ನಾಗಾಲ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ ಅಲಾಂಗ್ ಮತ್ತೊಂದು ಆಸಕ್ತಿದಾಯಕ ಟ್ವೀಟ್ ಅನ್ನು ಪೋಸ್ಟ್ ಮಾಡಿದ್ದಾರೆ, ಇದು ಟ್ರಾಫಿಕ್‌ನಲ್ಲಿ ಸಿಲುಕಿರುವವರಿಗೆ ಪ್ರಮುಖ ಸಂದೇಶವನ್ನು ಹೊಂದಿದೆ.
ಅಲಾಂಗ್ ಅವರು ಟ್ರಾಫಿಕ್ ಕ್ಲಿಯರ್ ಆಗದ ಕಾರಣ ಕಾರಿನಲ್ಲಿ ಕುಳಿತಿರುವುದನ್ನು ಕಾಣಬಹುದು. ಆದರೆ ಅವರು ತಮ್ಮ ಫೋನ್‌ನಲ್ಲಿ ಸಮಯವನ್ನು ಹಾಳು ಮಾಡದೇ ವರ್ಚುವಲ್ ಮೀಟಿಂಗ್‌ನಲ್ಲಿರುವ ಸಮಯವನ್ನು ಬಳಸಿಕೊಳ್ಳುತ್ತಿದ್ದಾರೆ. ಟ್ರಾಫಿಕ್ ಜಾಮ್‌ನಲ್ಲಿ ಸಮಯ ಕಳೆಯಲು ಬಿಜೆಪಿ ನಾಯಕನ ಉತ್ಸಾಹಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.
“ಟ್ರಾಫಿಕ್‌ನಲ್ಲಿ ಸಿಲುಕಿರುವಾಗ ನೀವು ಪ್ರತಿ ಸಲವೂ ಸಮಯ ವ್ಯರ್ಥವಾಯಿತು ಎಂದು ಏಕೆ ಹೇಳುತ್ತೀರಿ? ಸಮಯವನ್ನು ಸದುಪಯೋಗ ಪಡಿಸಿಕೊಳ್ಳಲೂ ಸಾಧ್ಯವಿದೆ. ಅದೂ ಈ ಡಿಜಿಟಲ್ ಯುಗದಲ್ಲಿ ಎಲ್ಲವೂ ಸಾಧ್ಯ ಎಂದು ಸಚಿವರು ಹೇಳಿದ್ದು, ಇದಕ್ಕೆ ಹಲವು ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ. ತ್ರೀ ಇಡಿಯಟ್ಸ್ ಚಿತ್ರದಲ್ಲಿ ಈ ವಾಕ್ಯವನ್ನು ನಾಯಕ ಹೇಳಿದ್ದು, ನಾನಲ್ಲ ಎಂದು ಅವರು ತಮಾಷೆ ಮಾಡಿದ್ದಾರೆ.
ಟ್ವಿಟ್ಟರ್ ಬಳಕೆದಾರರು ಸಚಿವರನ್ನು ಶ್ಲಾಘಿಸಿ ಕಮೆಂಟ್‌ಗಳ ಮಹಾಪೂರವನ್ನೇ ಹರಿಸಿದ್ದಾರೆ. “ಗ್ರೇಟ್ ಸರ್ ಎಂದು ಕಮೆಂಟ್ ಮಾಡುತ್ತಿದ್ದಾರೆ.
https://twitter.com/AlongImna/status/1638415364970381312?ref_src=twsrc%5Etfw%7Ctwcamp%5Etweetembed%7Ctwterm%5E1638415364970381312%7Ctwgr%5E72b2f108bdd6bdb5a1c77fd710a17fcf71ac1079%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fnagaland-minister-temjen-imna-alongs-latest-tweet-quotes-chatur-ramalingam-from-3-idiots-3882672