ಬ್ರೆಜ಼ಿಲ್‌ನ ದಂತವೈದ್ಯಕೀಯ ಕ್ಲಿನಿಕ್ ಒಂದಕ್ಕೆ ಕನ್ನ ಹಾಕಿ ನುಗ್ಗಿದ ಡಕಾಯಿತರಿಗೆ ತಮ್ಮ ನಿರೀಕ್ಷೆ ಮೀರಿದ ಶಾಕ್ ಒಂದು ಕಾದಿತ್ತು. ದಂತ ವೈದ್ಯರೊಬ್ಬರು ರೋಗಿಯೊಬ್ಬರ ತಪಾಸಣೆ ಮಾಡುತ್ತಿದ್ದ ಸಂದರ್ಭದಲ್ಲಿಯೇ ಡಕಾಯಿತರು ಕ್ಲಿನಿಕ್‌ಗೆ ನುಗ್ಗಿದ್ದಾರೆ.
ಡಕಾಯಿತರ ದುರದೃಷ್ಟಕ್ಕೆ ಸಮವಸ್ತ್ರದಲ್ಲಿ ಇಲ್ಲದ ಪೊಲೀಸ್ ಅಧಿಕಾರಿಯೊಬ್ಬರು ಅದೇ ವೇಳೆ ರೋಗಿಯಾಗಿ ಆಸ್ಪತ್ರೆಗೆ ಬಂದಿದ್ದರು. ಚೂಪಾದ ಕತ್ತಿಗಳನ್ನು ಝಳಪಿಸಿ ಆಸ್ಪತ್ರೆಯಲ್ಲಿದ್ದವರನ್ನು ಹೆದರಿಸುತ್ತಿದ್ದ ಈ ಟೀನೇಜ್ ಡಕಾಯಿತರನ್ನು ಪೊಲೀಸ್ ಅಧಿಕಾರಿ ಹಿಡಿತಕ್ಕೆ ತರುವಲ್ಲಿ ಸಫಲರಾಗಿದ್ದಾರೆ.
ನೆಲದಲ್ಲಿ ಕೂರುವಂತೆ ಪೊಲೀಸ್ ಅಧಿಕಾರಿಗೆ ಹೇಳಿದ ಡಕಾಯಿತರು, ಅವರ ಜೇಬನ್ನು ತಪಾಸಣೆ ಮಾಡಲು ಹೋಗಿ, ಅವರ ಬಳಿ ಇದ್ದ ಗನ್ ಕಂಡಿದ್ದಾರೆ. ಕೂಡಲೇ ಡಕಾಯಿತರೊಂದಿಗೆ ಗುದ್ದಾಟ ನಡೆಸಿದ ಪೊಲೀಸ್ ಅಧಿಕಾರಿಯನ್ನು ನೆಟ್ಟಿಗರು ಶ್ಲಾಘಿಸಿ ಕಾಮೆಂಟ್ ಮಾಡಿದ್ದಾರೆ.
https://twitter.com/TheFigen_/status/1646504865714020353?ref_src=twsrc%5Etfw%7Ctwcamp%5Etweetembed%7Ctwterm%5E1646504865714020353%7Ctwgr%5E72584bf1ef5b5a9cc78dac95d2915bc7e4b5512b%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Farmed-thieves-break-into-dental-clinic-in-brazil-but-a-patient-saves-the-day-old-video-goes-viral-2359850-2023-04-14
https://twitter.com/acalain_mary/status/1646547625812848646?ref_src=twsrc%5Etfw%7Ctwcamp%5Etweetembed%7Ctwterm%5E1646547625812848646%7Ctwgr%5E72584bf1ef5b5a9cc78dac95d2915bc7e4b5512b%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Farmed-thieves-break-into-dental-clinic-in-brazil-but-a-patient-saves-the-day-old-video-goes-viral-2359850-2023-04-14
https://twitter.com/MargaretHunger8/status/1646661622214082560?ref_src=twsrc%5Etfw%7Ctwcamp%5Etweetembed%7Ctwterm%5E1646661622214082560%7Ctwgr%5E72584bf1ef5b5a9cc78dac95d2915bc7e4b5512b%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Farmed-thieves-break-into-dental-clinic-in-brazil-but-a-patient-saves-the-day-old-video-goes-viral-2359850-2023-04-14