ಕೆಮ್ಮಿನ ಸಮಸ್ಯೆಯಿಂದ ಹೈರಾಣಾಗಿದ್ದೀರಾ….? ಈ ಮನೆ ಮದ್ದನ್ನು ಪ್ರಯತ್ನಿಸಿ ನೋಡಿ

ಒಮ್ಮೆ ಕೆಮ್ಮು ಶುರುವಾಯ್ತು ಅಂದರೆ ಸಾಕು. ಆ ಸಮಸ್ಯೆಯಿಂದ ಪಾರಾಗೋದು ಸ್ವಲ್ಪ ಕಷ್ಟವೇ. ಸಾಕಷ್ಟು ಔಷಧಿಗಳನ್ನ ಸೇವಿಸಿದ ಬಳಿಕವೂ ಕೆಮ್ಮು ವಾಸಿಯಾಗೋದೇ ಇಲ್ಲ. ಆದರೆ ನಿಮ್ಮ ಮನೆಯಲ್ಲೇ ಇರುವ ಕೆಲ ವಸ್ತುಗಳಿಂದ ಮನೆ ಮದ್ದನ್ನ ತಯಾರಿಸುವ ಮೂಲಕ ನೀವು ಈ ಸಮಸ್ಯೆಯಿಂದ ಪಾರಾಗಬಹುದಾಗಿದೆ.

ಕೆಮ್ಮಿನ ಸಮಸ್ಯೆ ಶುರುವಾಯ್ತು ಅಂದರೆ ಸಾಕು ಮೊದಲು ನೆನಪಾಗೋದೇ ಶುಂಠಿ. ಇದಕ್ಕಾಗಿ ನೀವು ಕಾಳು ಮೆಣಸನ್ನ ಹಾಕಿದ ಶುಂಠಿ ಚಹವನ್ನ ಸೇವನೆ ಮಾಡೋದ್ರಿಂದ ಕೆಮ್ಮಿನ ಸಮಸ್ಯೆಯಿಂದ ದೂರಾಗಬಹುದಾಗಿದೆ.

ಜೇನುತುಪ್ಪ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದು ದೇಹದ ಅನೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತೆ. ಅದೇ ರೀತಿ ಜೇನುತುಪ್ಪ ಸೇವನೆಯಿಂದ ಕೆಮ್ಮು ಕೂಡ ಕಡಿಮೆಯಾಗುತ್ತೆ.

ಇದು ಮಾತ್ರವಲ್ಲದೇ ನಿತ್ಯ ಬೆಳಗ್ಗೆ ಎಳುತ್ತಿದ್ದಂತೆಯೇ ಬೆಚ್ಚನೆಯ ನೀರಿಗೆ ಉಪ್ಪನ್ನ ಮಿಶ್ರಣ ಮಾಡಿ ಗಂಟಲಿಗೆ ಗಾರ್ಗಲ್​ ಮಾಡಿ. ಇವೆಲ್ಲದರ ಸಹಾಯದಿಂದ ನೀವು ಕೆಮ್ಮಿನ ಸಮಸ್ಯೆಯಿಂದ ಮುಕ್ತಿ ಹೊಂದಬಹುದಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read