ಆರ್ಮಿ ರಿಕ್ರೂಟಿಂಗ್ ಆಫೀಸ್ ಬೆಳಗಾವಿ ಹಾಗೂ ಬೆಂಗಳೂರು ಹೆಡ್‌ಕ್ವಾಟರ್ ರಿಕ್ರೂಟಿಂಗ್ ಜೋನ್ ಬೆಂಗಳೂರು ಇವರ ಸಹಯೋಗದಲ್ಲಿ ಭೂಸೇನಾ ನೇಮಕಾತಿಗೆ ಅಗ್ನಿಪಥ ಆನ್‌ಲೈನ್ ರಿಜಿಸ್ಟ್ರೇಶನ್ ಆರಂಭಿಸಿದ್ದು, ಆಸಕ್ತರು ಏಪ್ರಿಲ್ 10 ರೊಳಗೆ ನೊಂದಾಯಿಸಿಕೊಳ್ಳಬೇಕು.
ಜಾಯಿನ್ ಇಂಡಿಯನ್ ಆರ್ಮಿ ವೆಬ್‌ಸೈಟ್ www.joinindianarmy.nic.in ನಲ್ಲಿ ರ‍್ಯಾಲಿ ಮೂಲಕ ಬೆಳಗಾವಿ, ಬೀದರ್, ಕಲುಬುರಗಿ, ಕೊಪ್ಪಳ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳ ಅಭ್ಯರ್ಥಿಗಳ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಅಗ್ನಿವೀರ್ ಜನರಲ್ ಡ್ಯೂಟಿ, ಅಗ್ನಿವೀರ್ ಟೆಕ್ನಿಕಲ್, ಅಗ್ನಿವೀರ್, ಟ್ರೇಡ್ಸ್ ಮನ್ ಗಳಿಗೆ 10ನೇ ತರಗತಿ ಉತ್ತೀರ್ಣರಾಗಿರಬೇಕು.
ಅಗ್ನಿವೀರ್ ಟ್ರೇಡ್ಸ್ ಮನ್‌ಗೆ 8ನೇ ತರಗತಿ ಪಾಸ್ ಆಗಿರಬೇಕು. ಹಾಗೂ ಅಗ್ನಿವೀರ್ ಕ್ಲರ್ಕ್, ಸ್ಟೋರ್‌ಕೀಪರ್ ಟೆಕ್ನಿಕಲ್, ಈ ವರ್ಗಗಳಿಗೆ ಪ್ರವೇಶಕ್ಕೆ ಅವಕಾಶವಿದ್ದು, ವಯೋಮಾನ, ಶೈಕ್ಷಣಿಕ ಅರ್ಹತೆ ಮತ್ತು ಇತರೆ ಮಾಹಿತಿಗಾಗಿ 2025ರ ಮಾರ್ಚ್ 12 ರಂದು ಬೆಳಗಾವಿ ಆರ್ಮಿ ರಿಕ್ರೂಟಿಂಗ್ ಆಫೀಸ್‌ದಿಂದ ಹೊರಡಿಸಿದ ಅಧಿಸೂಚನೆ ವೀಕ್ಷಿಸಬಹುದಾಗಿದೆ ಎಂದು ಡೈರೆಕ್ಟರ್ ರಿಕ್ರೂಟಿಂಗ್ ಕರ್ನಲ್ ಎ.ಕೆ ಉಪಾಧ್ಯಾಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.