ಧೋನಿ ಕಾಲು ಮುಟ್ಟಿ ನಮಸ್ಕರಿಸಿದ ಸಿಂಗರ್; ವಿಡಿಯೋ ವೈರಲ್

ಮಹೇಂದ್ರ ಸಿಂಗ್ ಧೋನಿ ವಿಶ್ವದ ಅತ್ಯಂತ ಪ್ರಭಾವಶಾಲಿ ಮತ್ತು ಖ್ಯಾತ ಕ್ರಿಕೆಟಿಗರಲ್ಲಿ ಒಬ್ಬರು. ಅವರಿಗೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ಸ್ಟಾರ್ ಸಿಂಗರ್ ಅರಿಜಿತ್ ಸಿಂಗ್ ಕೂಡ ಸ್ಟಾರ್ ಕ್ರಿಕೆಟರ್ ಧೋನಿ ಅಭಿಮಾನಿಯಾಗಿದ್ದಾರೆ.

ಶುಕ್ರವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023 ರ ಉದ್ಘಾಟನಾ ಸಮಾರಂಭದಲ್ಲಿ ಗಾಯಕ ಅರಿಜಿತ್ ಸಿಂಗ್ ಧೋನಿಯ ಪಾದಮುಟ್ಟಿ ನಮಸ್ಕರಿಸಿದ್ದಾರೆ.

ಈ ಹೃದಯಸ್ಪರ್ಶಿ ಕ್ಷಣದ ವಿಡಿಯೋ ವೈರಲ್ ಆಗಿದೆ. ಉದ್ಘಾಟನಾ ಪಂದ್ಯದಲ್ಲಿ ಮನರಂಜನಾ ಕಾರ್ಯಕ್ರಮ ನೀಡಿದ ಬಳಿಕ ಅವರಿಬ್ಬರು ಭೇಟಿಯಾದಾಗ ಅರಿಜಿತ್ ಧೋನಿಯ ಪಾದಗಳನ್ನು ಸ್ಪರ್ಶಿಸುತ್ತಿರುವುದನ್ನು ಕಾಣಬಹುದು.

ಉದ್ಘಾಟನಾ ಸಮಾರಂಭದಲ್ಲಿ ಅರಿಜಿತ್ ತಮ್ಮ ಹಿಟ್ ಹಾಡುಗಳ ಮೂಲಕ ಅಭಿಮಾನಿಗಳನ್ನು ರೋಮಾಂಚನಗೊಳಿಸಿದರು. ಅವರೊಂದಿಗೆ ನಟಿಯರಾದ ರಶ್ಮಿಕಾ ಮಂದಣ್ಣ ಮತ್ತು ತಮನ್ನಾ ಭಾಟಿಯಾ ನೃತ್ಯ ಪ್ರದರ್ಶನ ನೀಡಿದರು.

https://twitter.com/Vidyadhar_R/status/1642048541655724033?ref_src=twsrc%5Etfw%7Ctwcamp%5Etweetembed%7Ctwterm%5E1642048541655724033%7Ctwgr%5Ebbed50b8b6c5536883dd2e5d82699443d0875991%7Ctwcon%5Es1_&ref_url=https%3A%2F%2Fsports.ndtv.com%2Fipl-2023%2Farijit-singh-touches-ms-dhonis-feet-before-ipl-game-pic-breaks-internet-3910748

https://twitter.com/Mahiyank_78/status/1641847656409452544?ref_src=twsrc%5Etfw%7Ctwcamp%5Etweetembed%7Ctwterm%5E1641847656409452544%7Ctwgr%5Ebbed50b8b6c5536883dd2e5d82699443d0875991%7Ctwcon%5Es1_&ref_url=https%3A%2F%2Fsports.ndtv.com%2Fipl-2023%2Farijit-singh-touches-ms-dhonis-feet-before-ipl-game-pic-breaks-internet-3910748

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read