BIG NEWS: ಚೈತ್ರಾ ಕುಂದಾಪುರ ಬಿಜೆಪಿಯವರಲ್ಲ; ಇಂತಹ ಡಮ್ಮಿ ವ್ಯಕ್ತಿಗಳು ಎಲ್ಲಾ ಪಕ್ಷದಲ್ಲಿಯೂ ಇರ್ತಾರೆ; ಶಾಸಕ ಅರವಿಂದ್ ಬೆಲ್ಲದ್


ಹುಬ್ಬಳ್ಳಿ: ಉದ್ಯಮಿಗೆ 5 ಕೋಟಿ ವಂಚನೆ ಪ್ರಕರಣದಲ್ಲಿ ಬಂಧಿತರಾಗಿರುವ ಚೈತ್ರಾ ಕುಂದಾಪುರ ಬಿಜೆಪಿಯವರೇ ಅಲ್ಲ. ಇಂತಹ ಡಮ್ಮಿ ವ್ಯಕ್ತಿಗಳು ಎಲ್ಲಾ ಪಕ್ಷದಲ್ಲಿಯೂ ಇರುತ್ತಾರೆ ಎಚ್ಚರವಾಗಿರಬೇಕು ಎಂದು ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಅರವಿಂದ್ ಬೆಲ್ಲದ್, ಚೈತ್ರಾ ಕುಂದಾಪುರ ಬಿಜೆಪಿಯವರಲ್ಲ, ಪಕ್ಷದ ಸಿದ್ಧಾಂತಗಳ ಬಗ್ಗೆ ಮಾತನಾಡಿದ ತಕ್ಷಣ ಬಿಜೆಪಿಯವರಾಗಲ್ಲ. ಇವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಯಾವ ರಾಜಕೀಯ ಪಕ್ಷವೂ ಇಂತಹ ಟೋಪಿಹಾಕುವವರನ್ನು ಬೆಳೆಸಲ್ಲ ಎಂದರು.

ಚೈತ್ರಾ ಕುಂದಾಪುರ ಅಂತವರು ಎಲ್ಲಾ ಪಕ್ಷದಲ್ಲಿಯೂ ಇರುತ್ತಾರೆ. ದುಡ್ಡು ಮಾಡೋದು, ಜನರಿಗೆ ಮೋಸ ಮಾಡೋದೆ ಅವರ ಕೆಲಸ. ಇದು ಮೊದಲ ಘಟನೆ ಅಲ್ಲ. ಮೋಸ ಹೋಗುವವರು ಇರುವವರೆಗೂ ಇದು ಕೊನೆಯಾಗಲ್ಲ ಎಂದರು.

ಎಲ್ಲೆಲ್ಲೋ ದುಡ್ಡು ಮಾಡಿದವರು ರಾಜಕೀಯ ಹೇಗೆ ಮಾಡಬೇಕು ಎಂಬುದು ಗೊತ್ತಿಲ್ಲದವರು ಈ ರೀತಿ ಮೋಸ ಹೋಗ್ತಾರೆ ಎಂದು ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read