ಮಾಸಿಕ 100 ಯೂನಿಟ್ ವಿದ್ಯುತ್ ಉಚಿತ: 100 ಯೂನಿಟ್ ಮೇಲ್ಪಟ್ಟು ಸಬ್ಸಿಡಿ: ರಾಜಸ್ಥಾನ ಸಿಎಂ ಗೆಹ್ಲೊಟ್ ಘೋಷಣೆ

ಜೈಪುರ್: ಮಾಸಿಕ 100 ಯೂನಿಟ್ ವಿದ್ಯುತ್ ಬಳಸುವವರ ಬಿಲ್ ಶೂನ್ಯವಾಗಿರುತ್ತದೆ. ರಾಜಸ್ಥಾನದಲ್ಲಿ 100 ಯೂನಿಟ್ ವಿದ್ಯುತ್ ಉಚಿತ ಎಂದು ಘೋಷಣೆ ಮಾಡಲಾಗಿದೆ.

ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಬುಧವಾರ ರಾಜ್ಯದ ಜನತೆಗೆ 100 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಘೋಷಿಸಿದ್ದಾರೆ. ಈ ವರ್ಷಾಂತ್ಯದಲ್ಲಿ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಗೆ ಮುನ್ನ ಈ ಘೋಷಣೆ ಹೊರಬಿದ್ದಿದೆ.

ಟ್ವೀಟ್ ಮೂಲಕ ರಾಜಸ್ಥಾನ ಮುಖ್ಯಮಂತ್ರಿ ಗೆಹ್ಲೊಟ್, ಉಚಿತ ವಿದ್ಯುತ್ ನೀಡುವುದಾಗಿ ಘೋಷಣೆ ಮಾಡಿದ್ದು, ಮಾಸಿಕ 100 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಸುವವರಿಗೆ ಸಬ್ಸಿಡಿ ನೀಡಲಾಗುತ್ತದೆ. ಮೊದಲ 100 ಯೂನಿಟ್ ಉಚಿತವಾಗಿ ನೀಡಲಾಗುವುದು. 100 ಯೂನಿಟ್ ಗಿಂತ ಹೆಚ್ಚು ಬಳಸಿದರೆ ಬಿಲ್ ಕಟ್ಟಬೇಕು. ಅಂದರೆ ಮೊದಲ 100 ಯೂನಿಟ್ ವಿದ್ಯುತ್ ಉಚಿತವಾಗಿರುತ್ತದೆ. ಮಧ್ಯಮ ವರ್ಗದ ಜನರು ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಸಿದರೆ ಮೊದಲ 100 ಯೂನಿಟ್ ಉಚಿತವಾಗಿರುತ್ತದೆ. ನಂತರದ 100 ಯೂನಿಟ್ ವಿದ್ಯುತ್ ಬಿಲ್ ಪಾವತಿಸಬೇಕಿದೆ. ವಿದ್ಯುತ್ ಬಳಕೆದಾರರು ಸ್ಥಿರ ಮಾಪನ ಶುಲ್ಕ ಮಾತ್ರ ಪಾವತಿಸಬೇಕು. ಇಂಧನ ಹೆಚ್ಚುವರಿ ಶುಲ್ಕ, ಇತರೆ ಶುಲ್ಕ ಮನ್ನಾ ಮಾಡಲಾಗುವುದು ಎಂದು ತಿಳಿಸಿದ್ದಾರೆ.

https://twitter.com/ashokgehlot51/status/1663961142094626816

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read