91 ವರ್ಷದ ಚಿಕ್ಕಮ್ಮನನ್ನು ಮದುವೆಯಾಗಿದ್ದಾನಂತೆ ಭೂಪ……! ನಿವೃತ್ತಿ ಹಣ ಪಡೆಯಲು ನಡೀತಿದೆ ಹೋರಾಟ

 

Man, 23, marries 91-year-old great-aunt and launches legal fight for her  pension - World News - Mirror Onlineಜನರು ಹಣಕ್ಕಾಗಿ ಏನೆಲ್ಲ ಸುಳ್ಳು ಹೇಳ್ತಾರೆ ಎನ್ನುವುದಕ್ಕೆ ಈ ಪ್ರಕರಣ ಉತ್ತಮ ನಿದರ್ಶನ. ಚಿಕ್ಕಮ್ಮನ ನಿವೃತ್ತಿ ಹಣವನ್ನು ಪಡೆಯಲು ಆಕೆಯನ್ನೇ ಮದುವೆಯಾಗಿರೋದಾಗಿ ವಕೀಲನೊಬ್ಬ ವಾದ ಮಾಡ್ತಿದ್ದಾನೆ. ಘಟನೆ ಅರ್ಜೆಂಟೀನಾದಲ್ಲಿ ನಡೆದಿದೆ.

ಅರ್ಜೆಂಟೀನಾದ 23 ವರ್ಷದ ವಕೀಲ ಮೌರಿಸಿಯೊ ತನ್ನ ಮೃತ 91 ವರ್ಷದ ಚಿಕ್ಕಮ್ಮ ಯೋಲಾಂಡಾ ಟೊರಿಸ್ ಳನ್ನು ತಾನು ವಿವಾಹವಾಗಿದ್ದೆ ಎಂದು ವಾದ ಮಾಡ್ತಿದ್ದಾನೆ. ಫೆಬ್ರವರಿ 2015 ರಲ್ಲಿ ಮೌರಿಸಿಯೋ 91 ವರ್ಷದ ಚಿಕ್ಕಮ್ಮನನ್ನು ವಿವಾಹವಾಗಿದ್ದನಂತೆ. ಏಪ್ರಿಲ್ 2016 ರಲ್ಲಿ ಚಿಕ್ಕಮ್ಮ ಸಾವನ್ನಪ್ಪಿದ್ದಾಳೆ. ಆಕೆ ನಿವೃತ್ತಿ ಹಣ ತನಗೆ ಬೇಕು ಎಂಬುದು ಮೌರಿಸಿಯೋ ಹಠವಾಗಿದೆ.

2009ರಲ್ಲಿ ಮೌರಿಸಿಯೋ ಅಪ್ಪ – ಅಮ್ಮ ಬೇರೆ ಆದ್ಮೇಲೆ ಆತ ತಾಯಿ, ಸಹೋದರಿ, ಅಜ್ಜಿ ಹಾಗೂ ಚಿಕ್ಕಮ್ಮನ ಮನೆಯಲ್ಲಿ ಒಟ್ಟಿಗೆ ವಾಸ ಶುರು ಮಾಡಿದ್ದ. ಅಪ್ಪ – ಅಮ್ಮ ಬೇರೆಯಾದ್ಮೇಲೆ ಕಾನೂನು ಶಿಕ್ಷಣ ನಿಲ್ಲಿಸುವ ನಿರ್ಧಾರಕ್ಕೆ ಬಂದಿದ್ದ ಮೌರಿಸಿಯೋನಿಗೆ ಚಿಕ್ಕಮ್ಮ ಸಹಾಯ ಮಾಡುವುದಾಗಿ ಹೇಳಿದ್ದಳಂತೆ. ಇದೇ ಸಂದರ್ಭದಲ್ಲಿ ಇಬ್ಬರು ಮದುವೆಯಾಗಿದ್ದರಂತೆ. ಮದುವೆಯಲ್ಲಿ ಯಾವುದೇ ಕಾನೂನಿನ ಸಮಸ್ಯೆ ಬರದಿರಲಿ ಎಂದು ಚಿಕ್ಕಮ್ಮ ನಿರ್ಧರಿಸಿದ್ದರಂತೆ. ಮೌರಿಸಿಯೋ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್‌, ದಾಖಲೆಗಳನ್ನು ಪರಿಶೀಲಿಸಿದೆ. ಜೊತೆಗೆ ಅಕ್ಕಪಕ್ಕದವರನ್ನು ವಿಚಾರಿಸಿದೆ. ಆದ್ರೆ ಪಕ್ಕದ ಮನೆಯ ವಾಸಿಗಳು, ಮೌರಿಸಿಯೋ, ಚಿಕ್ಕಮ್ಮನನ್ನು ಮದುವೆಯಾಗಿಲ್ಲ ಎಂದಿದ್ದಾರೆ. ಅವರನ್ನು ಸಾಕ್ಷ್ಯವಾಗಿ ಪರಿಗಣಿಸಿದ ಕೋರ್ಟ್‌ ನಿವೃತ್ತಿ ಹಣ ನೀಡಲು ನಿರಾಕರಿಸಿದೆ. ಸ್ಥಳೀಯ ಕೋರ್ಟ್‌ ನಿರ್ಧಾರವನ್ನು ಪ್ರಶ್ನಿಸಲು ಮೌರಿಸಿಯೋ ನಿರ್ಧರಿಸಿದ್ದಾನೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read