡಿದ್ದಾರೆ.

37 ವರ್ಷದ ಅಶ್ವಿನ್ ಟೆಸ್ಟ್‌ ನಲ್ಲಿ ಎರಡು ದೇಶಗಳ ವಿರುದ್ಧ 100 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಏಕೈಕ ಭಾರತೀಯ ಬೌಲರ್ ಎನಿಸಿಕೊಂಡರು. ಕೇವಲ 22 ಪಂದ್ಯಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ 114 ವಿಕೆಟ್ ಪಡೆದ ಅಶ್ವಿನ್ ರಾಂಚಿಯ ಜಾರ್ಖಂಡ್ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ (ಜೆಎಸ್ಸಿಎ) ಕ್ರೀಡಾಂಗಣದಲ್ಲಿ 100 ವಿಕೆಟ್ ಗಡಿಯನ್ನು ಮುಟ್ಟಿದರು. ಅವರು ಈಗ 23 ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ 104 ವಿಕೆಟ್‌ ಪಡೆದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read